Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರುರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ನಿಧಾನವಾಗಿ ಹೋಗುವವರು ನಿಮಗೆ ಅವಕಾಶ ಕೊಡಬಹುದು, ಆದರೆ ಅಪಾಯವನ್ನು ತಿಳಿಸಲಾರರು. ನಿಮಗೆ ಇಂದು ಅಪರೂಪದ ಸಂದರ್ಭಗಳು ಎದುರಾಗಬಹುದು. ಪ್ರೀತಿಯಿಂದ ಏನನ್ನೇ ಕೊಟ್ಟರೂ ಅದನ್ನು ಸ್ವೀಕರಿಸಿ.‌ ಅದರ ಬಗ್ಗೆ ಟೀಕೆಗಳನ್ನು ಮಾಡಿ ಭಾವನೆಗೆ ಹೊಡೆತ ಕೊಡುವುದು ಬೇಡ. ಉದ್ಯೋಗದಲ್ಲಿ ಬದಲಾವಣೆ ಯೋಗವಿದೆ. ಶೀತಲ ಸಮರದಿಂದ ವಿರಾಮ ಸಿಗಲಿದೆ. ಹಣಕಾಸಿನಲ್ಲಿ ಲಾಭದ ಸೂಚನೆಗಳಿವೆ. ಸ್ನೇಹಿತರಿಂದ ಸಾಥಿ ಸಿಗುತ್ತದೆ. ಮನೆಯವರೊಂದಿಗೆ ಸಮಯ ಕಳೆಯುವುದು ಸಂತೋಷ ತಂದೀತು.

** ವೃಷಭ ರಾಶಿ :
ನಿಮ್ಮ ಮೇಲೆ ಸಹಾನುಭೂತಿ ಇದ್ದರೂ ಅದನ್ನು ಉಳಿಸಿಕೊಳ್ಳುವುದೂ ನಿಮ್ಮ‌ಮೇಲಿರಲಿದೆ. ನೀವು ಇಂದು ಏಕಾಂತದಲ್ಲಿ ಸಮಯ ಕಳೆಯಲು ಇಚ್ಛಿಸುವಿರಿ. ನಿಮಗೆ ಆತ್ಮವಿಶ್ವಾಸವನ್ನು ಪಡೆಯಲು ಮತ್ತು ನಿಮ್ಮ ಆಲೋಚನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಬುದ್ದಿಯ ಚಾತುರ್ಯದಿಂದ ಸಮಸ್ಯೆಗಳನ್ನು ಪರಿಹರಿಸಬಹುದು. ವ್ಯವಹಾರಗಳಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಹಣಕಾಸಿನಲ್ಲಿ ಸ್ವಲ್ಪ ಎಚ್ಚರತೆ ಅಗತ್ಯವಿದೆ. ಮನಸ್ಸು ಸ್ವಲ್ಪ ಗೊಂದಲದಲ್ಲಿದ್ದರೂ ನಿರ್ಧಾರ ತಾಳ್ಮೆಯಿಂದ ತೆಗೆದುಕೊಳ್ಳಿ. ಕುಟುಂಬದಲ್ಲಿ ಸಂತಸದ ಸುದ್ದಿ ಲಭಿಸಬಹುದು.

** ಮಿಥುನ ರಾಶಿ :
ನೇರವಾಗಿ ಯಾರಿಗೂ ಏನನ್ನೂ ಹೇಳಲಾರಿರಿ. ನೀವು ಎಲ್ಲದಕ್ಕೂ ಆದ್ಯತೆಗಳು ಮತ್ತು ವೇಳಾಪಟ್ಟಿಗಳನ್ನು ಹೊಂದಿಸಿಕೊಂಡು ಕಾರ್ಯವನ್ನು ಮಾಡಿ. ನೀವು ಮತ್ತು ನಿಮ್ಮ ಸಂಗಾತಿ ಉತ್ತಮ ಸಮಯವನ್ನು ಹೊಂದಿರುತ್ತೀರಿ. ವೃತ್ತಿಪರ ಜೀವನದಲ್ಲಿ ಪ್ರಗತಿಯ ಮಾರ್ಗ ತೆರೆಯಲಿದೆ. ಹಣಕಾಸಿನ ಲೆಕ್ಕಾಚಾರ ನಿಖರವಾಗಿರಲಿ. ಸಾಲವನ್ನು ಹಂತವಾಗಿ ತೀರಿಸಲು ಒಪ್ಪಿಗೆ ತೆಗೆದುಕೊಳ್ಳುವಿರಿ. ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದಾದ್ದರಿಂದ ತಾಳ್ಮೆಯಿಂದ ನಡೆದುಕೊಳ್ಳಿ.

