Categories
ತೀರ್ಥಹಳ್ಳಿ

ಗ್ರಾಮೀಣ ಭಾಗದ ಗುಡ್ಡೇಕೇರಿ ಶಾಲೆ ಹುಡುಗಿ ಅಕ್ಷತಾ ಹೆಚ್.ಯು ಸಾಧನೆ

ಗ್ರಾಮೀಣ ಭಾಗದ ಗುಡ್ಡೇಕೇರಿ ಶಾಲೆ ಹುಡುಗಿ ಅಕ್ಷತಾ ಹೆಚ್.ಯು ಸಾಧನೆ
– ಸರ್ಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ
– ಶಾಲಾ ಆಡಳಿತ ಮಂಡಳಿ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ‌ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ, ರಾಜ್ಯ ಮಟ್ಟದ ಎರಡು ರಸಪ್ರಶ್ನೆ ವಿಜೇತೆ, ಅತ್ಯುತ್ತಮ ಕ್ರೀಡಾಪಟು, ಅಕ್ಷತಾ ಹೆಚ್ ಯು, ಇವರು ಎಸ್ ಎಲ್ ಎಲ್ ಸಿ ಪರೀಕ್ಷೆಯಲ್ಲಿ 621/625 ಕ್ಕೆ ( 99.36 % ) ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ರಾಜ್ಯ ಮಟ್ಟದಲ್ಲಿ 5 ನೇ ರ್ಯಾಂಕ್, ಶಿವಮೊಗ್ಗ ಜಿಲ್ಲೆಯ ಕನ್ನಡ ಮಾಧ್ಯಮದ ಟಾಪರ್ ಜೊತೆಗೆ, ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಕನ್ನಡ- ಇಂಗ್ಲಿಷ್ ಮಾಧ್ಯಮದಲ್ಲಿ ಟಾಪರ್ ಆಗಿ ಗುರುತಿಸಿಕೊಂಡಿದ್ದಾರೆ.
ಅಕ್ಷತಾ ಹೆಚ್ ಯು ಇವರು ಆಗುಂಬೆ ಸಮೀಪದ ಕವರಿಹಕ್ಕಲು ಸಮೀಪದ ಹುಲ್ಗಾರ್ ಬೈಲು ವಾಸಿ ಶ್ರೀಮತಿ ಸುರೇಖ ಮತ್ತು ಶ್ರೀ ಉದಯ್ ಇವರ ಪುತ್ರಿಯಾಗಿದ್ದಾಳೆ..‌
ಅತ್ತಮ ಸಾಧನೆ ಮಾಡಿದ ಅಕ್ಷತಾ ಹೆಚ್ ಯು ಇವಳಿಗೂ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಅಧ್ಯಾಪಕ ವೃಂದಕ್ಕೂ, ಪೋಷಕರಿಗೂ, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗೂ ಪ್ರೋತ್ಸಾಹ ನೀಡಿದ ಎಲ್ಲಾ ‌ದಾನಿಗಳಿಗೂ, ಉತ್ತಮ ಫಲಿತಾಂಶ ಬರಲು ಕಾರಣರಾದ, ಎಲ್ಲಾ ಮಕ್ಕಳಿಗೂ,
ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸುರೇಶ್ ಎಂ ಜಿ ಮೇದೊಳಿಗೆ ಹಾಗೂ ಮುಖ್ಯ ಶಿಕ್ಷಕರಾದ ಮಂಜು ಬಾಬು ಹೆಚ್ ಪಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.