Categories
ರಾಜ್ಯ

ಕರ್ನಾಟಕ ಬಂದ್: ಏನು ಇರುತ್ತೆ ಏನು ಇರಲ್ಲ?

ಕರ್ನಾಟಕ ಬಂದ್: ಏನು ಇರುತ್ತೆ ಏನು ಇರಲ್ಲ?

– ಖಾಸಗಿ ಶಾಲೆಗಳಿಗೆ ರಜೆ ಇಲ್ಲ!
– ಸರ್ಕಾರಿ ಕಚೇರಿಗಳ ಕತೆ ಏನು?ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!

NAMMUR EXPRESS NEWS
ಬೆಂಗಳೂರು: ಕನ್ನಡ ಪರ ಸಂಘಟನೆಗಳು ಮಾರ್ಚ್‌ 22ರಂದು ಅಂದರೆ ಇಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ. ಹೀಗಾಗಿ, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆಯೋ? ಇಲ್ಲವೋ? ಸಾರಿಗೆ ಸೌಲಭ್ಯ ವ್ಯತ್ಯಯವಾಗುತ್ತದೆಯೇ? ಎಂಬ ಪ್ರಶ್ನೆ ಹಲವರಲ್ಲಿದೆ.

– ಖಾಸಗಿ ಶಾಲೆಗಳು ರಜೆ ಇಲ್ಲ

ಬಂದ್‌ನ ಬಗ್ಗೆ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟವು ನೈತಿಕ ಬೆಂಬಲ ನೀಡಿದೆ. ಆದರೆ, ಶಾಲೆಗಳು ಎಂದಿನಂತೆ ನಡೆಯಲಿವೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌ ಅವರು ತಿಳಿಸಿದರು. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದ್ದು, ಬಂದ್‌ಗೆ ನೇರ ಬೆಂಬಲ ನೀಡುವುದಿಲ್ಲ. ಶಾಲಾಗಳಿಗೆ ರಜೆ ಕೂಡ ನೀಡಲ್ಲ. ಎಂದಿನಂತೆ ಶಾಲೆಗಳು ತೆರೆದಿರಲಿವೆ ಎಂದು ಮಾಹಿತಿ ನೀಡಿದ್ದಾರೆ. ಅದೇ ರೀತಿ ಖಾಸಗಿ ಕಾಲೇಜುಗಳು ಕೂಡ ರಜೆ ಇಲ್ಲ.

ಸರ್ಕಾರಿ ಕಚೇರಿಗಳ ಕತೆ ಏನು?

ಮಾರ್ಚ್‌ 22ನಾಲ್ಕನೇ ಶನಿವಾರ ಆಗಿರುವ ಹಿನ್ನೆಲೆ ಸರ್ಕಾರಿ ಕಚೇರಿಗಳು ರಜೆ ಇರಲಿವೆ. ಉಳಿದಂತೆ ಸೇವಾ ವಲಯದ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ಇನ್ನು ಬ್ಯಾಂಕ್‌ಗಳು ಕೂಡ ನಾಲ್ಕನೇ ಶನಿವಾರ ಹಿನ್ನೆಲೆ ರಜೆ ಇರಲಿವೆ.

ಏನಿರುತ್ತೆ?

ನಮ್ಮ ಮೆಟ್ರೋ,
ಬಿಎಂಟಿಸಿ ಬಸ್‌ ಸೇವೆ
ಕೆಎಸ್‌ಆರ್‌ಟಿಸಿ ಬಸ್‌ ಸೇವೆ
ಶಾಲಾ ಕಾಲೇಜುಗಳು
ಮಾರುಕಟ್ಟೆಗಳು
ಆಸ್ಪತ್ರೆ, ವೈದ್ಯಕೀಯ ಸೇವೆಗಳು
ಉಪಹಾರ ಮಂದಿರ, ಹೋಟೆಲ್‌ಗಳು
ಬಾರ್‌, ರೆಸ್ಟೋರೆಂಟ್‌, ಪಬ್‌ಗಳು

ಏನಿರಲ್ಲ?

ಓಲಾ-ಊಬರ್, ಆಟೋ ಸೇವೆ ವ್ಯತ್ಯಯ ಸಾಧ್ಯತೆ.
ಸಿನಿಮಾ ಮಂದಿರಗಳು ಬೆಳಗಿನ ಶೋ ಇರಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.