** ಕರ್ಕಾಟಕ ರಾಶಿ :
ಭರವಸೆಯಿಂದ ಯಾವ ಕೆಲಸವೂ ಆಗದು. ಅದು ನಿಮ್ಮನ್ನು ನಿಮ್ಮ ಕುಟುಂಬಕ್ಕೆ ಹತ್ತಿರ ತರುತ್ತದೆ. ನಿಮ್ಮ ಸಹೋದ್ಯೋಗಿಗಳು ಸಹ ನಿಮಗೆ ಒಳ್ಳೆಯ ಸುದ್ದಿಯನ್ನು ನೀಡುತ್ತಾರೆ. ನಿಮ್ಮ ಯಾತ್ರೆಯ ಯೋಜನೆಗಳು ಯಶಸ್ವಿಯಾಗಲಿವೆ. ಉದ್ಯೋಗದಲ್ಲಿ ನವೀನ ಅವಕಾಶಗಳು ಲಭ್ಯ. ಕಳೆದ ವಸ್ತುಗಳು ನಿಮ್ಮ ಕೈ ಸೇರಲಿದೆ. ಹಣಕಾಸಿನ ಬಗ್ಗೆ ನಿಯಂತ್ರಣವಹಿಸಿ. ಮನೆಯೊಳಗಿನ ಒತ್ತಡದ ಪರಿಸ್ಥಿತಿಗಳಲ್ಲಿ ಶಾಂತಿ ಕಾಪಾಡುವುದು ಮುಖ್ಯ. ಧೈರ್ಯ ಮತ್ತು ಸ್ಪಷ್ಟ ನಡವಳಿಕೆಯು ಪ್ರಶಂಸೆಗೆ ಕಾರಣವಾಗಬಹುದು. ಮನೆಯಿಂದ ದೂರ ಹೋಗುವ ಸಂದರ್ಭ ಬರಬಹುದು

** ಸಿಂಹ ರಾಶಿ :
ಹೊಸ ಉದ್ಯೋಗಕ್ಕೆ ಮನೋಬಲ ಪೂರ್ಣವಾಗಿ ಇರದು. ಇಂದು ನಿಮಗೆ ಪ್ರಮುಖ ಕೆಲಸವನ್ನು ನಿಭಾಯಿಸುವ ಜವಾಬ್ದಾರಿಯನ್ನು ಕೊಡಬಹುದು. ಇಂತಹ ವಿಷಯಗಳನ್ನು ನಿಭಾಯಿಸುವಲ್ಲಿ ನೀವು ನಿಜವಾಗಿಯೂ ಪ್ರವೀಣರಾಗಿರುತ್ತೀರಿ. ಬಾಂಧವ್ಯದಲ್ಲಿ ಮನಸ್ತಾಪ ಕಾಣಿಸಿಕೊಳ್ಳುವುದು. ನಿಮ್ಮ ಸಂಗಾತಿಯು ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ನಿರ್ಧಾರಗಳಲ್ಲಿ ಸ್ಪಷ್ಟತೆಯಿರುವುದರಿಂದ ಮುನ್ನಡೆ ಸುಲಭವಾಗುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ.

** ಕನ್ಯಾ ರಾಶಿ :
ಎಚ್ಚರ ತಪ್ಪಿ ಏನಾದರೂ ಮಾಡಬಹುದು. ಇಂದು ತುಂಬಾ ದಿನದಿಂದ ಮಾಡುತ್ತಿದ್ದ ಕಾರ್ಯ ಯೋಜನೆಗಳನ್ನು ಪೂರ್ಣಮಾಡುವಿರಿ. ಆರ್ಥಿಕತೆಯಲ್ಲಿ ಸ್ಪಷ್ಟತೆ ಅವಶ್ಯವಾಗಿ ಬೇಕು. ಇಂದೇ ಆಲೋಚನೆ ಸ್ಥಿರವಾಗಿ ಇರದು. ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶಗಳು ಲಭಿಸಲಿವೆ. ಆರ್ಥಿಕವಾಗಿ ಮಿತವ್ಯಯವೂ ಲಾಭವೂ ಸಮಾಮವಾಗಿರುವುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಹೆಸರು ಮಾಡಬಹುದು. ಜವಾಬ್ದಾರಿಗಳಲ್ಲಿ ಕಷ್ಟವಾಗಿದ್ದರೂ ಯಶಸ್ಸು ಖಚಿತ.

