Categories
ಡೆಲ್ಲಿ

ಸಾಲಗಾರರಿಗೆ ಶುಭ ಸುದ್ದಿ, ರೆಪೋ ದರ ಶೇ.6ಕ್ಕೆ ಕಡಿತಗೊಳಿಸಿದ ಆರ್‌ಬಿಐ!

ಸಾಲಗಾರರಿಗೆ ಶುಭ ಸುದ್ದಿ, ರೆಪೋ ದರ ಶೇ.6ಕ್ಕೆ ಕಡಿತಗೊಳಿಸಿದ ಆರ್‌ಬಿಐ!

– ಇನ್ಮುಂದೆ EMI ಅಗ್ಗ!
– ಭಾರತದ ವಸ್ತುಗಳ ಮೇಲೆ ಅಧಿಕ ಸುಂಕ ಹೇರಿದ ಅಮೆರಿಕ!
– ಆರ್‌ಬಿಐ ಗವರ್ನರ್‌ ಹೇಳಿದ್ದೇನು?

NAMMUR EXPRESS NEWS
ಹೊಸದಿಲ್ಲಿ: ಅಮೆರಿಕದ ಸುಂಕ ನೀತಿಯನ್ನು ಎದುರಿಸಲು ಆರ್ಥಿಕತೆಯನ್ನು ಬಲಪಡಿಸುವ ಭಾಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸತತ ಎರಡನೇ ಬಾರಿಗೆ ಬಡ್ಡಿದರಗಳನ್ನು ಕಡಿತಗೊಳಿಸಿದೆ.
ಹೌದು, ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಈ ಮೂಲಕ ರೆಪೊ ದರ ಇದೀಗ ಶೇ. 6ಕ್ಕೆ ಇಳಿಸಿದೆ.
ಆರ್‌ಬಿಐ ರೆಪೋ ದರ ಇಳಿಸಿರುವುದರಿಂದ, ಬ್ಯಾಂಕುಗಳಿಗೆ ಸಾಲ ಪಡೆಯುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ವೈಯಕ್ತಿಕ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಅನುವು ಮಾಡಿಕೊಡುತ್ತದೆ. ಸಾಲಗಳ ಮೇಲಿನ ಇಎಂಐಗಳನ್ನು ಕೂಡ ಈ ನಿರ್ಧಾರ ಕಡಿಮೆ ಮಾಡಲಿದೆ.
ಈ ಮೂಲಕ ಶೇ.6.25ರಷ್ಟಿದ್ದ ರೆಪೋ 4 ದರ, ಶೇ.6ಕ್ಕೆ ಇಳಿದಂತಾಯಿತು. ಕಳೆದ ಫೆಬ್ರವರಿಯಲ್ಲಿ ಇಷ್ಟೇ ಪ್ರಮಾಣದಲ್ಲು ದರ ಕಡಿತ ಮಾಡಲಾಗಿತ್ತು. ಅದು
ಮೇ 2020ರ ನಂತರದ ಮೊದಲ ಇಳಿಕೆಯಾಗಿತ್ತು.
ರೆಪೋ ದರ, ಆರ್‌ಬಿಐ ಬ್ಯಾಂಕುಗಳಿಗೆ ಅವುಗಳ ಅಲ್ಪಾವಧಿಯಹಣಕಾಸಿನ ಅಗತ್ಯಗಳನ್ನು ಪೂರೈಸಲುಹಣ ನೀಡುವ ದರ. ರೆಪೋ ದರದಲ್ಲಿ 25 ಬಿಪಿಎಸ್ ಕಡಿತದಿಂದ, ಅದಕ್ಕೆ ಸಂಬಂಧಿಸಿದ ಎಲ್ಲಾ ಬಾಹ್ಯ ಮಾನದಂಡ ಸಾಲ ದರಗಳು (ಇಬಿಎಲ್‌ಆರ್) ಕಡಿಮೆಯಾಗುತ್ತವೆ. ಇದನ್ನು ಬ್ಯಾಂಕ್‌ಗಳು ಸಾಲಗಾರರಿಗೆ ವರ್ಗಾಯಿಸಿದರೆ, ಮನೆ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಸಮಾನ ಮಾಸಿಕ ಕಂತುಗಳು 25 ಬೇಸಿಸ್ ಪಾಯಿಂಟ್‌ಗಳಷು ಕಡಿಮೆಯಾಗುತ್ತವೆ.

– ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ಅವರಿಂದ ಸ್ಪಷ್ಟತೆ!

