Categories
ಡೆಲ್ಲಿ

ಪಾಕ್ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಭಾರತಕ್ಕೆ ವಾಪಸ್

ಪಾಕ್ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಭಾರತಕ್ಕೆ ವಾಪಸ್

* ಅಕಾಸ್ಮಾತ್ ಪಾಕ್ ಗಡಿ ಪ್ರವೇಶಿಸಿದ್ದ ಯೋಧ ಪೂರ್ಣಂ ಸಾಹು
* ಅಟ್ಟಾರಿ-ವಾಘಾ ಗಡಿಯಲ್ಲಿ ಶಿಷ್ಟಾಚಾರದೊಂದಿಗೆ ಹಸ್ತಾಂತರ

NAMMMUR EXPRESS NEWS
ಪಂಜಾಬ್: ಕಳೆದ ಏಪ್ರಿಲ್ 23 ರಂದು ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ ರೇಖೆಯನ್ನು ದಾಟಿದ್ದರಿಂದ ಪಾಕಿಸ್ತಾನದ ಸೇನೆ ವಶಕ್ಕೆ ಪಡೆದಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಪೂರ್ಣಂ ಸಾಹು ಅವರನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸಿದೆ.
ಪಂಜಾಬ್‌ನ ಅಟ್ಟಾರಿ-ವಾಘಾ ಗಡಿ ಮುಂಭಾಗದಲ್ಲಿ ಈ ಹಸ್ತಾಂತರ ಪ್ರಕ್ರಿಯೆ ನಡೆದಿದೆ ಎಂದು ಸೇನಾಪಡೆ ತಿಳಿಸಿದೆ.
ಬಿಎಸ್‌ಎಫ್ ವಕ್ತಾರರು ಮಾಹಿತಿ ನೀಡಿದ ಪ್ರಕಾರ, ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ಪಾಕಿಸ್ತಾನದ ರೇಂಜರ್‌ಗಳು ಯೋಧ ಪೂರ್ಣಂ ಸಾಹು ಅವರನ್ನು ಬಿಎಸ್‌ಎಫ್ ಅಧಿಕಾರಿಗಳಿಗೆ ಒಪ್ಪಿಸಿದರು. ಈ ಹಸ್ತಾಂತರವು ಶಾಂತಿಯುತವಾಗಿ ಮತ್ತು ಉಭಯ ದೇಶಗಳ ಶಿಷ್ಟಾಚಾರಗಳಿಗೆ ಅನುಗುಣವಾಗಿ ನೆರವೇರಿತು ಎಂದು ಅವರು ತಿಳಿಸಿದ್ದಾರೆ.
ಫಿರೋಜ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ, ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಒಂದು ದಿನದ ನಂತರ, ಅಂದರೆ ಏಪ್ರಿಲ್ 23ರಂದು ರೇಂಜರ್‌ಗಳು ಪೂರ್ಣಂ ಸಾಹು ಅವರನ್ನು ಬಂಧಿಸಿದ್ದರು. ಇದೀಗ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.