Categories
ಹೊಸನಗರ

ಹುಲಿಕಲ್ ಘಾಟ್ ರಸ್ತೆ ಜಾಮ್ ಜಾಮ್..!

ಹುಲಿಕಲ್ ಘಾಟ್ ರಸ್ತೆ ಜಾಮ್ ಜಾಮ್..!
– ಹೊಸನಗರ, ಕರಾವಳಿ ಸಂಪರ್ಕ ಬೆಸೆಯುವ ಘಾಟಿ
– ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವರೇ?

NAMMUR EXPRESS NEWS
ಮಳೆಗಾಲ ಎಂದರೆ ಘಾಟಿಗಳಲ್ಲಿ ಪ್ರಯಾಣ ಅಪಾಯಕಾರಿ… ಮರಗಳು ಅಡ್ಡಲಾಗಿ ಬೀಳುವುದು, ಗುಡ್ಡ ಕುಸಿತವಾಗುವುದು, ಅದರ ನಡುವೆ ಭಾರೀ ಗೂಡ್ಸ್ ವಾಹನಗಳು ಸಂಚಾರಿಸುವ ಹುಲಿಕಲ್ ಘಾಟ್ ರಸ್ತೆಯಲ್ಲಿ ವಾಹನ ಕೆಟ್ಟು ನಿಂತರೆ ರಾತ್ರಿಯೆಲ್ಲಾ ಬಹುದೂರದ ಊರಿಗೆ ಹಾಗೂ ಆಸ್ಪತ್ರೆಗಳಿಗೆ ನೂರಾರು ಬಸ್ಸುಗಳಲ್ಲಿ ಓಡಾಡುವ ಜನರ ಸ್ಥಿತಿ ಹೇಳತೀರದು.
ಸೋಮವಾರ ರಾತ್ರಿ ಸುಮಾರು ಹನ್ನೊಂದು ಘಂಟೆ ಸುಮಾರಿಗೆ ಭಾರೀ ವಾಹನವೊಂದು ಮಧ್ಯ ರಸ್ತೆಯಲ್ಲಿ (ದೇವಸ್ಥಾನದ ಹತ್ತಿರದ ತಿರುವು )ಕೆಟ್ಟು ನಿಂತು ರಸ್ತೆ ಜಾಮ್ ಆದ ಪರಿಣಾಮ ನೂರಾರು ವಾಹನಗಳು ರಸ್ತೆ ಮದ್ಯೆ ನಿಲ್ಲುವಂತಾಗಿ ಸಂಚಾರ ಅಸ್ತವ್ಯಸ್ತವಾಗಿ ಅಲ್ಲಿಯವರೆಗೂ ರಸ್ತೆ ಮಧ್ಯೆ ನಿಂತ ಪ್ರಯಾಣಿಕರ ಪಾಡು ಹೇಳತೀರದು.ಪ್ರಸ್ತುತ ಹುಲಿಕಲ್ ಘಾಟಿಗೆ ಮುಂಚಿತವಾಗಿ ಒಂದು ಚೆಕ್ ಪೋಸ್ಟ್ ಇದೆ. ಹಾಗೆಯೇ ಮುಗಿದ ತಕ್ಷಣ ಹೊಸಂಗಡಿಯಲ್ಲಿ ಚೆಕ್ ಪೋಸ್ಟ್ ಇದೆ.
ಆದರೆ ಇಷ್ಟೆಲ್ಲಾ ಅವ್ಯವಸ್ಥೆ, ಸಾವಿರಾರು ಪ್ರಯಾಣಿಕರು ರಾತ್ರಿಯೆಲ್ಲಾ ಪರದಾಡು ವಂತಾದರೂ ಶೀಘ್ರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ ಎಂಬುದು ನೊಂದ ಪ್ರಯಾಣಿಕರ ಮತ್ತು ಸ್ಥಳೀಯರ ಪ್ರಶ್ನೆ.ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚುವರಿ ಸಿಬ್ಬಂದಿಗಳನ್ನು ರಾತ್ರಿ ಪಾಳಯಕ್ಕೆ ನೇಮಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಅಗ್ರಹ.

ವರದಿ: ಹೆಚ್. ವಾಸಪ್ಪ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.