ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಜೆಸಿಐನಿಂದ ವಿನೂತನ ಕಾರ್ಯಕ್ರಮ
* “ಜ್ಞಾನ ಪುಷ್ಪ” ಕಲೆ-ಸಾಹಿತ್ಯ-ಸಂಸ್ಕೃತಿ ಕುರಿತ ಉಪನ್ಯಾಸ ಕಾರ್ಯಕ್ರಮ
* ತಾಲೂಕಿನಾದ್ಯಂತ ತಿಂಗಳಿಗೊಂದು ಶಾಲೆಯಲ್ಲಿ ಕಾರ್ಯಕ್ರಮ – ಡಾ.ಮೋಹನ್ ರಾಜಣ್ಣ
NAMMMUR EXPRESS NEWS
ಮೂಡಿಗೆರೆ: ಭಗವಂತನ ಸೃಷ್ಠಿಯಲ್ಲಿ ನಾವೆಲ್ಲರೂ ವಿಭಿನ್ನರು ನಮ್ಮಲ್ಲಿರುವ ವಿಶೇಷತೆಯನ್ನು ಅರಿತು ಕಾಯಕವೇ ಕೈಲಾಸ ಎಂಬುದನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಶಿಕ್ಷಣ ಒಂದು ತಪಸ್ಸು ಇದ್ದಂತೆ ಅದನ್ನು ಸಾಧಿಸುವ ಶ್ರೇಷ್ಠ ಮಕ್ಕಳೆನಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯನಿರ್ವಾಹಕ ನಿರ್ದೇಶಕ. ಎಂ.ಆರ್.ಪೂರ್ಣೇಶ್ ಮೂರ್ತಿ ಹೇಳಿದರು.
ಇಂದು ಗೋಣಿಬೀಡು ಹೊಯ್ಸಳ ಪ್ರೌಢ ಶಾಲೆ ಸಭಾಂಗಣದಲ್ಲಿ
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಗೋಣಿಬೀಡು,ಮೂಡಿಗೆರೆ ತಾಲ್ಲೂಕು ಹಾಗೂ ಜೇಸಿಐ ಗೋಣಿಬೀಡು ಹೊಯ್ಸಳ
ಅರ್ಪಿಸುವ “ಜ್ಞಾನ ಪುಷ್ಪ ”
ಕಲೆ- ಸಾಹಿತ್ಯ- ಸಂಸ್ಕೃತಿ
ಕಾರ್ಯಕ್ರಮ ಮಾಲಿಕೆ-1ಯನ್ನು ಉದ್ಘಾಟಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ “ಯಶಸ್ಸಿನ ಮುನ್ನಡೆಗೆ ಸ್ಫೂರ್ತಿಯ ಮುನ್ನುಡಿ” ಎಂಬ ವಿಷಯದ ಬಗ್ಗೆ
ಉಪನ್ಯಾಸವನ್ನು ಶ್ರೀ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ,
ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲ್ಲೂಕು ಇವರು ನೀಡಿದರು.ಮಕ್ಕಳಲ್ಲಿ ಶ್ರೇಷ್ಠ ಚಿಂತೆನೆ ಸುಸಂಸ್ಕೃತ ನಡವಳಿಕೆ ಪ್ರಕೃತಿ-ವಿಶ್ವವನ್ನು ಅರಿಯುವ ಪ್ರೇರಣೆಯ ಬೀಜವನ್ನು ಬಿತ್ತಿ ನೀರೇರೆದು ಪೋಶಿಸುವ ಕಾರ್ಯ ವಿದ್ಯಾರ್ಜನೆಯಿಂದಷ್ಟೇ ಸುಲಭ ಸಾಧ್ಯ,ಸಂತೋಷಕ್ಕೆ ಸಮನಾದ ಸುಖವಿಲ್ಲಾ, ಶಾಂತಿಗೆ ಸಮನಾದ ತಪಸ್ಸಿಲ್ಲ ವಿದ್ಯೆಗಿಂತ ಸಮನಾದ ಸಂಪತ್ತಿಲ್ಲ ಎಂದು ಹಾಗೂ ಮಂಕುತಿಮ್ಮನ ಕಗ್ಗದ ಬಗ್ಗೆ ತುಂಬಾ ಅದ್ಭುತವಾಗಿ ತಿಳಿಸಿದರು.
