6ನೇ ಜಾಗದಲ್ಲಿ ಅಸ್ತಿ ಪಂಜರ ಪತ್ತೆ!.. ಇದೀಗ ಮತ್ತೊಂದು ಸಸ್ಪೆನ್ಸ್!
– ಧರ್ಮಸ್ಥಳ ವಿವಾದದಲ್ಲಿ ಅನಾಮಿಕನೇ ಕಳ್ಳ ಎಂದ ಗ್ರಾಪಂ ಅಧ್ಯಕ್ಷ
– ಚಿನ್ನ, ವಸ್ತು ದೋಚಿ ಈಗ ನಾಟಕ: ಹೆಚ್ಚಿದ ಕುತೂಹಲ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸುಳ್ಳೋ ಸತ್ಯವೋ ಎಂಬ ನೂರಾರು ಚರ್ಚೆ, ಎಸ್ ಐ ಟಿ ತನಿಖೆ ನಡುವೆ ಇದೀಗ 6ನೇ ಜಾಗದಲ್ಲಿ ಅಸ್ತಿ ಪಂಜರ ಪತ್ತೆ ಆಗಿದೆ.
ಮತ್ತೊಂದು ಕುತೂಹಲಕಾರಿ ಬೆಳವಣಿಗೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹಾಗೂ ಪ್ರಸ್ತುತ ವಕೀಲರಾಗಿರುವ ಕೇಶವ ಗೌಡ ಅವರು ನೀಡಿರುವ ಹೇಳಿಕೆ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಅನಾಮಿಕ ವ್ಯಕ್ತಿ ಯಾರು ಎನ್ನುವುದು ಇಡೀ ಧರ್ಮಸ್ಥಳಕ್ಕೆ ಈಗ ಗೊತ್ತಾಗಿದೆ. ಆತ ನಟೋರಿಯಸ್ ಕೆಲಸ ಮಾಡಿದ್ದರಿಂದ, ಕ್ಷೇತ್ರದಿಂದಲೇ ಉಚ್ಚಾಟನೆಯಾಗಿದ್ದ. ಸಾವಿರಾರು ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದರು, ಅನೇಕ ಸಮಸ್ಯೆಗಳಿಂದ ನೊಂದಿದ್ದ ಅವರು ಇಲ್ಲಿ ತಮ್ಮ ಜೀವನವನ್ನು ಅಂತ್ಯ ಮಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಶವವನ್ನು ಸಂಸ್ಕಾರ ಮಾಡುವುದೇ ಬಹಳ ಕಷ್ಟಕರ ವಿಚಾರವಾಗಿತ್ತು. ಅನಾಮಿಕ ವ್ಯಕ್ತಿಯು ಶವವನ್ನು ಸಂಸ್ಕಾರ ಮಾಡುವ ಸಂದರ್ಭದಲ್ಲಿ, ತೀರಿಕೊಂಡವರ ಬಳಿ ಇದ್ದ ಹಣ ಒಡವೆಗಳನ್ನು ಕದಿಯುತ್ತಿದ್ದ. ಹೀಗಾಗಿ 2014 ರಿಂದ ಅನಾಮಿಕ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಸಂಗತಿಗಳ ಹಿಂದೆ ಒಬ್ಬ ವ್ಯಕ್ತಿಯ ಕೈವಾಡವಿದ್ದು, ಅದು ಯಾರು ಎನ್ನುವುದು ಚೆನ್ನಾಗಿ ಗೊತ್ತಿದೆ. ಕ್ಷೇತ್ರದ ಮೇಲೆ ಆರೋಪ ಹೊರೆಸುವವರಿಗೆ ದೇವರು ತಕ್ಕ ಪಾಠವನ್ನು ಕಲಿಸುತ್ತಾನೆ ಎನ್ನುವ ಮಾತುಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.