Categories
ಡೆಲ್ಲಿ

ಪಹಲ್ಗಾಮ್‌ ಪ್ರತೀಕಾರದ ಮಿಡ್‌ನೈಟ್‌ ಆಪರೇಷನ್‌ ಸಿಂಧೂರ ಹೇಗಿತ್ತು?

ಪಹಲ್ಗಾಮ್‌ ಪ್ರತೀಕಾರದ ಮಿಡ್‌ನೈಟ್‌ ಆಪರೇಷನ್‌ ಸಿಂಧೂರ ಹೇಗಿತ್ತು?
– ಪಹಲ್ಗಾಮ್‌ ದಾಳಿಗೆ ಆಪರೇಷನ್‌ ಸಿಂಧೂರ ಮೂಲಕ ಭಾರತ ಪ್ರತೀಕಾರ
– ಸೇನಾ ಕಾರ್ಯಾಚರಣೆಗೆ ‘ಆಪರೇಷನ್‌ ಸಿಂಧೂರ’ ಅಂತ ಹೆಸರಿಟ್ಟಿದ್ದೇಕೆ?

NAMMUR EXPRESS NEWS
ಹೊಸದಿಲ್ಲಿ : ಪಹಲ್ಗಾಮ್‌ ದಾಳಿಗೆ ಆಪರೇಷನ್‌ ಸಿಂಧೂರ ಮೂಲಕ ಭಾರತ ಪ್ರತೀಕಾರವನ್ನು ತೀರಿಸಿಕೊಂಡಿದೆ. 26 ಅಮಾಯಕರನ್ನು ಬಲಿಪಡೆದ ಉಗ್ರರರನ್ನು ಪಾಕಿಸ್ತಾನದ ಒಳಗಡೆ ಹೋಗಿ ಭಾರತೀಯ ಸೇನೆ ಹೊಡೆದುರುಳಿಸಿದೆ. ಯುದ್ಧದ ಉದ್ವಿಗ್ನತೆ ನಡುವೆಯೇ ಪಾಕ್‌ ವಿರುದ್ಧ ಭಾರತ ಸೇಡನ್ನು ತೀರಿಸಿಕೊಂಡಿದ್ದು, ‌ಪಾಕ್‌ ಹಾಗೂ ಪಿಒಕೆಯ 9 ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿರುವ ಭಾರತ ಉಗ್ರರ ಹುಟ್ಟಡಗಿಸಿದೆ. ಕೇವಲ ಉಗ್ರರ ನೆಲೆಗಳನ್ನು ಭಾರತ ಟಾರ್ಗೆಟ್‌ ಮಾಡಿದ್ದು, ಸೇನಾ ಸೌಕರ್ಯದ ಮೇಲೆ ದಾಳಿ ನಡೆಸಿಲ್ಲ. ಈ ಮೂಲಕ ಚಾಣಾಕ್ಷ್ಯ ನಡೆಯನ್ನು ಮೋದಿ ಸರ್ಕಾರ ಅನುಸರಿಸಿದೆ.

ಆಪರೇಷನ್‌ ಸಿಂಧೂರದ ಮೂಲಕ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದು, ಪಹಲ್ಗಾಮ್‌ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನದ 4 ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ 5 ಕಡೆಯಿದ್ದ ಪ್ರಮುಖ ಹಾಗೂ ಬೃಹತ್‌ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. 1971ರ ಯುದ್ಧದ ಬಳಿಕ ಮೊದಲ ಬಾರಿಗೆ ಭಾರತ ತನ್ನ ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆಯನ್ನು ಬಳಸಿದೆ ಎನ್ನಲಾಗಿದ್ದು, ಪಾಕಿಸ್ತಾನದ ಒಳಗಡೆ ಹೋಗಿ ಉಗ್ರರರನ್ನು ಹೊಡೆದುರುಳಿಸಿ ಬಂದಿದೆ. ಪ್ರಮುಖವಾಗಿ ಲಷ್ಕರೆ ತೊಯ್ಬಾ ಹಾಗೂ ಜೈಶೆ ಮೊಹಮದ್‌ ಸಂಘಟನೆಯ ನೆಲೆಗಳನ್ನು ಉಡೀಸ್‌ ಮಾಡಿದ್ದು, ಉಗ್ರವಾದವನ್ನು ಭಾರತ ಎಂದಿಗೂ ಸಹಿಸಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ. ಜೊತೆಗೆ ನಮ್ಮ ತಂಟೆಗೆ ಬಂದರೆ ಭಾರತ ಯಾರನ್ನು ಉಳಿಸಲ್ಲ ಎಂಬ ಮೆಸೇಜ್‌ ಅನ್ನು ಇಡೀ ವಿಶ್ವಕ್ಕೆ ನೀಡಿದೆ. ಇದು ಮೊದಲನೇ ಹಂತದ ಪ್ರತೀಕಾರ ಆಗಿದ್ದು, ಮುಂದೆ ಪಾಕಿಸ್ತಾನಕ್ಕೆ ಮಾರಿಹಬ್ಬ ಇರುವುದು ಸ್ಪಷ್ಟ.

– ಸೇನಾ ಕಾರ್ಯಾಚರಣೆಗೆ ‘ಸಿಂಧೂರ’ ಹೆಸರಿಟ್ಟಿದ್ದೇಕೆ?

ಪಹಲ್ಗಾಮ್‌ಗೆ ಹನಿಮೂನ್‌ಗೆ ಹೋದವರು ಸೇರಿ ಹಲವು ನಾಗರೀಕರನ್ನು ಉಗ್ರರು ಬಲಿ ತೆಗೆದುಕೊಂಡಿದ್ದರು. ಬೈಸರನ್‌ ವ್ಯಾಲಿಯಲ್ಲಿ ಉಗ್ರರ ಹತ್ಯಾಕಾಂಡದಲ್ಲಿ 26 ಅಮಾಯಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸೇನೆ ಈ ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿದೆ. ದಾಳಿಯ ವೇಳೆ ಸಾವನ್ನಪ್ಪಿದ್ದ ನೌಕಾಪಡೆಯ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ ಕೂಡ ಒಬ್ಬರು. 6 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಪತಿಯನ್ನು ಕಳೆದುಕೊಂಡ ಪತ್ನಿ ಹಿಮಾಂಶಿ ವಿನಯ್‌ ನರ್ವಾಲ್‌ ಮೃತ ದೇಹದ ಪಕ್ಕ ಕುಳಿತು ಅಳುತ್ತಿರುವ ಫೋಟೋ ವೈರಲ್‌ ಆಗಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಆಪರೇಷನ್‌ ಸಿಂಧೂರ ಎಂದು ಹೆಸರಿಡಲಾಗಿದ್ದು, ಇದು ರಾಷ್ಟ್ರೀಯ ಶೋಕ ಹಾಗೂ ಸಂಕಲ್ಪವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದಿದ್ದ ಭಾರತ ಈಗ ತನ್ನ ಕೆಲಸವನ್ನು ಮಾಡಿದೆ. ಆಪರೇಷನ್‌ ಬೆನ್ನಲ್ಲೇ ಭಾರತೀಯ ಸೇನೆ ಜಸ್ಟೀಸ್‌ ಸರ್ವಡ್‌, ಜೈ ಹಿಂದ್‌ ಎಂದು ಟ್ವೀಟ್‌ ಮಾಡಿದ್ದು ಗಮನ ಸೆಳೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.