ಶಿವಸೇನಾ ರಾಜ್ಯ ಉಪಾಧ್ಯಕ್ಷರಾಗಿ ಆನಂದ್ ಶೆಟ್ಟಿ ಅಡ್ಯಾರ್
– ಮಹಾರಾಷ್ಟ್ರದ ಶಿವಸೇನಾ ಕಛೇರಿಯಲ್ಲಿ ಅಧಿಕಾರ ಸ್ವೀಕಾರ
– ಕರ್ನಾಟಕ ರಾಜ್ಯ ವ್ಯಾಪ್ತಿ ಶಿವ ಸೇನೆ ಸಂಘಟನೆಗೆ ಪ್ಲಾನ್
NAMMUR EXPRESS NEWS
ಮಂಗಳೂರು: ಶಿವಸೇನಾ ರಾಜ್ಯ ಉಪಾಧ್ಯಕ್ಷರಾಗಿ ಆನಂದ್ ಶೆಟ್ಟಿ ಅಡ್ಯಾರ್ ಆಯ್ಕೆ ಆಗಿದ್ದಾರೆ. ಶಿವಸೇನೆಯ (ಏಕನಾಥ ಶಿಂಧೆ ಬಣದ) ಕರ್ನಾಟಕ ರಾಜ್ಯದ ಉಪಾಧ್ಯಕ್ಷರಾಗಿ ಆನಂದ್ ಶೆಟ್ಟಿ ಅಡ್ಯಾರ್ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರದ ಶಿವಸೇನಾ ಕಛೇರಿ ಬಾಳಾ ಸಾಹೇಬ ಭವನದಲ್ಲಿ ನಡೆದ ಕರ್ನಾಟಕ ರಾಜ್ಯದ ವಿಶೇಷ ಪ್ರತಿನಿಧಿಗಳ ಸಭೆಯಲ್ಲಿ ಕರ್ನಾಟಕ ಶಿವಸೇನಾ ರಾಜ್ಯ ಅಧ್ಯಕ್ಷ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು, ರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಅಭಿಜಿತ್ ಅಡ್ಸೂಲ್ ಸಮ್ಮುಖದಲ್ಲಿ, ರಾಜ್ಯದ ಇನ್ನಿತರ ಪ್ರಮುಖರ ಘೋಷಣಾ ಕಾರ್ಯಕ್ರಮದಲ್ಲಿ ಇವರ ಆಯ್ಕೆಯನ್ನು ಘೋಷಿಸಿದ್ದಾರೆ.ಈ ಸಮಯದಲ್ಲೇ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಗಂಗಾಧರ್ ಕುಲಕರ್ಣಿ, ರಾಜ್ಯ ವಕ್ತಾರರಾಗಿ ಶ್ರೀ ಭಾಸ್ಕರನ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ,ಶ್ರೀ ಮಹಾಲಿಂಗಣ್ಣ ಗುಂಜಿಗಾವಿ ಮತ್ತು ಶ್ರೀ ಅಮರನಾಥ ವೈ.ಡಿ,ಕಾರ್ಯದರ್ಶಿ ಯಾಗಿ ಶ್ರೀ ಹರೀಶ್ ಬೆಂಗಳೂರು ಮತ್ತು ವಿಜಯ ಪಾಟೀಲ ಯಾದಗಿರಿ, ರಾಜ್ಯ ಖಚಾಂಚಿ ಹಾಗೂ ಸಾಮಾಜಿಕ ಜಾಲ ತಾಣ ಮುಖ್ಯಸ್ಥರಾಗಿ ಶ್ರೀ ಶಿವಕುಮಾರ್ ರೆಡ್ಡಿ ಆಯ್ಕೆಯಾಗಿದ್ದು ಇವರ ಘೋಷಣೆಯನ್ನು ಕೂಡಾ ಇದೇ ಸಂದರ್ಭದಲ್ಲಿ ಘೋಷಿಸಲಾಗಿದೆ.
ರಾಜ್ಯ ವ್ಯಾಪ್ತಿ ಸಂಘಟನೆಗೆ ಪ್ಲಾನ್: ಆನಂದ್ ಶೆಟ್ಟಿ ಅಡ್ಯಾರ್
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಜತೆ ಮಾತನಾಡಿದ ಉಪಾಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ಅವರು, ಶಿವಸೇನೆಯನ್ನು ಬಗ್ಗೆ ರಾಜ್ಯ ವ್ಯಾಪ್ತಿ ಸಂಘಟಿಸುವ ಕಾರ್ಯ ಈಗಾಗಲೇ ಆರಂಭಿಸಿದ್ದು ರಾಜ್ಯ ಅಧ್ಯಕ್ಷ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ದಕ್ಷ ಅಧ್ಯಕ್ಷತೆಯಲ್ಲಿ ಪಕ್ಷ ಕಟ್ಟುವ ಕಾರ್ಯಕ್ಕೆ ರಾಷ್ಟ್ರೀಯ ನಾಯಕರ ಸಂಪೂರ್ಣ ಬೆಂಬಲ ದೊರೆತಿದೆ, ಹಿಂದುತ್ವದ ಹೆಮ್ಮೆ ಕರ್ನಾಟಕ ದ ಶಕ್ತಿ ಎಂಬ ವಾಕ್ಯದಂತೆ ರಾಜ್ಯದ ನೆಲ-ಜಲ ದ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಲದೆ,ರಾಜ್ಯದ ಜನತೆಯ ನಿರೀಕ್ಷೆಯಂತೆ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪ್ತಿ ಸಂಘಟಿಸಲಾಗುವುದು ಎಂದಿದ್ದಾರೆ.
