Categories
ಕರಾವಳಿ

ನಾಗರಹಾವಿಗೆ ಡೀಸೆಲ್ ಎರಚಿದವ ವಾರದಲ್ಲಿ ಅಸ್ವಸ್ಥ!

ನಾಗರಹಾವಿಗೆ ಡೀಸೆಲ್ ಎರಚಿದವ ವಾರದಲ್ಲಿ ಅಸ್ವಸ್ಥ!
– ಹಾವಿನ ಶಾಪಕ್ಕೆ ಗುರಿಯಾದನೇ ಕಾರ್ಮಿಕ
– ಕರಾವಳಿಯಲ್ಲಿ ನಡೆದ ಈ ಘಟನೆ ಭಾರೀ ವೈರಲ್?!

NAMMUR EXPRESS NEWS
ಕಿನ್ನಿಗೋಳಿ: ನಾಗರಹಾವಿನ ಮೇಲೆ ಡೀಸೆಲ್ ಎರಚಿದ ವ್ಯಕ್ತಿ ಒಂದೇ ವಾರದಲ್ಲಿ ಅಸ್ವಸ್ಥಗೊಂಡು ನಾಗರಹಾವಿನಂತೆ ಉರಿಯಿಂದ ಒದ್ದಾಡಿ ಆಸ್ಪತ್ರೆಗೆ ದಾಖಲಾಗಿರುವ ವಿಚಿತ್ರ ಘಟನೆಯೊಂದು ಕಿನ್ನಿಗೋಳಿಯಲ್ಲಿ ಸಂಭವಿಸಿದೆ. ಈ ಪ್ರಕರಣ ಇದೀಗ ಭಾರೀ ಚರ್ಚೆ ಮಾಡಿದೆ.

ಏನಿದು ಘಟನೆ?:

ಕಿನ್ನಿಗೋಳಿ ಅಪಾರ್ಟ್‌ಮೆಂಟ್‌ ಒಂದರ ಸಮೀಪ ಕಳೆದ ವಾರ ನಾಗರಹಾವು ಕಂಡುಬಂದಿತ್ತು. ಕಟ್ಟಡದ ಕಾವಲುಗಾರ ಈ ನಾಗರಹಾವನ್ನು ಓಡಿಸಲು ಅದರ ಮೇಲೆ ಡೀಸೆಲ್ ಎರಚಿದ್ದಾನೆ. ಡೀಸೆಲ್ ಉರಿಯಿಂದ ನಾಗರಹಾವು ಒದ್ದಾಡಿತ್ತು. ಸ್ಥಳೀಯರು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ಮಾಹಿತಿ ನೀಡಿದಾಗ ಅವರು ಬಂದು ಹಾವನ್ನು ರಕ್ಷಣೆ ಮಾಡಿ ಶ್ಯಾಂಪೂವಿನಲ್ಲಿ ಹಾವಿನ ಮೈ ತೊಳೆದು ಸಹಜ ಸ್ಥಿತಿಗೆ ತಂದು ಅನಂತರ ಕಾಡಿಗೆ ಬಿಟ್ಟಿದ್ದರು. ನಾಗರಹಾವಿನಂತ ಮೈ ಉರಿಯಿಂದ ಬಳಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆ ಇದೀಗ ಭಾರೀ ವೈರಲ್ ಆಗುತ್ತಿದೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.