
– ಕೆಸ್ತೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ತೂಟೆದಾರ
– ದಣಿದ ಮಂದಿಗೆ ಉಲ್ಲಾಸ ನೀಡುವ ಪಂಜಿನಾಟ!
– ಹಾಗಿದ್ದರೆ ಈ ತೂಟೆದಾರ ಎಂದರೇನು?
NAMMUR EXPRESS NEWS
ಉಡುಪಿ: ಉಡುಪಿಯಲ್ಲಿ ಸದ್ಯ ಸಾಲು ಸಾಲು ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಒಂದು ವಿಶಿಷ್ಟ ಸಂಪ್ರದಾಯ. ಕೆಸ್ತೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ತೂಟೆದಾರದಲ್ಲಿ ಅಧಿಕಸಂಖ್ಯೆಯ ಭಕ್ತಾದಿಗಳು ನೆರೆದಿದ್ದು,
ವಾರ್ಷಿಕ ಉತ್ಸವದಲ್ಲಿ ಒಂದೊಂದು ದೇವಸ್ಥಾನದಲ್ಲಿ ಒಂದೊಂದು ವೈಶಿಷ್ಟ್ಯತೆಯನ್ನು ಕಾಣಬಹುದು. ಜಾತ್ರೆಯ ಕೊನೆಯ ಭಾಗದ ತೂಟೆದಾರ ಅಂತ ಒಂದು ಸಂಪ್ರದಾಯ ನಡೆಯುತ್ತದೆ. ಉಡುಪಿಯ ಕೆಸ್ತೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತೂಟೆದಾರ ಸಂಪ್ರದಾಯದಂತೆ ಸಂಪನ್ನಗೊಂಡಿತು. ತೆಂಗಿನ ಗರಿಯ ಪಂಜು ತಯಾರಿಸಿ ಇದನ್ನು ಆಡುಭಾಷೆಯಲ್ಲಿ ತೂಟೆ ಎಂದು ಕರೆಯಲಾಗುತ್ತದೆ. ದೇವರು ಕಟ್ಟೆಪೂಜೆ ಸವಾರಿಗೆ ಹೊರಟು ನದಿ ಬದಿಯ ಗದ್ದೆಯಲ್ಲಿ ಎರಡು ಗುಂಪುಗಳು ಉರಿಯುತ್ತಿರುವ ಪಂಜುಗಳನ್ನು ಪರಸ್ಪರ ಎತ್ತಿಕೊಂಡು ಹೋಗುತ್ತಾರೆ. ಒಂದು ರೀತಿ ಯುದ್ಧದಂತೆ ಕಂಡು ಬಂದರೂ ಇದು ಧಾರ್ಮಿಕ ಆಚರಣೆಯಾಗಿದೆ.
ತೂಟೆದಾರ ಕತ್ತಲಲ್ಲಿ ನಡೆಯುವ ಬಣ್ಣದ ಆಟದಂತೆ ಕಾಣುತ್ತದೆ. ಕಾರಣ ಬೆಳಕಿಗೆ ಕತ್ತಲು, ಅದರ ಮಧ್ಯೆ ಕೇವಲ ಬೆಂಕಿಯ ಪುಂಜವೊಂದು ಆಕಡೆ ಈ’ಕಡೆ ಹಾರಾಡುತ್ತಾ ಉಲ್ಕೆಯಂತೆ ಭಾಸವಾಗುತ್ತದೆ. ಕಟೀಲು ದೇವಸ್ಥಾನದಲ್ಲಿ ನಡೆಯುವ ತೂಟೆದಾರವೂ ಬಹಳ ಪ್ರಸಿದ್ಧಿ. ಕರಾವಳಿಯ ದೇವಸ್ಥಾಗಳಲ್ಲಿ ವಾರ್ಷಿಕ ಜಾತ್ರೆ ಸಂದರ್ಭ ಆರೇಳು ದಿನ ನಿದ್ದೆ ಬಿಟ್ಟು ಉತ್ಸವದಲ್ಲಿ ದಣಿದ ಮಂದಿಗೆ ಈ ಪಂಜಿನಾಟ ಉಲ್ಲಾಸ ನೀಡುತ್ತದೆ.