Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್! | ಒಂದೇ ದಿನದಲ್ಲಿ ಬಾಯಿ ಹುಣ್ಣಿನಿಂದ ಮುಕ್ತಿ!

ಆರೋಗ್ಯ ಎಕ್ಸ್ ಪ್ರೆಸ್!

ಒಂದೇ ದಿನದಲ್ಲಿ ಬಾಯಿ ಹುಣ್ಣಿನಿಂದ ಮುಕ್ತಿ!
– ಈ ಮನೆಮದ್ದು ಟ್ರೈ ಮಾಡಿ

NAMMUR EXPRESS NEWS
ಬಾಯಿಹುಣ್ಣು ವಿಪರೀತ ನೋವನ್ನು ಉಂಟು ಮಾಡುತ್ತದೆ. ಏನನ್ನು ತಿನ್ನಲೂ ಸಾಧ್ಯವಾಗದಷ್ಟು ಉರಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇದರಿಂದ ಒಮ್ಮೆ ಮುಕ್ತಿ ಸಿಕ್ಕರೆ ಸಾಕು ಎನಿಸುವುದು ಸುಳ್ಳಲ್ಲ. ಆದರೆ ಇದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ಇದನ್ನು ಬೇಗ ಗುಣಪಡಿಸಿಕೊಳ್ಳಬಹುದಾಗಿದೆ.

ಹಾಗಾದರೆ ಬಾಯಿಹುಣ್ಣು ಕಡಿಮೆ ಮಾಡುವ ಮನೆಮದ್ದುಗಳಾವವು? ಇಲ್ಲಿದೆ ಮಾಹಿತಿ.

ಬಾಯಿಹುಣ್ಣು, ಸಾಮಾನ್ಯವಾಗಿ ಎಲ್ಲರನ್ನೂ ಕಾಡಿರುತ್ತದೆ. ಆಹಾರ ಸೇವನೆಯಲ್ಲಿ ಬದಲಾವಣೆ, ಜೀವನಶೈಲಿಯಲ್ಲಿ ವ್ಯತ್ಯಾಸ, ದೇಹದಲ್ಲಿ ಉಷ್ಣತೆಯಾದರೆ ಬಾಯಿ, ತುಟಿಯ ಒಳಗೆ ಗುಳ್ಳೆಗಳಾಗುತ್ತವೆ.
– ಬಾಯಿಯ ಹುಣ್ಣಿಗೆ ಪೇರಳೆ ಎಲೆ ರಾಮಬಾಣವಾಗಿದೆ.
ಈ ಎಲೆಯ ಚಿಗುರನ್ನು ನೀರಿನಲ್ಲಿ ಕುದಿಸಿ, ಕಷಾಯದ ರೀತಿಯಲ್ಲಿ ಸೇವನೆ ಮಾಡಬಹುದು ಅಥವಾ ಆ ಚಿಗುರನ್ನು ಅಗೆದು ತಿನ್ನುವುದರಿಂದಲೂ ಬಾಯಿಹುಣ್ಣಿನಿಂದ ಒಂದೇ ದಿನದಲ್ಲಿ ಮುಕ್ತಿ ಸಿಗುತ್ತದೆ.

– ಬಾಯಿ ಹುಣ್ಣನ್ನು ನಿವಾರಿಸಲು ತುಪ್ಪ ಮತ್ತು ಉಪ್ಪಿನ ಸೇವನೆ ಒಳ್ಳೆಯದು.
ಆಹಾರದಲ್ಲಿ ತುಪ್ಪವನ್ನು ಸೇವನೆ ಮಾಡುವುದಿರಬಹುದು ಅಥವಾ ಆ ಹುಣ್ಣಿನ ಮೇಲೆ ತುಪ್ಪವನ್ನು ಹಚ್ಚುವುದರಿಂದಲೂ ಹುಣ್ಣು ಕಡಿಮೆಯಾಗುತ್ತದೆ. ಇನ್ನು ಉಪ್ಪು ಮತ್ತು ತುಪ್ಪವನ್ನು ಸೇರಿಸಿ ಹುಣ್ಣಿನ ಮೇಲೆ ಇಡುವುದರಿಂದ ಒಂದೇ ದಿನದಲ್ಲಿ ನೋವಿನ ಜೊತೆಗೆ ಬಾಯಿಯ ಹುಣ್ಣು ಕೂಡ ಮಾಯವಾಗುತ್ತದೆ.

– ಉಪ್ಪು ನೀರಿನಿಂದ ಚೆನ್ನಾಗಿ ಬಾಯಿ ಮುಕ್ಕಳಿಸುವುದರಿಂದಲೂ ಹುಣ್ಣು ಕಡಿಮೆಯಾಗುತ್ತದೆ. ಆದರೆ ಇದು ವಾಸಿಯಾಗಲು ಸಮಯ ತೆಗೆದುಕೊಳ್ಳಬಹುದು.

– ಬಾಯಿ ಹುಣ್ಣಿಗೆ ಇನ್ನೊಂದು ಪರಿಣಾಮಕಾರಿ ಮನೆಮದ್ದು ಎಂದರೆ ಅದು ಲವಂಗ.
ಪ್ರತಿದಿನ ಒಂದೆರಡು ಲವಂಗವನ್ನು ಜಗಿದು, ಅದರ ರಸವನ್ನು ಹುಣ್ಣುಗಳಿಗೆ ತಾಗುವಂತೆ ಮಾಡಬೇಕು. ಈ ರೀತಿ ಮಾಡುವುದರಿಂದ ಬಹಳ ಬೇಗ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

– ಬಾಯಿಹುಣ್ಣು ಅಥವಾ ಅಲ್ಸರ್‌‌ನಂತಹ ಸಮಸ್ಯೆ ಇರುವವರು ಪ್ರತಿದಿನ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.