ಸುಶೀಲಾ ಶೆಟ್ಟಿ ಎಂಬ ಜನಪರ ನಾಯಕಿ..!
– ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ, ಮಹಿಳಾ ನಾಯಕಿಯಾಗಿ ಸೇವೆ: ಹುಟ್ಟು ಹಬ್ಬದ ಶುಭಾಶಯಗಳು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷೆ, ಸಮಾಜ ಪರ ನಾಯಕಿ, ಸಂಘಟಕಿ ಸುಶೀಲಾ ಶೆಟ್ಟಿ ಅವರು ತೀರ್ಥಹಳ್ಳಿಯ ಸಾಧಕರಲ್ಲಿ ಒಬ್ಬರಾಗಿದ್ದಾರೆ. ಪಿಗ್ಮಿ ಕಲೆಕ್ಟರ್ ಆಗಿ ತಮ್ಮ ಜೀವನದ ಪಯಣವನ್ನು ಆರಂಭಿಸಿರುವ ಸುಶೀಲಾ ಶೆಟ್ಟಿ ಹಲವು ಸಂಘ ಸಂಸ್ಥೆಗಳಿಗೆ ತಮ್ಮದೇ ಆದ ಸೇವೆಯನ್ನು ನೀಡಿದ್ದಾರೆ. ಸಂಘಟನೆಯ ಸಂಘ ಸಂಸ್ಥೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೆ ತೀರ್ಥಹಳ್ಳಿಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇದೀಗ ಕಳೆದ ವರ್ಷದಲ್ಲಿ ನೆಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವನ್ನು ಸಾಧಿಸಿದ್ದಾರೆ. ಬಳಿಕ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ. ತಮ್ಮ ಅಧ್ಯಕ್ಷ ಅವಧಿಯಲ್ಲಿ ಅನೇಕ ಸಮಾಜ ಪರ, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಿದರು. ಬುಧವಾರ ಹುಟ್ಟುಹಬ್ಬದಂದು ಅನೇಕ ಅವರ ಸ್ನೇಹಿತರು ಶುಭಾಶಯವನ್ನು ಕೋರಿದರು.
ತೀರ್ಥಹಳ್ಳಿ ಮಹಿಳಾ ಸಹಕಾರಿ ಸಂಘದ ನಿರ್ದೇಶಕರಾಗಿ ವಿವಿಧ ಸಂಘ ಸಂಸ್ಥೆಯಲ್ಲಿ ರಾಮೇಶ್ವರ ದೇವಸ್ಥಾನ ಸಮಿತಿಯ ಸದಸ್ಯರಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಅನೇಕರು ಗೌರವಿಸಿದ್ದಾರೆ. ಭವಿಷ್ಯದಲ್ಲಿ ಉತ್ತಮ ನಾಯಕಿಯಾಗುವ ಎಲ್ಲಾ ರಂಗಗಳಲ್ಲೂ ತಮ್ಮನ್ನ ತೊಡಗಿಸಿಕೊಳ್ಳುವ ಆಶಾಭಾವ ಹೊಂದಿರುವ ಸುಶೀಲಾ ಶೆಟ್ಟಿ ಅವರಿಗೆ ಶುಭಾಶಯಗಳು.
