ಬೆಳ್ತಂಗಡಿ: ಕಪಿಲೆಯ ರೌದ್ರಾವತಾರ..!
– ದೇವಾಲಯವನ್ನು ಸುತ್ತುವರಿದ ನದಿ ನೀರು
– ಕರಾವಳಿಯಲ್ಲಿ ಮಳೆ ಅಬ್ಬರ: ದೇಗುಲಗಳಿಗೆ ಜನ ಕಡಿಮೆ
NAMMUR EXPRESS NEWS
ಬೆಳ್ತಂಗಡಿ ತಾಲ್ಲೂಕಿನ ಪುಣ್ಯ ಕ್ಷೇತ್ರವಾದ ಶಿಶಿಲ ಈಗ ಎಂದಿನಂತಿರದೇ ನೀರಿನ ನಡುವೆ ನಿರ್ಮಿಸಲ್ಪಟ್ಟ ದೇವಾಲಯದಂತಾಗಿದೆ. ಕಾರಣ ಜೂನ್ 25ರ ಬುಧವಾರದಂದು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕಪಿಲಾ ನದಿಯು ತುಂಬಿ ಅಪಾಯದ ಮಟ್ಟ ತಲುಪಿದೆ. ನದಿಗೆ ಸಮೀಪದಲ್ಲೇ ಕಟ್ಟಿದ ವೆಂಟೆಡ್ ಅಣೆಕಟ್ಟು ಕೂಡ ಮುಳುಗಡೆಯಾಗಿರುವ ಪರಿಣಾಮ ಕಪಿಲೆಯು ರೌದ್ರ ನರ್ತನ ಮಾಡುತ್ತಾ ಶಿಶಿಲ ದೇವಾಲಯವನ್ನು ಆವರಿಸಿದ್ದಾಳೆ.ಇದೇ ರೀತಿ ಮಳೆ ಮುಂದುವರಿದರೆ ಮುಂದಿನ ಪರಿಸ್ಥಿತಿ ಏನು ಎಂಬ ಚಿಂತೆ ಸುತ್ತಮುತ್ತಲಿನ ಜನರಲ್ಲಿ ಮನೆಮಾಡಿದೆ.
ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಭಕ್ತರ ಸಂಖ್ಯೆ ಕೂಡ ಕಡಿಮೆ ಆಗಿದೆ. ಧರ್ಮಸ್ಥಳ, ಉಡುಪಿ, ಕೊಲ್ಲೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.
