ಶಾಲಾ ಕಾಲೇಜು ಕ್ರೀಡಾಕೂಟಗಳು ಶುರು!
– ಮಕ್ಕಳ ಮೊಗದಲ್ಲಿ ಆಟದ ಹುಮ್ಮಸ್ಸು
– ಗೆಲುವಿನ ಕನಸು ಹೊತ್ತ ಮಕ್ಕಳ ಸಾಹಸ
– ಆರೋಗ್ಯದ ಬಗ್ಗೆಯೂ ಗಮನ ಇರಲಿ!
NAMMUR EXPRESS NEWS
ತೀರ್ಥಹಳ್ಳಿ: ಕ್ರೀಡೆ ಎಂಬುದು ಮಕ್ಕಳ ಬದುಕಿನಲ್ಲಿ ಸ್ಪರ್ಧಾತ್ಮಕ ಅಂಶಗಳನ್ನು ಮನಸ್ಸಿಗೆ ಹಚ್ಚುವ ದೊಡ್ಡ ಚಟುವಟಿಕೆ.
ಇದೀಗ ಎಲ್ಲೆಡೆ ಕ್ರೀಡೆಗೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ಕ್ರೀಡೆ ಅದೊಂದು ಅದ್ಭುತ ಸುಖ-ದುಃಖವನ್ನು ಹಂಚಿಕೊಂಡ ಕ್ಷಣ. ಸೋಲನ್ನ ಮರೆಸಿ ಗೆಲುವಿನ ನಗು ತಂದ ಕ್ಷಣ. ನೂರಾರು ಸ್ನೇಹ ಸಂಬಂಧವನ್ನ ಕಲ್ಪಿಸಿ ಕೊಡುವಂತಹ ಕ್ರೀಡೆ ಸ್ನೇಹ, ಸಾಮರಸ್ಯದ ಪ್ರತೀಕ. ಶಾಲಾ ಹಂತದಲ್ಲೇ ಮಕ್ಕಳಿಗೆ ಕ್ರೀಡಾಸಕ್ತಿ ಬೆಳೆಸಿದರೆ ಮುಂದಿನ ದಿನ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಅಲ್ಲದೆ ಜನಮುಕಿಯಾಗಿ ಬದುಕುವ ಕಲೆಯನ್ನು ಈ ಕ್ರೀಡೆ ಹೇಳಿ ಕೊಡುತ್ತದೆ.
ಶಾಲಾ ಕಾಲೇಜುಗಳಲ್ಲಿ ಕ್ರೀಡಾಕೂಟ ಶುರುವಾಗಿದ್ದು ಕ್ರೀಡೆಯ ತಯಾರಿಯನ್ನು ನಡೆಸ್ತಿದ್ದಾರೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಜತೆಗೆ ಕ್ರೀಡೆಯಿಂದಲೂ ಸುಂದರ ಬದುಕು ಕಟ್ಟಿಕೊಳ್ಳಬಹುದು. ಉತ್ತಮ ಅರೋಗ್ಯ ಕಂಡು ಕೊಳ್ಳಬಹುದು. ಆದರೆ ಅದಕ್ಕೆ ಕಠಿಣ ಶ್ರಮ ಅಗತ್ಯ.ಗ್ರಾಮೀಣ ಪ್ರದೇಶದ ಮಕ್ಕಳು ಓದಿನ ಜತೆಗೆ ಕ್ರೀಡೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು.
ಗ್ರಾಮೀಣ ಪ್ರತಿಭೆಗಳು ತಾಲೂಕು ಜಿಲ್ಲಾ,ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟ ಕ್ರೀಡೆಯಲ್ಲಿ ವಿಜೇತರು ಆಗಿದ್ದಾರೆ. ಇನ್ನು ಹೆಚ್ಚು ಹೆಚ್ಚಾಗಿ ಸಾಧನೆ ಮಾಡಬೇಕು. ಕ್ರೀಡೆಯನ್ನು ಯಾವುದೊ ಹುಚ್ಚಿಗೆ ಆಡಬಾರದು. ಸಾಧನೆ, ಧೈರ್ಯಕ್ಕಾಗಿ ಕ್ರೀಡೆ ಬೇಕು.
ಎಲ್ಲಾ ಕ್ರೀಡಾಪಟುಗಳಿಗೆ ನಮ್ಮದೊಂದು ಸಲಾಂ!
