Categories
ತೀರ್ಥಹಳ್ಳಿ ಸಿನಿಮಾ

ಕನ್ನಡದಲ್ಲಿ ಭರವಸೆ ಮೂಡಿಸಿದ ವೇಷ ಸಿನಿಮಾ!

ಕನ್ನಡದಲ್ಲಿ ಭರವಸೆ ಮೂಡಿಸಿದ ವೇಷ ಸಿನಿಮಾ!
– ಕರಾವಳಿ, ಮಲೆನಾಡು ಕಲಾವಿದರ ನಟನೆ
– ರಾಘು ನಾಯಕ, ಸೌಖ್ಯ, ನೇಹಾ ಗೌಡ ನಾಯಕಿಯಾಗಿ ನಟನೆ
– ತೀರ್ಥಹಳ್ಳಿ ಸುತ್ತಮುತ್ತ ಶೂಟಿಂಗ್: ಅನೇಕ ಕಲಾವಿದರ ನಟನೆ

NAMMUR EXPRESS NEWS
ತೀರ್ಥಹಳ್ಳಿ: ಕರಾವಳಿ ಹಾಗೂ ಮಲೆನಾಡು ಮೂಲದ ನಟ ನಟಿಯರು ನಟನೆ ಮಾಡಿರುವ ಕನ್ನಡದ ಸಿನಿಮಾ ವೇಷ ರಾಜ್ಯದ ಅನೇಕ ಚಿತ್ರಮಂದಿರದಲ್ಲಿ ತೆರೆ ಕಂಡಿದೆ. ಹೆಬ್ರಿಯ ರಾಘವೇಂದ್ರ ನಾಯಕರಾಗಿ ನಟನೆ ಮಾಡಿರುವ ತೀರ್ಥಹಳ್ಳಿ ಬೆಜ್ಜವಳ್ಳಿ ಕುಕ್ಕೆ ಸೌಖ್ಯ ಗೌಡ ಅವರು ನಾಯಕಿಯಾಗಿ ಮತ್ತು ನೇಹಾ ಗೌಡ ಶಾಂತವೇರಿ ನಟಿಸಿದ್ದಾರೆ. ತೀರ್ಥಹಳ್ಳಿಯ ಹಲವು ಕಲಾವಿದರು ನಟಿಸಿ ಮಲೆನಾಡ ಸುತ್ತ ಮುತ್ತಲೇ ಚಿತ್ರೀಕರಣಗೊಂಡಿರುವ “ವೇಷ” ಚಲನಚಿತ್ರ ಬುಧವಾರ ಬೆಳಿಗ್ಗೆ 9.00 ಘಂಟೆಗೆ ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ ವಿಶೇಷ ಸಮಯದಲ್ಲಿ ಪ್ರದರ್ಶನ ಕಂಡಿದೆ.

ತೀರ್ಥಹಳ್ಳಿಯ ಪತ್ರಕರ್ತ ಡಾನ್ ರಾಮಣ್ಣ ಶೆಟ್ಟಿ, ಟಿವಿ ನಿರೂಪಕಿ ಸುರಭಿ ರಾಜೇಂದ್ರ ಸೇರಿದಂತೆ ಅನೇಕರು ನಟನೆ ಮಾಡಿದ್ದಾರೆ. ಈಗಾಗಲೇ ಕನ್ನಡ ಸಿನಿ ಲೋಕದಲ್ಲಿ ಕರಾವಳಿ ಮತ್ತು ಮಲೆನಾಡ ಮೂಲದವರ ಯಶಸ್ಸಿನ ನಡುವೆ ಈ ಸಿನಿಮಾ ತೆರೆಗೆ ಬಂದಿದ್ದು, ಹೊಸ ಭರವಸೆ ಮೂಡಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.