Categories
ಕರಾವಳಿ

ಪೇಸ್ಟ್ ಎಂದು ಇಲಿ ಪಾಶಾಣದಲ್ಲಿ ಹಲ್ಲು ತಿಕ್ಕಿ ಮೃತಪಟ್ಟ!

ಪೇಸ್ಟ್ ಎಂದು ಇಲಿ ಪಾಶಾಣದಲ್ಲಿ ಹಲ್ಲು ತಿಕ್ಕಿ ಮೃತಪಟ್ಟ!
– ಪಡುಬಿದ್ರೆಯಲ್ಲಿ ನಡೆದ ಘಟನೆ
– ಆಲ್ದೂರು: ಕಾಡಾನೆ ತುಳಿತಕ್ಕೆ ಮತ್ತೊಬ್ಬ ಕಾರ್ಮಿಕ ಮಹಿಳೆ ಬಲಿ!

NAMMUR EXPRESS NEWS
ಪಡುಬಿದ್ರೆ: ಟೂತ್‌ಪೇಸ್ಟ್ ಎಂದು ಇಲಿ ಪಾಷಾಣದಿಂದ ಹಲ್ಲು ಉಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ..
ಮೃತರನ್ನು ವೆಂಶಪ್ಪ (53) ಎಂದು ಗುರುತಿಸಲಾಗಿದೆ. ಇವರು ನ.1ರಂದು ಬಚ್ಚಲು ಮನೆಯಲ್ಲಿ ಹಲ್ಲು ಉಜ್ಜಲು ಟೂತ್ ಪೇಸ್ಟ್ ಬದಲಿಗೆ ಅಲ್ಲಿಯೇ ಇದ್ದ ಇಲಿ ಪಾಷಾಣವನ್ನು ಬಳಸಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡವರು, ನ.1ರಂದು ಸಂಜೆ ವೇಳೆ ಮುಕ್ಕಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇರುವುದು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೆ ದಾಳಿಗೆ ವ್ಯಕ್ತಿ ಬಲಿ!

ಕಾಡಾನೆ ತುಳಿದು ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಹೆಡದಾಳು ಗ್ರಾಮದಲ್ಲಿ ಘಟನೆ ನಡೆದಿದೆ. ವೀಣಾ (45) ಕಾಡಾನೆ ತುಳಿತಕ್ಕೆ ಮೃತಪಟ್ಟ ಮಹಿಳೆ. ಮುಂಜಾನೆ ಕಾಫಿ ತೋಟದ ಕೆಲಸಕ್ಕೆ ಹೋಗುವಾಗ ಘಟನೆ ನಡೆದಿದೆ. ಕಾಡಾನೆಯ ಇರವು ಗೊತ್ತಾಗದೆ ಸಮೀಪದಲ್ಲಿ ಹೋದುದರಿಂದ ತುಳಿತಕ್ಕೆ ಬಲಿಯಾಗಿದ್ದಾರೆ. ಆನೆ ತುಳಿತಕ್ಕೆ ಕಳೆದ ಎರಡು ತಿಂಗಳಲ್ಲಿ ಎರಡನೇ ಬಲಿಯಾಗಿದೆ. ಇನ್ನು ಸ್ಥಳಕ್ಕೆ ಆಲ್ಲೂರು ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.