** ತುಲಾ ರಾಶಿ :
ಕೆಲಸದ ಒತ್ತಡದಿಂದ ಸುಖವಾದ ನಿದ್ರೆ ಬಾರದು. ಯಾರಿಗೋ ಕೊಡಬೇಕಾದ ಹಣವನ್ನು ಮತ್ತಾರಿಗೋ ಕೊಡುವಿರಿ. ಇಂದು ನೀವು ನಿರೀಕ್ಷಿಸಿದ್ದು ನಿಮಗೆ ಸಿಗಲಿದೆ. ನಿಮಗೆ ಆಶ್ಚರ್ಯಗಳಿಂದ ಕೂಡಿದ ಕೆಲವು ಸಂಗತಿಗಳು ಗೊತ್ತಾಗಬಹುದು. ಅನ್ಯರ ಸಂಧಾನಕ್ಕೆ ನಿಮ್ಮನ್ನು ಭೇಟಿ ಮಾಡಲು ಆಪ್ತರು ಬರಬಹುದು. ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಆಗಲಿದೆ. ಪುಣ್ಯಸ್ಥಳದಿಂದ ಮನಸ್ಸು ಶಾಂತವಾಗಿರಲು ಧ್ಯಾನ ಸಹೋದ್ಯೋಗಿಗಳ ಸುಲಭವಾಗಬಹುದು. ಸಹಕಾರದಿಂದ ಕೆಲಸ ದೂರದ ಪ್ರಯಾಣದ ಯೋಗವಿದೆ. ಹಣಕಾಸು ವಿಷಯಗಳಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳಬಹುದು.

** ವೃಶ್ಚಿಕ ರಾಶಿ :
ಪುಣ್ಯಸ್ಥಳಕ್ಕೆ ತೆರಳಿ ಶುಭ ಕರ್ಮವನ್ನು ಮಾಡುವಿರಿ. ರಾಜಕೀಯ ಜನರನ್ನು ಭೇಟಿಯಾಗಿ ಆಗಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನಿಮಗೆ ಉದ್ಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ಈ ದಿನ ನೀವು ಎಂದಿನಂತೆ ಇರದೇ ಶಾಂತಿಯುತವಾಗಿ ನಡೆದುಕೊಳ್ಳುವಿರಿ. ಹಣಕಾಸಿನ ಲೆಕ್ಕಾಚಾರ ಸರಿಯಾಗಿ ನಿಭಾಯಿಸಬೇಕು. ಶತ್ರುಗಳಿಗೆ ನಿಮ್ಮ ಸಂದೇಶವನ್ನು ನೀಡುವಿರಿ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮುನ್ನೋಟವಿರಲಿ. ಕುಟುಂಬದಲ್ಲಿ ನಿರೀಕ್ಷಿತ ಸುದ್ದಿ ಸಂತಸ ತಂದೀತು.

** ಧನಸ್ಸು ರಾಶಿ :
ಆದಾಯವನ್ನು ಗೊತ್ತಾಗದಂತೆ ರಕ್ಷಿಸಿಕೊಳ್ಳುವಿರಿ. ಇಂದು ನೀವು ಬಹಳ ಕಾಲದ ಅನಂತರ ಕುಟುಂಬದ ಜನರ ಜೊತೆ ಹೆಚ್ಚು ಬೆರೆಯುವಿರಿ. ಮನೆಯಲ್ಲಿಯೇ ಇದ್ದು ಮನೆಯಲ್ಲಿಯೇ ಆನಂದವನ್ನು ಪಡೆಯುವಿರಿ. ಭಾವುಕತೆಯಿಂದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಬೆಂಬಲದಿಂದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬಹುದು. ವೃತ್ತಿಪರ ಜೀವನದಲ್ಲಿ ಗುರುತುಪಡಿಸುವ ಅವಕಾಶ ಸಿಗಲಿದೆ. ತಂದೆಯ ಜೊತೆ ಸಣ್ಣ ಮಾತಿಗೆ ಕಲಹವಾಗಲಿದೆ. ಹಣದ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಸ್ನೇಹಿತರ ಮೂಲಕ ಉತ್ತಮ ಸುದ್ದಿ ಲಭ್ಯ.

