Categories
ಉಡುಪಿ ಕರಾವಳಿ

ಉಡುಪಿಯಲ್ಲಿ ಅದ್ಧೂರಿ ಪರ್ಯಾಯ

ಉಡುಪಿಯಲ್ಲಿ ಅದ್ಧೂರಿ ಪರ್ಯಾಯ
– ವಾಹನ ದಟ್ಟಣೆ ತಡೆಯುವ ಉದ್ದೇಶದಿಂದ ಪರ್ಯಾಯ ವ್ಯವಸ್ಥೆ!
– ಉಡುಪಿ ನಗರದೊಳಗೆ ಪಾರ್ಕಿಂಗ್ ನಿಷೇಧ!
– ಬೀದಿಗಳು ವಿದ್ಯತ್ ದೀಪಗಳಿಂದ ಅಲಂಕೃತ!

NAMMUR EXPRESS NEWS
ಉಡುಪಿ: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಎರಡು ದಿನ ವಾಹನ ಸಂಚಾರ ವ್ಯವಸ್ಥೆ ಬದಲಾಯಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಉಡುಪಿ ನಗರ ವ್ಯಾಪ್ತಿಯಲ್ಲಿ ಜನವರಿ 17 ಮತ್ತು 18 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದರಿಂದ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲು ಬದಲಿ ಮಾರ್ಗ ಹಾಗೂ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಪರ್ಯಾಯ ವ್ಯವಸ್ಥೆ :

ಜ.17 ರಂದು ಸಂಜೆ 4 ಗಂಟೆಯಿಂದ ಮಂಗಳೂರಿನಿಂದ ಉಡುಪಿ ಮತ್ತು ಮಣಿಪಾಲ ಕಡೆಗೆ ಹೋಗುವ ಎಲ್ಲ ಬಸ್‌ಗಳು ಸ್ವಾಗತ ಗೋಪುರ ರಸ್ತೆಯಲ್ಲಿ ಸಂಚಾರ ಮಾಡದೆ ರಾ.ಹೆ 66 ಮೂಲಕ ಕರಾವಳಿ ಜಂಕ್ಷನ್-ಬನ್ನಂಜೆ-ಶಿರಿಬೀಡು-ಸಿಟಿ ಬಸ್ಸು ನಿಲ್ದಾಣ-ಐರೋಡಿಕರ್-ಸರ್ವಿಸ್ ಬಸ್ಸು ನಿಲ್ದಾಣ-ಕಿದಿಯೂರು ಹೊಟೇಲ್ ಮೂಲಕ ಕೆಳಗೆ ಇಳಿದು ಶಿರಿಬೀಡು-ಬನ್ನಂಜೆ – ಕರಾವಳಿ ಜಂಕ್ಷನ್-ರಾ.ಹೆ 66 ಮೂಲಕ ಮಂಗಳೂರಿಗೆ ಸಂಚರಿಸಬೇಕು.

ಕುಂದಾಪುರ ಕಡೆಯಿಂದ ಉಡುಪಿಗೆ ಬರುವ ಬಸ್‌ಗಳು ಸಂತೆಕಟ್ಟೆ-ಅಂಬಾಗಿಲು-ನಿಟ್ಟೂರು-ಕರಾವಳಿ ಜಂಕ್ಷನ್-ಬನ್ನಂಜೆ-ಶಿರಿಬೀಡು-ಸಿಟಿ ಬಸ್ಸು ನಿಲ್ದಾಣ-ಐರೋಡಿ ಸರ್ವಿಸ್ ಬಸ್ಸು ನಿಲ್ದಾಣ-ಕಿದಿಯೂರು ಹೋಟೆಲ್ ಮೂಲಕ ಕೆಳಗೆ ಇಳಿದು ಶಿರಿಬೀಡು- ಬನ್ನಂಜೆ -ಕರಾವಳಿ ಜಂಕ್ಷನ್ ಮೂಲಕ ರಾ.ಹೆ. 66 ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು.ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಬಸ್‌ಗಳು ಇಂದ್ರಾಳಿ-ಎಂ.ಜಿ.ಎಂ-ಕಡಿಯಾಳಿ-ಕಲ್ಸಂಕ- ಉಡುಪಿ ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ಅಲ್ಲಿಂದ ತಿರುಗಿಸಿ ವಾಪಸು ಕಲ್ಸಂಕ -ಎಂ.ಜಿ.ಎಂ – ಇಂದ್ರಾಳಿ ಮೂಲಕ ಮಣಿಪಾಲ, ಕಾರ್ಕಳ ಕಡೆಗೆ ಸಂಚಾರ ಮಾಡಬೇಕು.

