ಕ್ರಿಯೇಟಿವ್ ಕಾರ್ಕಳ ಸಹಭಾಗಿತ್ವದ ಹೆಚ್.ಕೆ.ಎಸ್ ಕಾಲೇಜಿನ ವಿದ್ಯಾರ್ಥಿಗಳೂ ಮೇಲುಗೈ!
– ಹಾಸನದಲ್ಲೂ 100ಕ್ಕೆ 100 ಪ್ರತಿಶತ ಫಲಿತಾಂಶ
– 14 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿ ಸಾಧನೆ
NAMMUR EXPRESS NEWS
ಹಾಸನ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಶ್ರೀ ನಿಧಿ ಡಿ 591, ಕೀರ್ತನಾ ಬಿ 585, ಪ್ರೀತಿ ಸಿ ಎಲ್ 582, ಸಂಗೀತ ಬಿ ಎಂ 580, ಗಣೇಶ ಜಿ 579, ಶ್ರೇಯಾ ಎಂ ಐ 579 ಅಂಕಗಳನ್ನು ಗಳಿಸಿಕೊಂಡಿದ್ದು ಒಟ್ಟು 100 ಪ್ರತಿಶತ ಫಲಿತಾಂಶ ಪಡೆದು ಮಿಂಚಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ರೇಷ್ಮಾ ಜಿಕೆ 589, ಪಾವನ ಆರ್ 582, ರೋಹನ್ ಪವನ್ ರೆಡ್ಡಿ ಎಂ 581, ಸಮನ್ವಿ ಎಚ್ ಆರ್ 580 ಅಂಕಗಳನ್ನು ಪಡೆದಿದ್ದು ಒಟ್ಟು 98.33 ಪ್ರತಿಶತ ಫಲಿತಾಂಶ ಗಳಿಸಿಕೊಂಡಿದೆ. 325 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 167 ವಿದ್ಯಾರ್ಥಿಗಳು ವಿಶಿಷ್ಟಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದು ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಭೌತಶಾಸ್ತ್ರ 1, ರಸಾಯನಶಾಸ್ತ್ರ 3, ಗಣಿತಶಾಸ್ತ್ರ 3, ಜೀವಶಾಸ್ತ್ರ 7, ಗಣಕ ವಿಜ್ಞಾನ 9, ಮೂಲ ಗಣಿತ 4. ಕನ್ನಡ 4 ಹಾಗೂ ಸಂಸ್ಕೃತದಲ್ಲಿ 14 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕಗಳಿಸಿ ವಿಶೇಷ ಸಾಧನೆಗೈದಿದ್ದಾರೆ.
ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.








