Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬಿಡಾಡಿ ದನ ಗುದ್ದಿ ವ್ಯಕ್ತಿ ಗಂಭೀರ!

ತೀರ್ಥಹಳ್ಳಿಯಲ್ಲಿ ಬಿಡಾಡಿ ದನ ಗುದ್ದಿ ವ್ಯಕ್ತಿ ಗಂಭೀರ!
– ಆಗುಂಬೆ ಸ್ಟ್ಯಾಂಡ್ ಬಳಿ ವ್ಯಕ್ತಿ ಮೇಲೆ ದನದ ಹಲ್ಲೆ
– ಅಧಿಕಾರಿಗಳು, ಆಡಳಿತದ ನಿರ್ಲಕ್ಷ್ಯಕ್ಕೆ ಜನರ ಛೀಮಾರಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಬಿಡಾಡಿ ದನಗಳ ಹಾವಳಿ ಹೆಚ್ಚಿದೆ.
ತೀರ್ಥಹಳ್ಳಿಯಲ್ಲಿ ಬೀಡಾಡಿ ದನ ವ್ಯಕ್ತಿಗೆ ಇಡಿದು ಗಾಯಗೊಳಿಸಿದೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪ್ರತಿ ನಿತ್ಯವೂ ಈ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಿ ಅವುಗಳನ್ನು ನಗರದಿಂದ ಬೇರೆಡೆ ಸ್ಥಳಾಂತರ ಮಾಡಬೇಕಾದ ಆಡಳಿತವೆ ಈ ಬಗ್ಗೆ ಗಮನಿಸುತ್ತಿಲ್ಲ. ಇದರಿಂದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಕೆಲವು ತಿಂಗಳುಗಳಿಂದ ಇವುಗಳ ಉಪಟಳ ಹೇಳ ತೀರದಂತಾಗಿದ್ದು, ಮಕ್ಕಳು, ವಯೋವೃದ್ಧರು ರಸ್ತೆಯಲ್ಲಿ ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಡಾಡಿ ದನಗಳು ಹಿಂಡು ಹಿಂಡಾಗಿ ರಸ್ತೆಯ ಮಧ್ಯದಲ್ಲಿಯೇ ಮಲಗುವುದು ಹಾಗೂ ಒಂದಕ್ಕೊಂದು ಹಾಯುತ್ತಾ ರಸ್ತೆಯಲ್ಲೇ ಕಾದಾಡಲು ಪ್ರಾರಂಭಿಸಿದರೆ ಆ ರಸ್ತೆಯಲ್ಲಿ ಸಂಚಾರವೇ ಸಂಪೂರ್ಣ ಸ್ಥಗಿತಗೊಳ್ಳುತ್ತದೆ.

ಬುಧವಾರ ಪಟ್ಟಣದ ಆಗುಂಬೆ ಸ್ಟ್ಯಾಂಡ್ ಬಳಿಯಲ್ಲಿ ಬಿಡಾಡಿ ದನದ ಕಾದಾಟದಿಂದ ಗಾಯಗೊಂಡ ಪ್ರಕರಣ ಕಂಡುಬಂದಿದೆ. ಬಿಡಾಡಿ ದನಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವುದು ಒಂದೆಡೆಯಾದರೆ ಇನ್ನು ನಿತ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಸ್ಥಿತಿಯಂತೂ ಹೇಳತೀರದಾಗಿದೆ.
ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿರುವ ಬಿಡಾಡಿ ದನಗಳು ವಾಹನಗಳ ಶಬ್ದ ಕೇಳುತ್ತಿದ್ದಂತೆಯೇ ರಸ್ತೆಯ ಅಕ್ಕಪಕ್ಕದುದ್ದಕ್ಕೂ ಓಡಾಡುತ್ತವೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ತೀವ್ರ ತೊಂದರೆಯನ್ನುಂಟು ಮಾಡಿವೆ. ಇನ್ನು ಬಿಡಾಡಿ ದನಗಳು ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಹಾಯ್ದು ಕೆಳಗೆ ಬೀಳಿಸಿದ ಘಟನೆಗಳು ಸಾಕಷ್ಟು ನಡೆದಿವೆ. ಇಷ್ಟಾದರೂ ಬಿಡಾಡಿ ದನಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.