ರಾಂಪುರ, ಕುಕ್ಕಿಕಟ್ಟೆ, ಮೂಡುಬೆಳ್ಳೆ ಕಡೆಯಿಂದ ಉಡುಪಿಗೆ ಬರುವ ಬಸ್‌ಗಳು ಮಿಷನ್ ಕಂಪೌಂಡ್‌ನಿಂದ ಬಲಕ್ಕೆ ತಿರುಗಿ ಅಮ್ಮಣ್ಣಿ ರಾಮಣ್ಣ- ಚಿಟ್ಟಾಡಿ ಜಂಕ್ಷನ್‌ನಿಂದ ಎಡಕ್ಕೆ ತಿರುಗಿ-ಬೀಡಿನಗುಡ್ಡೆ ಜಂಕ್ಷನ್-ಶಾರದ ಕಲ್ಯಾಣ ಮಂಟಪ ಜಂಕ್ಷನ್ ಎಡಕ್ಕೆ ತಿರುಗಿ-ಕಲ್ಸಂಕ-ಸಿ.ಟಿ ಬಸ್ಸು ನಿಲ್ದಾಣ ಐರೋಡಿಕರ್-ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ನಂತರ ಅದೇ ರಸ್ತೆ ಮಾರ್ಗವಾಗಿ ವಾಪಸು ಸಂಚರಿಸಬೇಕು. ಮಲ್ಪೆ ಕಡೆಯಿಂದ ಉಡುಪಿಗೆ ಬರುವ ಬಸ್ ಆದಿಉಡುಪಿ-ಕರಾವಳಿ ಜಂಕ್ಷನ್ ಬನ್ನಂಜೆ – ಶಿರಿಬೀಡು – ಐರೋಡಿಕರ್ – ಸಿಟಿ ಬಸ್ ನಿಲ್ದಾಣಕ್ಕೆ ಬಂದು ವಾಪಸು ಶಿರಿಬೀಡು-ಬನ್ನಂಜೆ ಕರಾವಳಿ ಜಂಕ್ಷನ್ -ಆದಿಉಡುಪಿ ಮಾರ್ಗವಾಗಿ ಮಲ್ಪೆ ಕಡೆಗೆ ವಾಪಾಸು ಸಂಚರಿಸಬೇಕು ಜ.17 ರಂದು ಬುಕ್ಕಿಂಗ್ ಏಜೆಂಟ್ ಮತ್ತು ಬಸ್ ಕಂಪನಿಯವರು ರಾತ್ರಿ ಉಡುಪಿ ಸಿಟಿ ಒಳಗೆ ಪ್ರವೇಶ ಮಾಡದೆ ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸಬೇಕು.

ಪಾರ್ಕಿಂಗ್ ನಿಷೇಧ :

