3 ಕೋಟಿ ಬೆಂಝ್ ಜೀಪ್ ಒಡೆಯನಾದ ಸಾಮಾನ್ಯ ರೈತ!
* ಬಿಳಿಪಂಚೆಯಲ್ಲೇ ಬಂದು ಬೆಂಝ್ ಜೀಪ್ ಖರೀದಿಸಿದ ಮಹಾರಾಷ್ಟ್ರದ ಕಿಸಾನ್
* ಹೊಲ ಉಳೋಕು ಸೈ, ಜೀಪ್ ಒಡ್ಸೋಕು ಜೈ!
NAMMUR EXPRESS NEWS
ಶ್ರದ್ಧೆ, ಆಸಕ್ತಿ ಮತ್ತು ಶ್ರಮದ ಹಿಂದೆ ಓಡಿದರೆ ಯಶಸ್ಸು ಖಂಡಿತ ನಮ್ಮದಾಗುತ್ತದೆ. ಹೌದು ಗೆದ್ದವನಿಗೆ ಒಂದೇ ದಾರಿ, ಸೋತವನಿಗೆ ನೂರು ದಾರಿಯಂತೆ.. ಅದೇ ರೀತಿ ಇಲ್ಲೊಬ್ಬ ಮಹಾರಾಷ್ಟ್ರ ದ ಸಾಮಾನ್ಯ ರೈತ, ರೈತನ ಗತ್ತು ಜಗತ್ತಿಗೆ ಗೊತ್ತು ಅನ್ನುವ ರೀತಿ ಬಿಳಿಪಂಚೆ ಧರಿಸಿ ಬೆಂಝ್ ಶೋರೂಂಗೆ ಭೇಟಿ ನೀಡೋದಷ್ಟೇ ಅಲ್ಲದೆ ಮೂರು ಕೋಟಿ ದುಬಾರಿ ಬೆಂಝ್ ಜೀಪ್ ಖರೀದಿ ಮಾಡಿದ್ದಾರೆ.
ಹೌದು ರೈತನೊಬ್ಬ ಮನಸ್ಸು ಮಾಡಿದರೆ ದೇಶವನ್ನೇ ಆಳಬಹುದು ಅಂತಹದರಲ್ಲಿ ಈ ಬೆಂಝ್ ಜೀಪ್ ಯಾವ ಲೆಕ್ಕ ಅಲ್ವಾ??
ಬರೀ ನೇಗಿಲು ಹಿಡಿದು ಹೊಲ ಉಳಲು ಮಾತ್ರವಲ್ಲ, ಜೀಪ್ ಹಿಡಿದು ದೇಶ ಸುತ್ತಲೂ ಸೈ ಎನಿಸಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೈತರೆಂದರೆ ಕೀಳಾಗಿ ಕಾಣುವುದು, ರೈತರು ಸಾಮಾನ್ಯವಾಗಿ ಬಡವರಾಗಿಯೇ ಉಳಿದಿರುತ್ತಾರೆ ಎಂಬ ಭ್ರಮೆಯಲ್ಲಿ ಜನ ಬದುಕುತ್ತಿದ್ದಾರೆ. ಆಧುನಿಕ ಯುಗದ ಮಕ್ಕಳು ತಾನು ಡಾಕ್ಟರ್, ಇಂಜಿನಿಯರ್, ಲಾಯರ್ ಹೊರತು ರೈತನಾಗುತ್ತೇನೆಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ.. ಯಾಕೆಂದರೆ ಪೋಷಕರು ರೈತರೆಂದರೆ ಬಡವರು ರೈತರೆಂದರೆ ಸಾಮಾನ್ಯ ವರ್ಗಕ್ಕೆ ಸೇರಿದ ಜನರು ಎಂದು ಬೆಳವಣಿಗೆಯ ಹಂತದಲ್ಲಿಯೇ ತೋರಿಸಿಕೊಟ್ಟಿರುತ್ತಾರೆ.
ಆದರೆ ಇಲ್ಲೊಬ್ಬ ರೈತ ಆ ಎಲ್ಲಾ ರೀತಿಯ ಸವಾಲುಗಳಿಗೆ ಬ್ರೇಕ್ ಕೊಟ್ಟಿದ್ದಾನೆ. ರೈತನೆಂದರೆ ಸಾಮಾನ್ಯವಲ್ಲ ಆತ ಒಬ್ಬ ಉದ್ಯಮಿ, ವ್ಯಾಪಾರಿ ಎಂದು ತೋರಿಸಿಕೊಟ್ಟಿದ್ದಾನೆ.
ಒಬ್ಬ ರೈತ ಮನಸು ಮಾಡಿದರೆ ಇಡೀ ದೇಶವನ್ನೇ ತನ್ನದಾಗಿಸಿಕೊಳ್ಳಬಹುದು. ಅದೇ ರೀತಿ ಈತ ತನ್ನ ಪಂಚೆಯಲ್ಲಿಯೇ ಬೆಂಝ್ ಶೋ ರೂಂಗೆ ಭೇಟಿ ನೀಡೋದಲ್ಲದೆ, ಸುಮಾರು 3 ಕೋಟಿ ದುಬಾರಿಯ ಬೆಂಝ್ ಜೀಪ್ ಖರೀದಿಸಿ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.
