ಆರೋಗ್ಯ ಎಕ್ಸ್ ಪ್ರೆಸ್!
ಸಿಹಿ ಕುಂಬಳ ಬೀಜ ಎಂಬ ಸಂಜೀವಿನಿ ಬಗ್ಗೆ ನಿಮಗೆ ಗೊತ್ತಾ?
– ಇದರ ಉಪಯೋಗ ಕೇಳಿದ್ರೆ ಅಚ್ಚರಿಯಾಗುತ್ತೆ!
NAMMUR EXPRESS NEWS
ಹಣ್ಣುಗಳಲ್ಲಿರುವ ಪೋಷಕಾಂಶ, ವಿಟಮಿನ್ ಹಾಗೂ ಸಾರವು ದೇಹದ ಆರೋಗ್ಯಕ್ಕೆ ಬಹಳ ಉತ್ತಮ ಎಂದು ತಿಳಿದಿದ್ದೇವೆ. ಹಣ್ಣುಗಳ ಸೇವನೆ ಆರೋಗ್ಯಕರ ಬೆಳವಣಿಗೆಯಾಗಿದೆ. ಒಂದು ಸೇಬು ಹಣ್ಣು ವೈದ್ಯರನ್ನು ದೂರ ಮಾಡಲಿದೆ ಎಂದು ನಾವು ಕೇಳಿದ್ದೇವೆ. ಅದೇ ರೀತಿ ಹಣ್ಣಿನ ಬೀಜಗಳು ತರಕಾರಿ ಬೀಜಗಳು ಸಹ ಆರೋಗ್ಯಕ್ಕೆ ಉತ್ತಮ.
ಅದ್ರಲ್ಲೂ ಕಲ್ಲಂಗಡಿ, ಕುಂಬಳಕಾಯಿ, ಸಿಹಿ ಕುಂಬಳದಲ್ಲಿರುವ ಬೀಜಗಳಂತೂ ಬೆಲೆಯಲ್ಲೂ ದುಬಾರಿ ಹಾಗೆ ಆರೋಗ್ಯಕ್ಕೂ ಬಹಳ ಉತ್ತಮ. ಹಾಗಾದರೆ ಸಿಹಿ ಕುಂಬಳಕಾಯಿ ಬೀಜಗಳು ಎಷ್ಟು ಆರೋಗ್ಯಕರ ಅಂಶಗಳ ಅಡಗಿಸಿಕೊಂಡಿದೆ ಎಂಬುದನ್ನು ನಾವಿಂದು ತಿಳಿಯೋಣ.
ಸಿಹಿ ಕುಂಬಳಕಾಯಿಗೆ ಚಿನ್ನದ ಬಣ್ಣ ಬರಲು ಈ ಪೋಷಕಾಂಶವೇ ಕಾರಣ!
ಸಿಹಿ ಕುಂಬಳಕಾಯಿಯಲ್ಲೂ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶವಿದ್ದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ. ಈ ತರಕಾರಿಗೆ ಚಿನ್ನದ ಬಣ್ಣ ಬರಲು ಈ ಪೋಷಕಾಂಶವೇ ಕಾರಣ. ಬೀಟಾ ಕ್ಯೋರೋಟಿನ್ ನಮ್ಮ ಜೀರ್ಣಾಂಗದಲ್ಲಿ ಜೀರ್ಣಗೊಂಡ ಬಳಿಕ ರೆಟಿನಾಲ್ ಎಂಬ ಪೋಷಕಾಂಶವಾಗಿ ಮಾರ್ಪಾಡು ಪಡೆಯುತ್ತದೆ. ಇದೊಂದು ವಿಟಮಿನ್ ಎ ಆಗಿದ್ದು ಕಣ್ಣಿಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ. ಸಿಹಿ ಕುಂಬಳಕಾಯಿ ಬೀಜಗಳು ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ ಮತ್ತು ಕ್ಯಾನ್ಸರ್‌ನಿಂದಲೂ ರಕ್ಷಣೆ ಪಡೆಯಲು ಇವು ಸಹಕಾರಿಯಾಗಿದೆ.
ಚಯಾಪಚಯವನ್ನು ಸುಧಾರಿಸುತ್ತದೆ!
ಕುಂಬಳಕಾಯಿ ಬೀಜಗಳ ಪ್ರಯೋಜನಗಳು ರಕ್ತದಲ್ಲಿನ ಸಕ್ಕರೆಯ ಮಟ್ಟಗಳು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಸಹಕಾರಿಯಾಗಿದೆ. ಇದು ಚಯಾಪಚಯವು ಯಾವುದೇ ತೊಂದರೆಗಳಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವಶ್ಯಕವಾಗಿದೆ.
