Categories
ಮಂಗಳೂರು

ಇನ್ಮುಂದೆ ಮೈಸೂರು ದಸರಾದಲ್ಲೂ ಕಂಬಳ ಕ್ರೀಡಾಕೂಟ!

ಇನ್ಮುಂದೆ ಮೈಸೂರು ದಸರಾದಲ್ಲೂ ಕಂಬಳ ಕ್ರೀಡಾಕೂಟ!

– ಗುರುಪುರ ಕಂಬಳೋತ್ಸವ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಘೋಷಣೆ
– ಮೈಸೂರು ದಸರಾದಲ್ಲಿ ಮೈಸೂರಿನಲ್ಲೇ ಮುಂದಿನ ವರ್ಷದಿಂದ ಕಂಬಳ ಕ್ರೀಡಾಕೂಟ!

NAMMUR EXPRESS NEWS
ಮಂಗಳೂರು: ಏ. 12ರಂದು ಶನಿವಾರ ಮಂಗಳೂರಿನ ಗುರುಪುರ ಮಾಣಿಬೆಟ್ಟು ಗುತ್ತಿನ ಗದ್ದೆಯಲ್ಲಿ ನಡೆದ ಎರಡನೇ ವರ್ಷದ ಹೊನಲು ಬೆಳಕಿನ ಮೂಳೂರು – ಅಡ್ಡೂರು ಜೋಡುಕರೆ ಕಂಬಳ “ಗುರುಪುರ ಕಂಬಳೋತ್ಸವ”ದ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿ ಮಾತಾಡಿದರು.
ತುಳುನಾಡಿನ ಸಂಸ್ಕೃತಿಯಾಗಿರುವ ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ರಾಜ್ಯದ ಸಾಂಸ್ಕೃತಿಕ ಹಬ್ಬವಾದ ಮೈಸೂರು ದಸರಾದಲ್ಲಿ ಮೈಸೂರಿನಲ್ಲೇ ಮುಂದಿನ ವರ್ಷದಿಂದ ಕಂಬಳ ಕ್ರೀಡಾಕೂಟ ಆಯೋಜಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಿಸಿದರು.
ಗುರುಪುರದಲ್ಲಿ ನಡೆಯುತ್ತಿರುವ ಮೂಳೂರು ಅಡ್ಡೂರು ಜೋಡುಕೆರೆ ಕಂಬಳದ ಸಮಾರೋಪ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿ ಕರಾವಳಿಗರಿಗೆ ಖುಷಿಯ ವಿಚಾರವೊಂದನ್ನು ಹೇಳಿದ್ದಾರೆ.
ಜಾತಿ, ಧರ್ಮ ಮರೆತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಂಬಳವನ್ನು ಇದೇ ರೀತಿ ಮುಂದುವರೆಸಲು ಸರ್ಕಾರ ಎಲ್ಲಾ ರೀತಿಯ ಸಹಕಾರವನ್ನೂ ನೀಡಲಿದೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.