Categories
ಬೆಂಗಳೂರು ಮಾಹಿತಿ ಸುದ್ದಿ ರಾಜ್ಯ ಶಿಕ್ಷಣ

ಏ.7ರಂದು ದ್ವಿತೀಯ ಪಿಯುಸಿ, ಏ.24ರಂದು ಎಸ್ ಎಸ್ ಎಲ್ ಸಿ ಫಲಿತಾಂಶ

ಏ.7ರಂದು ದ್ವಿತೀಯ ಪಿಯುಸಿ, ಏ.24ರಂದು ಎಸ್ ಎಸ್ ಎಲ್ ಸಿ ಫಲಿತಾಂಶ
– ಎಸ್ಎಮ್ಎಸ್ ಮೂಲಕವೂ ಫಲಿತಾಂಶ ಬರಲಿದೆ…!
– ಪರೀಕ್ಷೆ ಫಲಿತಾಂಶವೇ ಜೀವನ ಅಲ್ಲ.. ಸೋತು ಗೆದ್ದವರೇ ಹೆಚ್ಚು!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: 2026ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಫಲಿತಾಂಶಗಳನ್ನು ನೋಡಲು ಆಯಾ ತರಗತಿಗಳ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾತರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 7ರಂದು ದ್ವಿತೀಯ ಪಿಯುಸಿ ಮತ್ತು ಏಪ್ರಿಲ್ 24ರಂದು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ನಿರೀಕ್ಷೆಯ ಜೊತೆಗೆ ಆತಂಕ ಮತ್ತು ಕುತೂಹಲ ಮನೆ ಮಾಡಿದೆ. ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಸಂಬಂಧಿತ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ತಮ್ಮ ಅಂಕಪಟ್ಟಿಯನ್ನು ಪರಿಶೀಲಿಸಬಹುದು, ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಬಳಸಿ ವೆಬ್ ಸೈಟ್ ಗೆ ಲಾಗಿನ್ ಆಗಿ, ಫಲಿತಾಂಶವನ್ನು ನೋಡಬಹುದು ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಕೆಲವು ಸಂದರ್ಭಗಳಲ್ಲಿ ಎಸ್ಎಮ್ಎಸ್ ಮೂಲಕವೂ ಫಲಿತಾಂಶವನ್ನು ಪಡೆದುಕೊಳ್ಳುವ ಸೌಲಭ್ಯವಿದೆ ಎಂದು ಈ ಮೂಲಕ ತಿಳಿಸಲಾಗಿದೆ.

ಪರೀಕ್ಷೆ ಫಲಿತಾಂಶವೇ ಜೀವನ ಅಲ್ಲ.. ಸೋತು ಗೆದ್ದವರೇ ಹೆಚ್ಚು!

ಪರೀಕ್ಷೆ ಫಲಿತಾಂಶವೇ ಜೀವನ ಅಲ್ಲ. ಸೋತು ಗೆದ್ದವರೇ ಹೆಚ್ಚು!. ಫಲಿತಾಂಶ ಹೆಚ್ಚು ಬರಲಿ, ಕಡಿಮೆ ಬರಲಿ. ನೀವು ತಲೆ ಕೆಡಿಸ್ಕೊಳ್ಳಬೇಡಿ. ಪೋಷಕರು ಕೂಡ ಮಕ್ಕಳ ಮೇಲೆ ಒತ್ತಡ ಹೇರಬೇಡಿ. ರಾಂಕ್ ಬರಲಿ ಬಿಡಲಿ ಮಕ್ಕಳು ಬದುಕಲ್ಲಿ ಗೆಲ್ಲಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.