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಪ್ರಸ್ತಾವಿಕವಾಗಿ ಮಾತನಾಡಿ
ನಮ್ಮ ದೇಶದ ಕಲೆಯ ಸಾಹಿತ್ಯ ಸಂಸ್ಕೃತಿ, ಜ್ಞಾನ-ವಿಜ್ಞಾನಾದಿ ಸಂಪದಗಳು ಜಗತ್ತಿಗೆ ಆದರ್ಶ ಪ್ರಾಯವಾದದ್ದು,ಅರೋಗ್ಯವಂತ ದೈಹಿಕ ಬೆಳವಣಿಗೆ ಭೌದಿಕ ಪ್ರೌಡಿಮೆ ಮತ್ತು ಭಾವನಾತ್ಮಕ ವಿಕಾಸಕ್ಕೆ ನೆರವಾಗುವ ಶಿಕ್ಷಣವೇ ಉತ್ತಮವಾದ ಶಿಕ್ಷಣ. ನಮ್ಮ ಕಲೆ ಸಾಹಿತ್ಯ ಸಂಸ್ಕೃತಿ ಪರಂಪರೆಯ ಬಗ್ಗೆ ಆಸಕ್ತಿ ಮತ್ತು ಅಭಿಮಾನವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಅಪೇಕ್ಷಣೀಯವಾದುದು. ಶಿಕ್ಷಣ -ಸಂಸ್ಕಾರ ಮತ್ತು ಸಂಸ್ಕೃತಿಗೆ ಅವಿನಾಭಾವ ನಂಟು ಉಂಟು.ಕಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯವಾಗಿದ್ದು, ಮೌಲ್ಯಗಳನ್ನು ಆದರ್ಶಗಳನ್ನು ಶಾಶ್ವತವಾಗಿ ಸೆರೆ ಹಿಡಿದಿಡುವ ಮಾಧ್ಯಮವೂ ಆಗಿದೆ ಪರಿವರ್ತನಾ ಶೀಲಾವಾದ ಪ್ರಪಂಚದಲ್ಲಿ ಎದುರಾಗುವ ಸಮಸ್ಯೆಗಳನ್ನು ಆತ್ಮಸ್ಥೈರ್ಯದಿಂದ ನಿಭಾಯಿಸುವ ಶಕ್ತಿ. ಚೈತನ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಅನಿವಾರ್ಯವಲ್ಲವೇ? ಶರೀರ, ಮನಸ್ಸು ಮತ್ತು ಪ್ರಜ್ಞೆಯ ಎಲ್ಲಾ ಅರೋಗ್ಯಕರ ಅಂಶಗಳ ಸಮತೋಲನ ಬೆಳವಣಿಗೆ ಪ್ರಸ್ತುತ ಅತ್ಯಗತ್ಯವಾಗಿದೆ ಎಂದರು.
ಹೊಯ್ಸಳ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾದ ಶ್ರೀಮತಿ ವೇಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮನೋಸ್ಥೈರ್ಯ ನಮ್ಮಲ್ಲಿರಬೇಕು ತಮ್ಮ ಸಾಧನೆಯನ್ನು ಹೆತ್ತವರ ಪಾದಗಳಿಗೆ ಅರ್ಪಿಸಿ ಅದರಿಂದ ಸಿಗುವ ಪರಮ ಸುಖ ವನ್ನು ಅನುಭವಿಸಿರುವ ಶ್ರೇಷ್ಠ ಸತ್ಪ್ರಜೆಗಳಾಗಿ ಎಂದರು.
ಈ ಸಂದರ್ಭದಲ್ಲಿ ಹೊಯ್ಸಳ ಪ್ರೌಢಶಾಲೆಯ ವಿದ್ಯಾರ್ಥಿ ಕು.ರಕ್ಷಾ ಇವರು ರಾಷ್ಟ್ರಿಯ ಮೆರಿಟ್ ವಿದ್ಯಾರ್ಥಿವೇತನ ಪಡೆದಿದ್ದು ಇವರಿಗೆ ಸನ್ಮಾನಿಸಲಾಯಿತು.
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಉಮಾ ಮೋಹನ್,ಗೌರವ ಟ್ರಸ್ಟಿ ಸಿ. ಸಿ. ರಾಜಣ್ಣ,ಟ್ರಸ್ಟಿಗಳಾದ ಬಾಂಧವ್ಯ ಡಿಂಪಲ್,ಶಿಕ್ಷರಾದ ಕು.ದರ್ಶಿನಿ,ಚಂದ್ರಶೇಖರಬಾಬು,ಶಿವಕುಮಾರ್,ಜಗನ್ನಾಥ್,ಮಗ್ಗಲಕ್ಕಿ ಗಣೇಶ್ ಗೌಡ,ಗಾಯಕ ಬಕ್ಕಿ ಮಂಜುನಾಥ್,ಗೋಣಿಬೀಡು ಹೋಬಳಿ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷೆ ದೀಪಿಕಾ,
ಪ್ರಧಾನ ಕಾರ್ಯದರ್ಶಿ ಆಶಾ ಜಯಕುಮಾರ್, ಪ್ರೇಮ, ಪ್ರಭಾಕರ್ ಶೆಟ್ಟಿ,
ಜೇಸಿಐ ಸರ್ವ ಸದಸ್ಯರು,
ಹಳೇ ವಿದ್ಯಾರ್ಥಿಗಳು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ಅಧ್ಯಕ್ಷರಾದ ಬಿ ಎಂ ಜಗತ್ ಸ್ವಾಗತಿಸಿ,ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು. ಕು.ಆಶಿಕಾ ಕಾರ್ಯಕ್ರಮ ನಿರೂಪಿಸಿದರು.
