Categories
ಚಿಕ್ಕಮಗಳೂರು

ಕೊಪ್ಪದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಕೊಪ್ಪದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ 
* ಮುಸ್ಲಿಂ ಸಂಯುಕ್ತ ಒಕ್ಕೂಟದಿಂದ ಪ್ರತಿಭಟನೆ ಆಯೋಜನೆ
* ಕೇಂದ್ರದ ತಿದ್ದುಪಡಿಯಿಂದ ದೇಶಾದ್ಯಂತ ಗೊಂದಲ – ಸುಧೀರ್ ಕುಮಾರ್ ಮುರೋಳ್ಳಿ

NAMMMUR EXPRESS NEWS
ಕೊಪ್ಪ ಪಟ್ಟಣದ ಪುರಭವನದಲ್ಲಿ ಕೊಪ್ಪ ತಾಲ್ಲೂಕು ಮುಸ್ಲಿಂ ಸಂಯುಕ್ತ ಒಕ್ಕೂಟದ ವತಿಯಿಂದ ವಕ್ಫ್ ಕಾಯ್ದೆ ತಿದ್ದುಪಡಿ ವಿರುದ್ಧ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು.
ಈ ಪ್ರತಿಭಟನೆಯಲ್ಲಿ ಭಾಗವಸಿಸಿದ ನಾಗರೀಕ ಹಕ್ಕುಗಳ ರಾಜ್ಯ ಘಟಕದ ಅಧ್ಯಕ್ಷರಾದ ಎಂ. ಹೆಚ್. ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ವಕ್ಫ್ ಹೆಸರಿನಲ್ಲಿ ಹಿಂದೂ ,ಮುಸ್ಲಿಂ ಇತರೇ ಧರ್ಮದವರ ಭೂಮಿಯ ಬಗ್ಗೆ ಹೋರಾಟಗಳಿಲ್ಲ. ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿಯ ಕಾಯಿದೆಯಲ್ಲಿನ ಕೆಲವು ಅಂಶಗಳಿಂದ ಇಡೀ ದೇಶದಲ್ಲಿ ಗೊಂದಲ ಹುಟ್ಟುಹಾಕಲಾಗುತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ ತಪಡಿಸಿದರು.
ಕರ್ನಾಟಕ ಉಲಮಾ ಸಂಘಟನೆಯ ಕಾರ್ಯದರ್ಶಿಗಳಾದ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ದೇಶದ ತ್ರಿವರ್ಣ ದ್ವಜವನ್ನು ನಮ್ಮ ಹೃದಯದಲ್ಲಿ ಹಾರಾಡಿಸುತ್ತೇವೆ. ನಮ್ಮ ಪೂರ್ವಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಕೊಟ್ಟವರು .
ಅಲ್ಪ ಸಂಖ್ಯಾತರ ಹಕ್ಕುಗಳನ್ನು ಕಾಪಾಡಬೇಕಾಗಿದ್ದು ಆಳುವವರ ಹೊಣೆಯಾಗಿದೆ. ಜಾತ್ಯಾತೀತ ವಿರೋಧಿಸುವವರು ಸಂವಿಧಾನ ವಿರೋಧಿಗಳು. ವಕ್ಫ್ ಬಗ್ಗೆ ತಿಳಿಯದವರು ಸುಳ್ಳುಗಳನ್ನು ಪ್ರಚಾರಮಾಡಿ ಜನರನ್ನು ದಾರಿತಪ್ಪಿಸುವ ಕೆಲಸ ನಮ್ಮ ದೇಶದಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮಹಮ್ಮದ್ ಶಾಹೀದ್ ರಿಜ್ವಿ, ಜಾಮಿಯಾ ಮಸೀದಿಯ ಅಧ್ಯಕ್ಷರಾದ ಆದಿಲ್ ಬಾಯ್ , ಮುಹಿಯುದ್ದೀನ್ ಮಸ್ಜಿದ್ ಖತೀಬರಾದ ಹನೀಫ್ ಖಾಸಿಮಿ, ನೂರುಲ್ ಆಲಂ ಜುಮಾ ಮಸ್ಜಿದ್ ಖತೀಬರಾದ ಸದ್ದಾಂ ಹುಸೈನ್ ಫೈಝಿ ಅಲ್ ಬುರ್ಹಾನಿ, ಕೊಪ್ಪ ಜಾಮಿಯಾ ಮಸೀದಿ ಗುರುಗಳಾದ ಅಬ್ದುಲ್ ಖಲೀಲ್ ಸಾಬ್, ಭಾರತ್ ರೈಸ್ ಗುರುಗಳು , ಹಾಗೂ ಕೊಪ್ಪ ತಾಲ್ಲೂಕಿನ ಎಲ್ಲಾ ಹುಲಾಮಾಕಳು ಭಾಗವಹಿಸಿದ್ದರು.
ಕಾರ್ಯಕಾರಿ ಸಮಿತಿಯ ಶಾಫಿ ಅಹ್ಮದ್, ಕಮಾಲಿಯ, ಅಶ್ರಫ್ ನಾರ್ವೆ, ಅಬ್ದುಲ್ಲಾ ಭಾರತ್ ರೈಸ್ ಮಿಲ್ ಹೀಗೆ ಕಮಿಟಿಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.