** ಮಕರ ರಾಶಿ :
ನೀವು ಮಾಡದ ಕೆಲಸಕ್ಕೆ ಯಶಸ್ಸು ನಿಮಗೆ ಸಿಗಲಿದೆ. ನೀವು ಹೊಸತನ್ನು ಏನನ್ನಾದರೂ ಕಲಿಯಲು ಸಿದ್ಧರಾಗುವಿರಿ. ನಿಮ್ಮ ಕಡೆಯಿಂದ ಸ್ವಲ್ಪ ಕೆಲಸದಿಂದ ನೀವು ಗಣನೀಯ ಪ್ರಮಾಣದ ಹಣ ಪಡೆಯಬಹುದು. ನೀವು ಯುವಕರ ಜೊತೆ ಸಮಯ ಕಳೆಯುವಿರಿ. ನಿಮ್ಮೊಳಗಿನ ಶತ್ರುಗಳಿಂದ ನಿಮ್ಮ ಕಾರ್ಯ ಕುಂಟುತ್ತ ಹೋಗುವುದು. ಸಂವಹನ ಶಕ್ತಿಯಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹದಿಂದ ಮುಂದುವರೆಯಲು ಅವಕಾಶ ಸಿಗುವುದು. ಉದ್ಯಮದಲ್ಲಿ ಹೊಸ ಪ್ರಯತ್ನಗಳು ಫಲ ನೀಡುವವು. ಹಿರಿಯರ ಸಲಹೆ ಮೂಲಕ ಸ್ಪಷ್ಟತೆ ಪಡೆಯಬಹುದು

** ಕುಂಭ ರಾಶಿ :
ವ್ಯವಹಾರದ ಒತ್ತಡದಿಂದ ಧಾರ್ಮಿಕ ಆಚರಣೆಗೆ ಸಮಯ ಸಿಗದು. ಇಂದು ಪೋಷಕರಿಂದ ನಿಮ್ಮ ಕಾರ್ಯಕ್ಕೆ ಬೆಂಬಲ ಸಿಗಲಿದೆ. ಕಾರ್ಯದ ಸ್ಥಳದಲ್ಲಿ ಒಳ್ಳೆಯ ಸುದ್ದಿಗಳು ಬರಲಿವೆ. ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ಕುಟುಂಬದ ಸದಸ್ಯರೊಂದಿಗೆ ಅಲ್ಪವಿರಾಮ ತೆಗೆದು ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಿ. ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ದಿನ. ಉದ್ಯೋಗದಲ್ಲಿ ಶ್ಲಾಘನೆಗೆ ಪಾತ್ರರಾಗುವಿರಿ.

** ಮೀನ ರಾಶಿ :
ಇಂದಿನ‌ ಕಾರ್ಯವನ್ನು ಮುಂದೂಡಿದರೂ ಸರಿಯಾದ ದಿನವನ್ನು ಅದಕ್ಕಾಗಿ ನಿರ್ಧರಿಸಲು ಆಗದು. ಇಂದು ನೀವು ಸ್ನೇಹಿತರ ಹೆಚ್ಚು ಸಮಯವನ್ನು ಕಳೆಯುವಿರಿ. ಯಾವುದೇ ಮಹತ್ವದ ಹಣಕಾಸಿನ ವಹಿವಾಟುಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ನೀವು ಸಣ್ಣ ವಿಷಯಗಳ ಬಗ್ಗೆಯೂ ಗಾಢವಾಗಿ ಇಂದು ಚಿಂತಿಸುವಿರಿ. ಮನಸ್ಸಿನಲ್ಲಿ ಉತ್ಸಾಹವಿದ್ದು ಹೊಸ ಕಾರ್ಯಗಳಲ್ಲಿ ತೊಡಗಲು ಇಚ್ಛೆ ಮೂಡುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸುಳಿವುಗಳು ಸಿಗುತ್ತವೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸುವುದು ಒಳಿತು. ಪ್ರವಾಸ ಯೋಜನೆಗಳು ಮುಂದೂಡುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.