ಸರ್ಕಾರಿ ಪ್ರೌಢಶಾಲೆ ಕಟ್ಟೆಹಕ್ಲು ಗೆ 97.77%ರಷ್ಟು ಫಲಿತಾಂಶ
– ಆಂಗ್ಲ ಮಾಧ್ಯಮದಲ್ಲಿ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ
– ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯು ಪ್ರತಿ ವರ್ಷವೂ ಉತ್ತಮ ಗುಣಾತ್ಮಕ ಫಲಿತಾಂಶದ ಮೂಲಕ ಸಾಧನೆ
NAMMUR EXPRESS NEWS
ಸರ್ಕಾರಿ ಪ್ರೌಢಶಾಲೆ ಕಟ್ಟೆಹಕ್ಲು ಗೆ 97.77%ರಷ್ಟು ಫಲಿತಾಂಶ 2025 ಎಸ್ ಎಸ್ ಎಲ್ ಸಿ ಏಪ್ರಿಲ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಶಾಲೆಯು ಶೇಕಡಾ 97.77 ರಷ್ಟು ಫಲಿತಾಂಶವನ್ನು ಪಡೆದಿದೆ. ಪರೀಕ್ಷೆ ಬರೆದ 45 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಆಂಗ್ಲ ಮಾಧ್ಯಮದಲ್ಲಿ ಶೇಕಡ ನೂರರಷ್ಟು ಫಲಿತಾಂಶ ಹಾಗೂ ಕನ್ನಡ ಮಾಧ್ಯಮದಲ್ಲಿ 96ರಷ್ಟು ಫಲಿತಾಂಶವನ್ನು ಪಡೆದಿದೆ.
ಶಾಲೆಯ ಟಾಪರ್ ಆಗಿ ಮಾನಸ 615, ಶ್ರವಣ್ 606 ಮತ್ತು ತ್ರಿಶಾ ಎಚ್ 598 ಅಂಕಗಳನ್ನು ಪಡೆದು ಮೊದಲ ಮೂರು ಸ್ಥಾನದಲ್ಲಿದ್ದಾರೆ. ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಹೇಮಂತ 581 ಅಂಕಗಳನ್ನು ಪಡೆದಿರುತ್ತಾನೆ. ಹಾಗೆಯೇ ಗುಣಾತ್ಮಕ ಫಲಿತಾಂಶದಲ್ಲಿ 88.10 % ಪಡೆದು A ಗ್ರೇಡನ್ನು ಗಳಿಸಿ ತಾಲೂಕಿನಲ್ಲಿ 7 ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ನಾಲ್ಕು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕನ್ನಡದಲ್ಲಿ ತ್ರಿಶಾ ಎಚ್ 125 ಅಂಕಗಳು, ಇಂಗ್ಲಿಷ್ ವಿಷಯದಲ್ಲಿ ಮಾನಸ 100 ಅಂಕಗಳು, ಹಿಂದಿ ವಿಷಯದಲ್ಲಿ ಶ್ರವಣ್, ಅಭಿಶ್ರೀ ಮತ್ತು ಉಜ್ವಲ್ ನೂರಕ್ಕೆ ನೂರು ಅಂಕಗಳು, ಗಣಿತದಲ್ಲಿ ಮಾನಸ ಮತ್ತು ಉಜ್ವಲ್ 100 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ. ತೀರ್ಥಹಳ್ಳಿಯ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯು ಪ್ರತಿ ವರ್ಷವೂ ಉತ್ತಮ ಗುಣಾತ್ಮಕ ಫಲಿತಾಂಶವನ್ನು ನೀಡುತ್ತಾ ಬಂದಿದೆ. ಈ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಹಕರಿಸಿದ ಪೋಷಕರಿಗೆ, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ, ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ಅಭಿವೃದ್ಧಿ ಸಮಿತಿ, ಹಾಗೂ ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
