Categories
ತೀರ್ಥಹಳ್ಳಿ

ಮಲೆನಾಡ ಹಲವೆಡೆ ಅಪಾಯಕ್ಕೆ ಒಣಗಿ ನಿಂತ ಮರಗಳು!

ಮಲೆನಾಡ ಹಲವೆಡೆ ಅಪಾಯಕ್ಕೆ ಒಣಗಿ ನಿಂತ ಮರಗಳು!
– ರಸ್ತೆ ಬದಿ, ಜನ ವಸತಿ ಪ್ರದೇಶದಲ್ಲಿ ಮರಗಳು
– ಗಡಿಕಲ್ಲಿನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಮರ

ತೀರ್ಥಹಳ್ಳಿ / ಕೊಪ್ಪ: ಮಲೆನಾಡಲ್ಲಿ ಮಳೆ ಜೋರಾಗಿದೆ. ಎಲ್ಲೆಡೆ ಮರ, ವಿದ್ಯುತ್ ಕಂಬಗಳು ಧರೆಗೆ ಉರುಳುತ್ತಿವೆ. ಈ ವರ್ಷದ ಮಳೆಯಲ್ಲಿ ಮರ ಬಿದ್ದು ಈಗಾಗಲೇ ಇಬ್ಬರು ಜೀವ ಕಳೆದುಕೊಂಡಿದ್ದಾರೆ.
ಇನ್ನು ರಸ್ತೆ ಬದಿ ಒಣಗಿ ನಿಂತ ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೂ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ಮಾಡುತ್ತಿದ್ದಾರೆ. ಗಡಿಕಲ್ ಅಲ್ಲಿ ಮರ ಅಪಾಯ!: ತೀರ್ಥಹಳ್ಳಿ ಕೊಪ್ಪ ತಾಲ್ಲೂಕಿನ ಗಡಿಭಾಗ ಗಡಿಕಲ್ಲು ಸರ್ಕಲ್ ಬಸ್ ನಿಲ್ದಾಣದ ಮುಂಭಾಗ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ ಜಾಗದಲ್ಲಿ ಬಹಳಷ್ಟು ವರ್ಷ ಹಳೆಯದಾದ ಬೃಹದಾಕಾರದ ಮರವೊಂದು ಒಣಗಿ ನಿಂತಿದ್ದು, ಇತ್ತೀಚಿನ ದಿನಗಳಲ್ಲಿ ಅದರ ರೆಂಬೆಗಳು ಪ್ರತಿನಿತ್ಯ ಇಲ್ಲಿ ಓಡಾಡುವ ಬಹಳಷ್ಟು ಜನರ ತಲೆಮೇಲೆ ಬೀಳುತ್ತಿದೆ. ಈ ಮರದ ಕೆಳಗೆ ಬಸ್ ಗಾಗಿ ಕಾಯುವವರು, ಶಾಲಾ ಮಕ್ಕಳು, ಸಾರ್ವಜನಿಕರು ನಿಲ್ಲುವ ಜಾಗವಾಗಿದ್ದು ಇದಲ್ಲದೇ ಮರದ ಪಕ್ಕದಲ್ಲೇ ಎರಡು ವಿದ್ಯುತ್ ಮಾರ್ಗ ಕೂಡ ಹಾದು ಹೋಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ 169 ರ ಪಕ್ಕದಲ್ಲೇ ಸದಾ ಜನಜಂಗುಳಿ ಇರುವ ಪ್ರದೇಶವಾಗಿದ್ದು, ಒಂದು ವೇಳೆ ಮರ ಬಿದ್ದರೆ ಬಸ್ ನಿಲ್ದಾಣ ಸೇರಿದಂತೆ ಅಂಗಡಿ ಮಳಿಗೆಗಳು ಹಾಗೂ ಜನವಸತಿ ಪ್ರದೇಶದ ಮೇಲೆ ಅಪಾರ ಹಾನಿಯುಂಟಾಗುವುದಲ್ಲದೇ ಜನರ ಜೀವಕ್ಕೂ ಸಹ ಅಪಾಯವಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ದೇವಂಗಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದು ಸಾರ್ವಜನಿಕರಿಂದ ಅರ್ಜಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಳಗಟ್ಟೆಯಲ್ಲಿ ಬಸ್ ನಿಲ್ದಾಣ ಸಮೀಪವೇ ಒಣಗಿ ನಿಂತ ಮರ!

ಬಳಗಟ್ಟೆ ಬಸ್ ನಿಲ್ದಾಣ ಸಮೀಪವೇ ಒಣಗಿದ ಮರ ಇದೆ. ಇದು ಅಕಸ್ಮಾತ್ ಜನ ಇರುವಾಗ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಮಲೆನಾಡ ಅನೇಕ ಭಾಗದಲ್ಲಿ ಈ ಸಮಸ್ಯೆ ಇದೆ. ತಾಲೂಕು ಆಡಳಿತ ಈ ಬಗ್ಗೆ ಗಮನಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.