ಜ.17 ರಂದು ಸಂಜೆ 6 ಗಂಟೆಯಿಂದ ಜ.18 ರ ಬೆಳಗ್ಗೆ 6 ಗಂಟೆಯ ವರೆಗೆ ಸ್ವಾಗತ ಗೋಪುರ, ಕಿನ್ನಿಮೂಲ್ಕಿ ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ ಟಿ.ಎಂ.ಎ.ಪೈ ಆಸ್ಪತ್ರೆ, ಲಯನ್ಸ್ ಸರ್ಕಲ್, ಹಳೇ ಡಯಾನ ಸರ್ಕಲ್, ಮಿತ್ರ ಜಂಕ್ಷನ್, ತೆಂಕಪೇಟೆ, ರಥಬೀದಿ ರಸ್ತೆಯಲ್ಲಿ ಅಕ್ಕಪಕ್ಕ ವಾಹನ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಲಾಗಿರುತ್ತದೆ. ಕಲ್ಸಂಕ ಜಂಕ್ಷನ್‌ನಿಂದ ವಿದ್ಯೋದ್ಯಯ ಶಾಲೆಯವರೆಗೆ ರಸ್ತೆಯ ಬದಿಯ ಪಾರ್ಕಿಂಗ್ ನಿಷೇಧಿಸಲಾಗಿರುತ್ತದೆ.

ಜ.17 ರಂದು ಸಂಜೆ 6 ಗಂಟೆಯಿಂದ ಜ.18 ರ ಬೆಳಗ್ಗೆ 6 ಗಂಟೆಯ ವರೆಗೆ ನಾಗಬನಕ್ರಾಸ್‌ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕುಂಜೂರು ಎಲೆಕ್ರ್ಟಿಕಲ್ಸ್‌ನಿಂದ ಗೀತಾಂಜಲಿ ರಸ್ತೆಯವರೆಗೆ, ಸರ್ವಿಸ್ ಬಸ್ ನಿಲ್ದಾಣದ ಪೊಲೀಸ್ ಔಟ್‌ಪೊಸ್‌ನಿಂದ ಕವಿ ಮುದ್ದಣ್ಣ ರಸ್ತೆಯವರೆಗೆ, ವಿಷ್ಣು ಫ್ಲವರ್ ಸ್ಟಾಲ್‌ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಭಾಸ್ಕರ ವಿಹಾರ್ ರಸ್ತೆಯಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕಲ್ಸಂಕದಿಂದ ಬಡಗುಪೇಟೆ ರಸ್ತೆಯವರೆಗೆ, ಸೌತ್ ಶಾಲೆಯ ಬಳಿ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ರಸ್ತೆಯವರೆಗೆ, ಜೋಡುಕಟ್ಟೆಯಿಂದ ಬ್ರಹ್ಮಗಿರಿಗೆ ಹೋಗುವ ರಸ್ತೆಯ ಬೇತಲ್ ಚರ್ಚ್ ಬಳಿ, ಎಲ್.ಐ.ಸಿ ರಸ್ತೆಯ ಸಿಂಡಿಕೇಟ್ ಟವರ್ ಬಳಿ, ಅಲಂಕಾರ್ ಟಾಕೀಸ್ ರಸ್ತೆಯ ಬಳಿ, ಮಿಷನ್ ಆಸ್ಪತ್ರೆಯಿಂದ ಲಯನ್ಸ್ ಸರ್ಕಲ್ ಬರುವ ರಸ್ತೆಯಲ್ಲಿ ಮಿಷನ್ ಆಸ್ಪತ್ರೆ ಎದುರು, ಅಮ್ಮಣ್ಣಿ ರಾಮಣ್ಣ ಹಾಲ್ ಎದುರಿನ ಪಿಪಿಸಿ ಕಾಲೇಜ್‌ಗೆ ಹೋಗುವ ರಸ್ತೆಯ ಅಮ್ಮಣ್ಣಿ ರಾಮಣ್ಣ ಹಾಲ್ ಎದುರು, ತ್ರಿನಿಟಿ ಐಟಿಐ ಕಾಲೇಜಿನ ಎದುರಿನಿಂದ ಸೌತ್ ಶಾಲೆಗೆ ಹೋಗುವ ರಸ್ತೆಯ, ತ್ರಿನಿಟಿ ಕಾಲೇಜ್ ಎದುರು, ಹಾಗೂ ಬೀಡಿನಗುಡ್ಡೆಯಿಂದ ವೆಂಕಟರಮಣ ದೇವಸ್ಥಾನಕ್ಕೆ ಬರುವ ರಸ್ತೆಯ ಬೀಡಿನಗುಡ್ಡೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.