Categories
ರಾಜ್ಯ

ಭಾರತ ಚುನಾವಣಾ ಆಯೋಗದ ಮಹತ್ವದ ನಿರ್ಧಾರ..!

ಭಾರತ ಚುನಾವಣಾ ಆಯೋಗದ ಮಹತ್ವದ ನಿರ್ಧಾರ..!
– ಶೀಘ್ರದಲ್ಲಿ ಮತದಾರರ ಚೀಟಿಗೆ ಆಧಾ‌ರ್ ಲಿಂಕ್..!
– ಯುಐಡಿಎಐ, ತಜ್ಞರ ಜೊತೆ ಶೀಘ್ರವೇ ತಾಂತ್ರಿಕ ಸಮಾಲೋಚನೆ

NAMMUR EXPRESS NEWS
ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಿಸುವ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ. ಆದರೆ ಈ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂಗೆ ಮಾಹಿತಿ ನೀಡಿದಂತೆ ಇದನ್ನು ಕಡ್ಡಾಯ ಮಾಡುವ ಬದಲು ಐಚ್ಚಿಕ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಸೇರಿ ವಿವಿಧ ಇಲಾಖೆಗಳ ಜೊತೆ ಮಂಗಳವಾರ ಸಭೆ ನಡೆಸಿದ ಚುನಾವಣಾ ಆಯೋಗ ಈ ಮಾಹಿತಿ ನೀಡಿದೆ. ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಕುರಿತಂತೆ ಆಧಾರ್ ಕಾರ್ಡ್ ವಿತರಿಸುವ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಜೊತೆಗೆ ತಾಂತ್ರಿಕ ಸಮಾಲೋಚನೆ ಆರಂಭಿಸಲಾಗುವುದು. ಜೋಡಣೆ ಕಾರ್ಯವನ್ನು ದೇಶದ ಕಾನೂನು ಮತ್ತು ಸುಪ್ರೀಂ ಕೋರ್ಟ್‌ ನಿರ್ದೇಶನಗಳನುಸಾರ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ‘ಚುನಾವಣಾ ಆಯೋಗ, ‘ಸಂವಿಧಾನದ 326 ನೇ ವಿಧಿಯ ಪ್ರಕಾರ ಭಾರತದ ಪ್ರಜೆಗಳಿಗಷ್ಟೇ ಮತದಾನದ ಹಕ್ಕಿದೆ.

ಆಧಾ‌ರ್ ವ್ಯಕ್ತಿಗಳ ಗುರುತನ್ನು ಸ್ಥಾಪಿಸುವ ಕಾರಣ ಅದನ್ನು ಜನಪ್ರತಿನಿಧಿ ಕಾಯ್ದೆ 1950ಯ ಸೆಕ್ಷನ್ 23 (4), 23(5),ತು 23 (6). ಮತ್ತು ಸುಪ್ರೀಂಕೋರ್ಟ್‌ 2023 ತೀರ್ಪಿನ ಅನುಸಾರ ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದೆ. 2023ರಲ್ಲಿ, ‘ಆಧಾರ್, ಮತದಾರರ ಚೀಟಿ ಜೋಡಣೆಗೆ ಸಮಯವನ್ನು ನಿಗದಿ ಪಡಿಸಿಲ್ಲ. ಜೋಡಣೆಯಾಗದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ’ ಎಂದು ಸರ್ಕಾರ ರಾಜ್ಯ ಸಭೆಯಲ್ಲಿ ಮಾಹಿತಿ ನೀಡಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.