Categories
ಮಾಹಿತಿ ಸುದ್ದಿ

ಫ್ಯಾಷನ್ ಅಬ್ಬರ: ಜಾನಪದ ಕಲೆ ಈಗ ಎಲ್ಲೆಡೆ ಮಾಯ!

ಫ್ಯಾಷನ್ ಅಬ್ಬರ: ಜಾನಪದ ಕಲೆ ಈಗ ಎಲ್ಲೆಡೆ ಮಾಯ!
– ಜಾನಪದ ಕಲೆಗಳ ಉಳಿವಿಗೆ ಬೇಕಿದೆ ಯುವ ಜನತೆಗೆ ಅರಿವು
– ಗ್ರಾಮೀಣ ಭಾಗಗಳೂ ಸೋಷಿಯಲ್ ಮೀಡಿಯಾದ ಕಪಿ ಮುಷ್ಠಿಯಲ್ಲಿ!

ವಿಶೇಷ ವರದಿ: ಪ್ರಾಪ್ತಿ ಸಾಗರ

NAMMUR EXPRESS NEWS
ಇಂದಿನ ಆಧುನಿಕತೆಯಲ್ಲಿ ಎಲ್ಲವೂ ನಶಿಸಿ ಹೋಗುತ್ತಿದೆ. ಮಾನವೀಯತೆ, ಸಂಸ್ಕೃತಿ, ಸಂಪ್ರದಾಯ, ಆಚರಣೆ, ಗೌರವ ಇಲ್ಲವಾಗಿದೆ. ಓಡುತ್ತಿರುವ ಜಗತ್ತಲ್ಲಿ ಹಣ, ಪ್ರತಿಷ್ಠೆ, ಸ್ವಾರ್ಥ ಎಲ್ಲೆ ಮೀರುತ್ತಿದೆ. ಅದರಲ್ಲೂ ಈ ಹಿಂದೆ ಇದ್ದಂತಹ ಜಾನಪದ ಕಲೆಗಳು ಮಾಯವಾಗುತ್ತಿದೆ.
ಸೋಷಿಯಲ್ ಮೀಡಿಯಾ, ಟಿವಿ, ಫ್ಯಾಷನ್ ಅಬ್ಬರಕ್ಕೆ ನಮ್ಮ ಪದ್ಧತಿಗಳು ಮರೆಯಾಗಿವೆ. ಬದುಕಿನ ಒಂದು ಭಾಗದ ಜತೆಗೆ ಬದುಕಿನ ಮೌಲ್ಯ ಸಾರುವ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಗ್ರಾಮೀಣ ಪ್ರದೇಶದ ಜನತೆಯ ಮೇಲಿದೆ.
ಯುವಕರು ತಮ್ಮ ಹಿರಿಯರಿಂದ ಇವುಗಳನ್ನು ಕಲಿತು ಮುಂದೆ ಬರುವಂತಹ ಪೀಳಿಗೆಗೆ ಈ ಜಾನಪದ ಕಲೆಗಳ ಬಗ್ಗೆ ಅರಿವನ್ನಾದರೂ ಮೂಡಿಸಬೇಕು. ಜಂಜಾಟದಲ್ಲಿ ಬಳಲುತ್ತಿರುವವರಿಗೆ ಶಾಂತಿ, ನೆಮ್ಮದಿ ಅತ್ಯವಶ್ಯಕವಾಗಿದೆ. ಶಾಂತಿ, ನೆಮ್ಮದಿ ಸಿಗಬೇಕಾದರೆ ಇಂತಹ ಗ್ರಾಮೀಣ ಕಲೆಗಳಿಂದ ಮಾತ್ರ ಸಾಧ್ಯ. ಇಂದು ಮೊಬೈಲ್, ಟಿವಿ, ಕಂಪ್ಯೂಟರ್ ಇತ್ಯಾದಿ ವಸ್ತುಗಳಿಂದ ಎಲ್ಲಾ ಕಲೆಗಳು ಕೂಡ ಕುಂಠಿತಗೊಳ್ಳುತ್ತಿದೆ. ನಮ್ಮಲ್ಲಿ ಕಲಾವಿದರ ಕೊರತೆಯಿಲ್ಲ, ಆದರೆ,ಆ ಕಲಾವಿದರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆಗಳು ಮರೆಯಾಗುತ್ತಿವೆ. ಕಲಾವಿದರು ಇದ್ದರೂ ಕೂಡ ಅವರಿಗೆ ವೇದಿಕೆ ಇಲ್ಲ ಜೊತೆಗೆ ಇತ್ತೀಚಿನ ಯುವ ಜನತೆಗೆ ಈ ಜಾನಪದ ಕಲೆಗಳ ಬಗ್ಗೆ ಅರಿವೇ ಇಲ್ಲದಂತಾಗಿದೆ.

ಸಿನಿಮಾಗಳು, ರಿಯಾಲಿಟಿ ಶೋ ಹವಾ!

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು, ರಿಯಾಲಿಟಿ ಶೋಗಳು ಬಂದಿರುವುದಕ್ಕೆ ಜಾನಪದ ಕಲೆಗಳು ಸಂಪೂರ್ಣವಾಗಿ ಕುಂಠಿತವಾಗಿರುವುದಕ್ಕೆ ಇವು ಸಹ ಕಾರಣ ಎಂದೇ ಹೇಳಬಹುದು.
ಸೋಬಾನೆ ಪದ, ಗೀಗೀ ಪದ, ತತ್ವಪದ, ಲಾವಣಿ ಇನ್ನಿತರ ಜಾನಪದ ಪ್ರಕಾರಗಳು ಇಂದಿಗೂ ಮಹತ್ವ ಉಳಿಸಿಕೊಂಡಿವೆ. ಸಮಾಜದಲ್ಲಿ ಪ್ರೀತಿ ವಿಶ್ವಾಸವನ್ನ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಿ ನಮ್ಮ ನಾಡಿನ ಭವ್ಯ ಸಂಸ್ಕೃತಿಯನ್ನು ಬೆಳೆಸುವ ಕಾರ್ಯಕ್ಕೆ ಯುವ ಜನಾಂಗ ಮುಂದಾಗಬೇಕು. ಯುವ ಜನತೆಗೆ ನಾವು ಈ ಜಾನಪದ ಕಲೆಗಳ ಬಗ್ಗೆ ಅರಿವನ್ನ ಮೂಡಿಸಿದರೆ ಮುಂದಿನ ದಿನಗಳಲ್ಲಿ ಜಾನಪದ ಕಲೆಗಳು ಕೂಡ ಶಾಶ್ವತವಾಗಿ ಉಳಿಯುತ್ತದೆ, ನಶಿಸುವುದಿಲ್ಲ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕಾಡೆಮಿಗಳು, ವಿಶ್ವ ವಿದ್ಯಾಲಯಗಳು ಬೆಳಕು ಹರಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.