ದೇಶದಾದ್ಯಂತ ನಡೆಯಿತು ಮಾಕ್ ಡ್ರಿಲ್ !!
* ದೇಶದ 244 ಜಿಲ್ಲೆಗಳಲ್ಲಿ ಮೊಳಗಿದ ಮಾಕ್ ಡ್ರಿಲ್ ಸೈರನ್
* ಬೆಂಗಳೂರಿನ 35 ಕಡೆ ಮೊಳಗಿದ ಸೈರನ್
NAMMMUR EXPRESS NEWS
ದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಅಪರೇಷನ್ ಸಿಂಧೂರ ಹೆಸರಲ್ಲಿ ಉಗ್ರರ ನೆಲೆಗಳನ್ನ ಭಾರತೀಯ ಸೇನೆ ಧ್ವಂಸಗೊಳಿಸಿದ ಬೆನ್ನಲ್ಲೆ ಇದೀಗ ದೇಶಾದ್ಯಂತ ಮಾಕ್ ಡ್ರಿಲ್ ಮಾಡಲಾಗಿದೆ.
ಭಾರತ ಪಾಕ್ ನಡುವೆ ಯುದ್ದದ ವಾತಾವರಣ ಹಿನ್ನೆಲೆ ದೇಶದ 244 ಕಡೆಗಳಲ್ಲಿ ಮಾಕ್ ಡ್ರಿಲ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಸೇರಿ ಮೂರು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಮಾಡಲಾಗುತ್ತಿದ್ದು ಸೈರನ್ ಸದ್ದು ಮೊಳಗಿದೆ.
ಬೆಂಗಳೂರಿನ ವೈಯಾಲಿ ಕಾವಲ್ ಉಪ್ಪಾರಪೇಟೆ ಪೊಲೀಸ್ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ರಾಜಾಜಿನಗರ ಅಗ್ನಿ ಶಾಮಕ ಠಾಣೆ ಹಲಸೂರು ಗೇಟ್ ಅಗ್ನಿಶಾಮಕ ಠಾಣೆ ಸೇರಿ ಬೆಂಗಳೂರಿನ 35 ಸ್ಥಳಗಳಲ್ಲಿ ಅಣುಕುಪ್ರದರ್ಶನ ಪ್ರಯುಕ್ತ 3.58 ಗಂಟೆಯಿಂದ 4 ಗಂಟೆವರೆಗೆ ದೇಶಾದ್ಯಂತ ಸೈರನ್ ಮೊಳಗಿದೆ.
ಅಪರೇಷನ್ ಅಭ್ಯಾಸ್ ಹೆಸರಿನಲ್ಲಿ ಈ ಮಾಕ್ ಡ್ರಿಲ್ ನಡೆಸಲಾಗುತ್ತಿದ್ದು, ಯುದ್ದದ ಸನ್ನಿವೇಶದಲ್ಲಿ ಹೇಗೆ ರಕ್ಷಣೆ ಮಾಡಿಕೊಳ್ಳಬೇಕೆಂಬುದು ಇದರ ಉದ್ದೇಶವಾಗಿದೆ.
* ಬೆಂಗಳೂರಿನ 35 ಕಡೆ ಮೊಳಗಿದ ಮಾಕ್ ಡ್ರಿಲ್ ಸೈರನ್
ಬೆಂಗಳೂರು ನಗರದಲ್ಲೂ ಸಹ ಮಾಕ್ ಡ್ರಿಲ್ ಸಂಬಂಧ ಸೈರನ್ ಶಬ್ಧ ಮೊಳಗಲಿದೆ. ಬೆಂಗಳೂರು ನಗರದ 35 ಕಡೆಗಳಲ್ಲೂ ಸೈರನ್ ಮೊಳಗಲಿದ್ದು, ಜನರು ಆತಂಕ ಪಡುವ ಅಗತ್ಯ ಇಲ್ಲ. ಸೈರನ್ ಶಬ್ಧ ಕೇಳಿ ಜನರು ಆತಂಕ ಪಡಬೇಡಿ. ಇದು ಅಣಕು ಪ್ರದರ್ಶನದ ಭಾಗವಾಗಿ ನಡೆಯುವ ಸೈರನ್ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಕ್ ಡ್ರಿಲ್ ನಾಗರಿಕರ ರಕ್ಷಣಾ ಅಣಕು ಪ್ರದರ್ಶನ ಇದಾಗಿದ್ದು, ಮೊದಲಿಗೆ ಹಲಸೂರು ಕೆರೆಯಲ್ಲಿ ಬೋಟಿಂಗ್ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ನಂತರ ಸೈರನ್ ಪ್ರೋಟೋಕಾಲ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