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಏ.9 ಬುಧವಾರ ನೇರ ಪ್ರಸಾರದಲ್ಲಿ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ವರದಿಯನ್ನು ಬಿಡುಗಡೆ ಮಾಡಿದರು.
ಈ ವೇಳೆ “ರೆಪೋ ದರವನ್ನು ಕಡಿಮೆ ಮಾಡಲು ಎಂಪಿಸಿ ಸರ್ವಾನುಮತದಿಂದ ಮತ ಚಲಾಯಿಸಿದೆ..” ಎಂದು ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ಸ್ಪಷ್ಟಪಡಿಸಿದರು.

ಭಾರತದ ವಸ್ತುಗಳ ಮೇಲೆ ಅಧಿಕ ಸುಂಕ ಹೇರಿದ ಅಮೆರಿಕ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಹೊಸ ಸುಂಕ ನೀತಿಗಳನ್ನು ಪ್ರಕಟಿಸುವ ಮೂಲಕ, ಜಾಗತಿಕ ವಾಣಿಜ್ಯ ಸಮರವನ್ನು ಸಾರಿದೆ. ಡೊನಾಲ್ಡ್‌ ಟ್ರಂಪ್‌ ಭಾರತದ ವಸ್ತುಗಳ ಮೇಲೂ ಶೇ.26ರಷ್ಟು ಅಧಿಕ ಸುಂಕವನ್ನು ಹೇರಿದ್ದಾರೆ. ಇದರಿಂದ ಭಾರತದ ರಫ್ತು ಉದ್ಯಮ ಮತ್ತು ಒಟ್ಟಾರೆ ಆರ್ಥಿಕತೆ ಮೇಲೆ ಬೀರಬಹುದಾದ ಪರಿಣಾಮಗ ಬಗ್ಗೆಯೂ, ಆರ್‌ಬಿಐ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.

ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ?

“ವ್ಯಾಪಾರ ಘರ್ಷಣೆಯಿಂದಾಗಿ ಜಾಗತಿಕ ಬೆಳವಣಿಗೆಯ ಮೇಲೆ ಉಂಟಾಗುವ ಪರಿಣಾಮವು, ದೇಶೀಯ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಹೆಚ್ಚಿನ ಸುಂಕಗಳು ನಿವ್ವಳ ರಫ್ತುಗಳ ಮೇಲೆ ಪರಿಣಾಮ ಬೀರಬಹುದು. ಜಾಗತಿಕ ಆರ್ಥಿಕ ಬದಲಾವಣೆಗಳು ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಬೀರುವ ಪರಿಣಾಮವನ್ನು ಈ ಸಂದರ್ಭದಲ್ಲಿ ಪ್ರಮಾಣೀಕರಿಸುವುದು ಕಷ್ಟ. ಆದರೆ ದೇಶೀಯ ಬೆಳವಣಿಗೆಯನ್ನು ನಿರ್ವಹಿಸುವ ಸಾಮರ್ಥ್ಯದ ಬಗ್ಗೆ ಕೇಂದ್ರ ಬ್ಯಾಂಕ್ ಸಂಪೂರ್ಣ ವಿಶ್ವಾಸ ಹೊಂದಿದೆ..” ಎಂದು ಗವರ್ನರ್‌ ಸಂಜಯ್‌ ಮಲ್ಹೋತ್ರಾ ಇದೇ ವೇಳೆ ನುಡಿದರು.

“ಕೃಷಿ ಕ್ಷೇತ್ರದ ನಿರೀಕ್ಷೆಗಳು ಉಜ್ವಲವಾಗಿವೆ ಮತ್ತು ಉತ್ಪಾದನಾ ಚಟುವಟಿಕೆಯು ಪುನರುಜ್ಜೀವನದ ಲಕ್ಷಣಗಳನ್ನು ತೋರಿಸುತ್ತಿದೆ. ಅದೇ ರೀತಿ ಸೇವಾ ವಲಯವು ತನ್ನ ಸ್ಥಿತಿಸ್ಥಾಪಕತ್ವವನ್ನು ಮುಂದುವರೆಸಿದ್ದು, ಬ್ಯಾಂಕುಗಳು ಮತ್ತು ಕಾರ್ಪೊರೇಟ್‌ಗಳ ಬ್ಯಾಲೆನ್ಸ್ ಶೀಟ್‌ಗಳು ಆರೋಗ್ಯಕರವಾಗಿವೆ..” ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.