Categories
ಕರಾವಳಿ

ಕರಾವಳಿ ಭಾಗದ ವಿವಿಧೆಡೆ ಅದ್ಧೂರಿ ಗಣೇಶ ಉತ್ಸವ!

ಕರಾವಳಿ ಭಾಗದ ವಿವಿಧೆಡೆ ಅದ್ಧೂರಿ ಗಣೇಶ ಉತ್ಸವ!
– ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಹಬ್ಬ
– ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದಿಂದ ಕೂಡ ಆಚರಣೆ
– ಗಮನ ಸೆಳೆದ ಬಾವ ಬಂದರು ಟ್ಯಾಬ್ಲೋ!

NAMMUR EXPRESS NEWS
ಗಣೇಶ ಚತುರ್ಥಿ ಕಳೆದರೂ ಅದರ ಗುಂಗು ಇನ್ನೂ ಕಡಿಮೆಯಾಗಿಲ್ಲ.‌ ಕಾರಣ ಎಲ್ಲೆಡೆ ಗಣಪನು ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ, ಊರು, ಗ್ರಾಮಗಳಲ್ಲಿ ಅಲಂಕಾರ ಭೂಷಿತನಾಗಿ, ತನಗೆ ಪ್ರಿಯವಾದ ಆಹಾರಗಳನ್ನು ಸೇವಿಸಿಕೊಂಡು, ಆರಾಮದಾಯಕವಾಗಿ ಆಸೀನನಾಗಿಬಿಟ್ಟಿದ್ದಾನೆ.
ಮೂರು ದಿನಕ್ಕೆ, ಐದು ದಿನಕ್ಕೆ, ಒಂಭತ್ತು ದಿನಕ್ಕೆ ಹೀಗೆ ಒಂದೊಂದು ಕಡೆ ಒಂದೊಂದು ದಿನ ಗಣೇಶನನ್ನು ವಿಸರ್ಜಿಸುವ ಕಾರಣ, ಒಂದಲ್ಲ ಒಂದು ಗಣಪ ಆಯ ಪ್ರದೇಶದಲ್ಲಿ ಇದ್ದೇ ಇರುತ್ತಾನೆ. ಇದಕ್ಕೆ ಕರಾವಳಿ ಭಾಗವು ಸಾಕ್ಷಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 874 ಗಣಪತಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 874 ಗಣಪತಿಯನ್ನು ಕೂರಿಸಲಾಗಿದ್ದು, ಎಲ್ಲೆಡೆ ವಿಶೇಷ ಪೂಜೆ ಮತ್ತು ಆಗಮಿಸುವ ಭಕ್ತರಿಗೆ, ದೇವಾಲಯ ಹಾಗೂ ಪ್ರತಿಷ್ಠಾಪನ ಸಮಿತಿಯ ಸದಸ್ಯರಿಗೆ ಅನ್ನಸಂತರ್ಪಣೆಯನ್ನು ಸಹ ಆಯೋಜಿಸಲಾಗಿದೆ. ಕೋಮುಗಲಭೆ ಅಧಿಕ ಎಂದು ಹಣೆಪಟ್ಟಿ ಹೊಂದಿರುವ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದವರು ಶನಿವಾರದಂದು, ಗಣಪತಿಯನ್ನು ಕೂರಿಸಿದೆಡೆಗೆ ಆಗಮಿಸಿ, ಪೂಜೆಯನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದ ಸೌಹಾರ್ದಯುತ ಸಂಗತಿ ನಡೆದಿದೆ. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯಿಂದ, ಕಳೆದ ತಿಂಗಳು 170 ಗಂಟೆಗಳ ಕಾಲ ನೃತ್ಯವನ್ನು ಕೈಗೊಳ್ಳುವ ಮೂಲಕ, ಭರತನಾಟ್ಯದಲ್ಲಿ ಮೊದಲಿಗೆ ದಾಖಲೆ ಬರೆದ ರೆಮೊನಾ ಪೆರೆರ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲೆಯಲ್ಲಿ 486 ಗಣೇಶೋತ್ಸವ

