Categories
ಚಿಕ್ಕಮಗಳೂರು

ಕಾಫಿ ನಾಡಲ್ಲಿ ಕಾಡು ಆನೆಗೆ ಮತ್ತೊಂದು ಬಲಿ!

ಕಾಫಿ ನಾಡಲ್ಲಿ ಕಾಡು ಆನೆಗೆ ಮತ್ತೊಂದು ಬಲಿ!
– ಬಾಳೆಹೊನ್ನೂರು ಸಮೀಪ ವ್ಯಕ್ತಿ ತುಳಿದು ಸಾಯಿಸಿದ ಕಾಡಾನೆ
– ರಸ್ತೆ ತಡೆ ನಡೆಸಿ ಜನರ ಆಕ್ರೋಶ: ಅರಣ್ಯ ಇಲಾಖೆ ಅಧಿಕಾರಿಗಳೇ ಹುಷಾರ್

NAMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂದುವರೆದ ಕಾಡಾನೆ ದಾಳಿ ವಾರದಲ್ಲಿ ಎರಡನೇ ವ್ಯಕ್ತಿ ಬಲಿಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಅಂಡವಾನೆ ಗ್ರಾಮದಲ್ಲಿ ಘಟನೆ ನಡೆದಿದ್ದು ಸುಬ್ಬೇಗೌಡ (64) ಮೃತ ದುರ್ದೈವಿ. ಭೀಕರವಾಗಿ ಸಾಯಿಸಿ ಸ್ಥಳದಲ್ಲೇ ಫೀಳಿಡುತ್ತಿರುವ ಕಾಡಾನೆ ಇದೀಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಬಾಳೆ ಹೊನ್ನುರಿನ ಬನ್ನೂರಿನಲ್ಲಿ ಅನಿತಾ ಎಂಬ ಮಹಿಳೆ ಬಲಿಯಾಗಿದ್ದರು. ಇದೀಗ ಇಲ್ಲೇ ಮತ್ತೊಂದು ಬಲಿ ಆಗಿದೆ. ಅಂಡವಾನೆ ಸಮೀಪದ ಬನ್ನೂರು ಗ್ರಾಮದಲ್ಲಿ ಘಟನೆ ನಡೆದಿತ್ತು. ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತವಾಗಿದ್ದು ಅಹೋರಾತ್ರಿ ಧರಣಿ ನಡೆಸಿ ರಸ್ತೆ ಬಂದ್ ಮಾಡಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಕೂಡ ಬಾಳೆಹೊನ್ನೂರು,, ಖಾoಡ್ಯಾ ಸ್ವಯಂ ಪ್ರೇರಿತಬಂದ್ ಕರೆ ನೀಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.