Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣ ಆಡಳಿತದಲ್ಲಿ ರೋಚಕ ಟ್ವಿಸ್ಟ್!

ತೀರ್ಥಹಳ್ಳಿ ಪಟ್ಟಣ ಆಡಳಿತದಲ್ಲಿ ರೋಚಕ ಟ್ವಿಸ್ಟ್!
– ಅಧ್ಯಕ್ಷ ಅಸಾದಿ ವಿರುದ್ದವೇ ಕಾಂಗ್ರೆಸ್ ಸದಸ್ಯರ ಆವಿಶ್ವಾಸ ಪತ್ರ
– ಬಿಜೆಪಿ ಪಾಲಾಗುತ್ತಾ ಆಡಳಿತ? ಕಾಂಗ್ರೆಸ್ ಅಲ್ಲೇ ಉಳಿಯುತ್ತಾ..?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಆಡಳಿತ ಇದೀಗ ಕಾಂಗ್ರೆಸ್ ಹಿಡಿತದಲ್ಲಿದೆ. ಅಲ್ಲದೆ ಅಲ್ಲೇ ಇದೀಗ ಗೊಂದಲ ಇದೆ. ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರಾದ ರಹಮ ತ್ ಉಲ್ಲಾ ಅಸಾದಿ ವಿರುದ್ಧ ಪಟ್ಟಣ ಪಂಚಾಯತಿಯ ಆರು ಮಂದಿ ಸದಸ್ಯರು ಆವಿಶ್ವಾಸಕ್ಕೆ ಮುಂದಾಗಿದ್ದಾರೆ. ಇದು ಬಿಜೆಪಿಗೆ ಸಿಹಿ ಕೊಡಬಹುದಾ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಆವಿಶ್ವಾಸ ಗೊತ್ತುವಳಿಯ ತೀರ್ಮಾನಕ್ಕಾಗಿ ನಿಯಮಾನುಸಾರ ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಸಹಿ ಮಾಡಿರುವ ಪತ್ರ ರವಾನಿಸಿದ್ದಾರೆ. ಈಗಾಗಲೇ ನಿರ್ಧಾರದಂತೆ ಅಸಾದಿ ಅಧ್ಯಕ್ಷ ಸ್ಥಾನ ಬಿಡಬೇಕಿತ್ತು. ಅದರೆ ಅವರು ಬಿಡದ ಕಾರಣ ಸದಸ್ಯರು ಅವಿಶ್ವಾಸಕ್ಕೆ ಮುಂದಾಗಿದ್ದಾರೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ನಲ್ಲಿ ಒಟ್ಟು 15 ಸದಸ್ಯರು ಇದ್ದು ಅದರ ಜೊತೆ ಶಾಸಕರು ಹಾಗೂ ಸಂಸದರು ಸೇರಿ 17 ಮಂದಿ ಸದಸ್ಯರಿಗೆ ಮತ ಹಕ್ಕಿದೆ. ಮೂರರ ಒಂದು ಭಾಗ ಎಂದರೆ ಆರು ಮಂದಿ ವಿರೋಧ ವ್ಯಕ್ತಪಡಿಸಿದರೆ ಅಧ್ಯಕ್ಷ ಸ್ಥಾನ ಕಳೆದುಕೊಳ್ಳಬೇಕು. ಆದರೆ ಕಾಂಗ್ರೆಸ್ 9 ಸದಸ್ಯರ ಪೈಕಿ ಅಧ್ಯಕ್ಷರು ಬಿಟ್ಟು ಇನ್ನಿಬ್ಬರು ಸಹಿ ಮಾಡಿಲ್ಲ.
ಇದೀಗ ಅಧ್ಯಕ್ಷ ಸ್ಥಾನದ ಜತೆಗೆ ಆಡಳಿತ ಕೈ ಜಾರುವ ಭೀತಿ ಕೂಡ ಕಾಂಗ್ರೆಸ್ ಪಕ್ಷಕ್ಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.