ಶ್ರೀ ನಾಗೇಂದ್ರ ಸ್ವಾಮಿ ದೇಗುಲದಲ್ಲಿ ನಾಗರಪಂಚಮಿ ಜಾತ್ರೋತ್ಸವ..!
– ಜುಲೈ 29 ರಂದು ನಾಗರ ಪಂಚಮಿಯ ವಿಶೇಷ ಪೂಜೆ
NAMMUR EXPRESS NEWS
ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನ, ನಾಗರಹಳ್ಳಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ನಾಗರಪಂಚಮಿಯ ಜಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಭಕ್ತ ಮಹಾಶಯರು ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಜುಲೈ 29 ರಂದು ಮಂಗಳವಾರದಂದು, ಶ್ರೀ ಸ್ವಾಮಿಗೆ ನಾಗರ ಪಂಚಮಿ ಅಂದು ವಿಶೇಷ ಪೂಜಾಸಹಿತ ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಮುಜರಾಯಿ ಅಧಿಕಾರಿಗಳು ಹೊಸನಗರ ತಾಲೂಕು, ವ್ಯವಸ್ಥಾಪಕ ಸಮಿತಿ, ಅರ್ಚಕರು, ಸರ್ವ ಗ್ರಾಮಸ್ಥರು ಹಾಗೂ ಭಕ್ತಾದಿಗಳು ನಾಗರಹಳ್ಳಿ ಸ್ವಾಮಿಯ ವಿಶೇಷ ಪೂಜೆಗೆ ಸರ್ವರಿಗೂ ಕೂಡ ಸ್ವಾಗತವನ್ನು ಕೋರಿದ್ದಾರೆ.