ಇನ್ನು ಉಡುಪಿ ಜಿಲ್ಲೆಯಲ್ಲಿ 486 ಗಣೇಶೋತ್ಸವಗಳು ನಡೆಯಲಿವೆ ಎನ್ನುವ ಮಾಹಿತಿ ಲಭಿಸಿದೆ. ಹೀಗಾಗಿ ಗಣೇಶ ಚತುರ್ಥಿಯಂದು ಪ್ರಾರಂಭಗೊಂಡ ಉತ್ಸವವು, ಅಕ್ಟೋಬರ್ ಎರಡರವರೆಗೆ ನಡೆಯಲಿದೆ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಗಣೇಶೋತ್ಸವ ಎಲ್ಲಾ ತಾಲ್ಲೂಕುಗಳಲ್ಲಿ ಅದ್ಧೂರಿಯಾಗಿ ಜರುಗುತ್ತಿದ್ದು, ದಾಂಡೇಲಿ ನಗರದಲ್ಲಿ 52 ಗಣಪತಿಗಳನ್ನು ಕೂರಿಸಿದ್ದಾರೆ. ಮಳೆಯ ನಡುವೆಯೂ ಅದನ್ನು ಲೆಕ್ಕಿಸದೆ, ಸಾರ್ವಜನಿಕ ಗಣೇಶನಿಗೆ ವಿವಿಧ ರೂಪಕಗಳು, ನಾಟಕದ ತುಣುಕುಗಳು ಹಾಗೂ ವಿಶೇಷ ದೀಪಾಲಂಕಾರಗಳ ಮೂಲಕ ವಿರಾಜಮಾನವಾಗಿ ಕೂರಿಸಿದ್ದಾರೆ ಎನ್ನಲಾಗಿದೆ. ಇನ್ನು ಅಂಕೋಲಾ ತಾಲ್ಲೂಕಿನ ಅವರ್ಸಾದಲ್ಲಿ ಐಪಿಎಲ್ ಗಣಪತಿ ಭಕ್ತರನ್ನು, ಹೆಚ್ಚಾಗಿ ಪುಟಾಣಿ ಮಕ್ಕಳನ್ನು ಸೆಳೆಯುತ್ತಿರುವುದು ಬೆಳಕಿಗೆ ಬಂದಿದೆ. ವಿರಾಟ್ ಕೊಹ್ಲಿ ಪಕ್ಕದಲ್ಲಿ, ಬಸ್ ಏರಿ ಕಪ್ ಹಿಡಿದು ನಿಂತ ಮುದ್ದು ಗಣಪ ಎಲ್ಲರ ಕಣ್ಣನ್ನು ಕುಕ್ಕುತ್ತಿದ್ದಾನೆ. ವರದಾ ಲೈನ್ಸ್ ಟ್ರಾನ್ಸ್ ಪೋರ್ಟ್ ನ ಮಾಲೀಕರಾದ ತುಳಸಿದಾಸ ಕಾಮತ್ ಅವರು ಇದರ ಪ್ರಯೋಜಕತ್ವವನ್ನು ವಹಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಹೀಗೆ ಕರಾವಳಿ ಸೇರಿದಂತೆ ಎಲ್ಲೆಡೆ ಗಣೇಶ ತನ್ನ ವಿವಿಧ ಆಕಾರ, ರೂಪ, ಭಂಗಿ ಮತ್ತು ಸೌಹಾರ್ದತೆಯ ಮೂಲಕ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಜನರನ್ನು ಭಕ್ತಿಗಿಂತ ಮಿಗಿಲಾಗಿ, ಪ್ರೀತಿಯಿಂದ ತನ್ನತ್ತ ಸೆಳೆದುಕೊಳ್ಳುತ್ತಿದ್ದಾನೆ. ಎಂದೇ ಹೇಳಬಹುದು.

ಗಮನ ಸೆಳೆದ ಬಾವ ಬಂದರು ಟ್ಯಾಬ್ಲೋ!

ಕರಾವಳಿ ಅನೇಕ ಕಡೆ ಈ ಬಾರಿ ಉತ್ತಮ ಸಿನಿಮಾವಾದ ಸು ಫ್ರಮ್ ಸೋ ಚಿತ್ರದ ಬಾವ ಬಂದರು ಹಾಡಿನ ಮಾದರಿಯ ರಾಜ್ ಬಿ ಶೆಟ್ಟಿ ಸೇರಿ ಎಲ್ಲಾ ಪಾತ್ರಧಾರಿಗಳ ವೇಷ ಗಮನ ಸೆಳೆಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.