Categories
ಡೆಲ್ಲಿ

ದೇಶದ ಶ್ರೀಮಂತ ಸಚಿವರಲ್ಲಿ ಡಿಕೆಶಿ ನಂ.2!

ದೇಶದ ಶ್ರೀಮಂತ ಸಚಿವರಲ್ಲಿ ಡಿಕೆಶಿ ನಂ.2!

* ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್ ವಿಶ್ಲೇಷಿಸಿ ಎ ಡಿ ಆರ್ ವರದಿ
* ದೇಶದ ಟಾಪ್ 5 ಕುಬೇರ ಸಚಿವರು ಯಾರು? ಇಲ್ಲಿದೆ ಡೀಟೇಲ್ಸ್

NAMMMUR EXPRESS NEWS
ನವದೆಹಲಿ: ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಈಗ ದೇಶದ ಎರಡನೇ ಶ್ರೀಮಂತ ಸಚಿವ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಹೇಳಿದೆ.
ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ಎಡಿಆರ್ ಗುರುವಾರ ಈ ವರದಿ ಬಿಡುಗಡೆ ಮಾಡಿದೆ. 27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರ ಅಫಿಡವಿಟ್‌ಗಳನ್ನು ವಿಶ್ಲೇಷಿಸಲಾಗಿದೆ. ಕರ್ನಾಟಕದಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು ಸಚಿವರು ಇದ್ದಾರೆ. ಆಂಧ್ರ ಪ್ರದೇಶವು ನಂತರದ ಸ್ಥಾನದಲ್ಲಿದೆ.
643 ಸಚಿವರ ಪೈಕಿ 302 ಮಂದಿ (47%) ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. 174 ಸಚಿವರ ವಿರುದ್ಧ (27%) ಗಂಭೀರ ಅಪರಾಧ ಪ್ರಕರಣಗಳಿವೆ. ಈ ಸಚಿವರು ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಸಂಪುಟದ 72ರಲ್ಲಿ 29 (40%) ಮಂದಿ ವಿರುದ್ಧ ಪ್ರಕರಣಗಳಿವೆ.

* ಟಾಪ್ 5 ಕುಬೇರ ಸಚಿವರು ಯಾರು,ಯಾವ ಕ್ಷೇತ್ರ,ಯಾವ ಪಕ್ಷ,ಎಷ್ಟು ಆಸ್ತಿ ?

1. ಚಂದ್ರಶೇಖರ ಪೆಮ್ಮಸಾನಿ (ಕೇಂದ್ರ ಸಚಿವ) – ಟಿಡಿಪಿ – (ಗುಂಟೂರು ಸಂಸದ) – 5,705 ಕೋಟಿ
2. ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ – ಕನಕಪುರ – 1,413 ಕೋಟಿ
3. ಚಂದ್ರಬಾಬು ನಾಯ್ಡು ನಾರಾ – ಟಿಡಿಪಿ – ಕುಪ್ಪಂ – 971 ಕೋಟಿ
4. ನಾರಾಯಣ ಪೊಂಗೂರು – ಟಿಪಿಡಿ – ನೆಲ್ಲೂರು – 824 ಕೋಟಿ
5. ಸುರೇಶ್ ಬಿ.ಎಸ್ – ಕಾಂಗ್ರೆಸ್ – ಹೆಬ್ಬಾಳ – 648 ಕೋಟಿ 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.