ಆರೋಗ್ಯ ಎಕ್ಸ್ ಪ್ರೆಸ್!
ಜಾಸ್ತಿ ಕಾಫಿ ಕುಡಿಯುತ್ತೀರಾ?
– ಹಾಗಾದ್ರೆ ಈ ಸಮಸ್ಯೆಗಳು ಬರಬಹುದು ಹುಷಾರು!
NAMMUR EXPRESS NEWS
ನಮಗೆ ಕಾಫಿ ಎಂದರೆ ಅದನ್ನು ಬಿಟ್ಟಿರಲು ಆಗದು. ನಿತ್ಯ ನಾಲ್ಕೈದು ಕಪ್ ಕಾಫಿ ಸೇವನೆ ಮಾಡುತ್ತೇವೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಜಾಸ್ತಿ ಕಾಫಿ ಕುಡಿಯುತ್ತೀರಾ? ಕಾಫಿ ಒಮ್ಮೆ ಕುಡಿದರೆ ಅದರ ರುಚಿಯಿಂದ ಮತ್ತೆ ಹೊರಗೆ ಬರಲು ಖಂಡಿತವಾಗಿಯೂ ಆಗದು. ಕಾಫಿಯ ಸುವಾಸನೆ ಹಾಗೂ ರುಚಿಗೆ ಮಾರು ಹೋಗದವರು ಇಲ್ಲ. ವಿಶ್ವದ ವಿವಿಧ ಭಾಗಗಳಲ್ಲಿ ಕಾಫಿಯನ್ನು ಬೆಳೆಸಲಾಗುತ್ತದೆ ಮತ್ತು ಇದರ ರುಚಿಯು ಕೂಡ ಭಿನ್ನವಾಗಿ ಇರುವುದು. ಇನ್ನು ಕೆಲವರು ಕಾಫಿಯನ್ನು ಚಟವಾಗಿಸಿಕೊಂಡಿರುವರು.
ಬರುವ ಸಮಸ್ಯೆಗಳೇನು?
ಅತಿಯಾಗಿ ಕಾಫಿ ಕುಡಿದರೆ ಆಗ ಇದರಿಂದ ನಾನಾ ರೀತಿಯ ಸಮಸ್ಯೆಗಳು ಕಂಡುಬರುವುದು ಎಂದು ಅಧ್ಯಯನಗಳು ಹೇಳಿವೆ. ಕಾಫಿ ಅತಿಯಾಗಿ ಕುಡಿದರೆ ಅದರಿಂದ ಮಾನಸಿಕ ಸಮಸ್ಯೆಗಳು, ನಿದ್ರೆಗೆ ತೊಂದರೆ, ವಿಶ್ರಾಂತಿ ಇಲ್ಲದೆ ಇರುವುದು, ಧೈರ್ಯ ಕುಂದುವಿಕೆ ಇತ್ಯಾದಿ ಕಂಡು ಬರಬಹುದು ಎಂದು ಅಧ್ಯಯನಗಳು ಹೇಳಿವೆ.
ಅತಿಯಾಗಿ ಕಾಫಿ ಕುಡಿದರೆ ಆಗ ಏನಾಗುವುದು?
ಕಾಫಿ ಚಟವಾಗಿಸಿಕೊಂಡರೆ ಆಗ ಈ ಲಕ್ಷಣಗಳು ಕಾಣಿಸಬಹುದು. ಕಾಫಿಯೊಂದಿಗೆ ದಿನದ ಆರಂಭ ಮಾಡುವುದು. ವಿಶ್ರಾಂತಿ ಇಲ್ಲದ ಭಾವನೆ
ಮನಸ್ಸಿನಲ್ಲಿ ವಿವಿಧ ಬಗೆಯ ಆಲೋಚನೆಗಳು
ಧೈರ್ಯಕುಂದುವಿಕೆ ಮತ್ತು ಆತಂಕ
ಸಣ್ಣ ವಿಚಾರಕ್ಕೂ ಒತ್ತಡಕ್ಕೆ ಒಳಗಾಗುವುದು
ಕಾಫಿ ಸಿಗದೇ ಇರುವಾಗ ತುಂಬಾ ಕಿರಿಕಿರಿ ಅನುಭವಿಸುವುದು. ತಲೆನೋವು
ಕೆಫಿನ್ ಚಟವಾದರೆ ಕಂಡುಬರುವ ಆರೋಗ್ಯ ಸಮಸ್ಯೆಗಳು.
ಕಾಫಿ ವಿಶ್ವದಲ್ಲಿ ಅತ್ಯಂತ ಜನಪ್ರಿಯ ಪಾನೀಯವಾಗಿದೆ. ಕಾಫಿಯು ಕ್ರಿಯಾತ್ಮಕತೆಯನ್ನು ಉತ್ತೇಜಿಸುವುದು. ವಿಶ್ವ ದೆಲ್ಲೆಡೆಯಲ್ಲಿ ಇದನ್ನು ಅತಿಯಾಗಿ ಸೇವನೆ ಮಾಡುವವರಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಕೂಡ ಕಂಡು ಬರುವುದು.
