ಜೂ.13ರ ಶುಕ್ರವಾರ ಅನಾಹುತಗಳು ಸಂಭವಿಸುತ್ತಾ?!
* 13ನೇ ಶುಕ್ರವಾರ ಕೆಟ್ಟ ಕರಾಳ: ಅಮಾವಾಸ್ಯೆಗಿಂತ ಕೆಡುಕಾಗುವ ದಿನ ಅಂತೆ
* ಎಲ್ಲೆಂದರಲ್ಲಿ ಸಾವು ನೋವುಗಳು ಘಟಿಸುತ್ತಾ..?::ಹುಷಾರಾಗಿರಿ..!
NAMMUR EXPRESS NEWS
ಇಡೀ ದೇಶದಲ್ಲೆಡೆ ಶುಕ್ರವಾರ 13ನೇ ತಾರೀಕು ಕರಾಳ ದಿನವೆಂದು ನಂಬಲಾಗುತ್ತದೆ. ಭಾರತ ಅಷ್ಟೇ ಅಲ್ಲದೆ ಪಾಶ್ಚಿಮಾತ್ಯ ಜಗತ್ತು ಹೆದರಿ ನಿಬ್ಬೆರಗಾಗುವ ದಿನವಾಗಿದೆ.
ಜ್ಯೋತಿಷ್ಯ ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರವನ್ನು ಅರಿತ ಪಂಡಿತರು ಕೂಡ ಈ ವಿಚಾರವನ್ನು ನಂಬುತ್ತಾರೆ. ದೇಶದ ಹಲವು ಕಡೆ ಸಾವು ನೋವುಗಳು ಸಂಭವಿಸಿರುವುದು ಈ 13ನೇ ತಾರೀಕಿನ ಶುಕ್ರವಾರದಂದು. ಈ ದಿನದಂದು ರಾಹುವಿನ ಕೆಟ್ಟ ದೃಷ್ಟಿ ಹಾಗೂ ಕ್ಷುದ್ರ ಶಕ್ತಿಗಳ ಕೆಂಗಣ್ಣಿಗೆ ಜನರು ತುತ್ತಾಗುತ್ತಾರೆ ಎಂದು ನಂಬಲಾಗುತ್ತದೆ. ಇದು ಕಾಕತಾಳಿಯನೋ ಜನರ ಮೂಢನಂಬಿಕೆಯ ಗೊತ್ತಿಲ್ಲ. 13ರ ಶುಕ್ರವಾರ ಉಗ್ರರಿಗೆ ಅಚ್ಚುಮೆಚ್ಚಿನ ದಿನವೆಂದು ಹೇಳಲಾಗುತ್ತದೆ. ಇದು ಆಕ್ಸಿಡೆಂಟ್ ಹಾಗೂ ದುರಂತದ ದಿನ ಎಂದು ಗೂಗಲ್ ಕೂಡ ಹೇಳುತ್ತದೆ. ಮೂಡ ನಂಬಿಕೆ ಏನೇ ಇರಲಿ, ನೀವು ಹುಷಾರಾಗಿರಿ.
