ಶಿಕ್ಷಕರ ಸೌಹಾರ್ದ ಮಹಾಸಭೆ: ನೂರಾರು ಮಂದಿ ಸಾಧಕರಿಗೆ ಗೌರವ
– ತೀರ್ಥಹಳ್ಳಿಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಭೆಗೆ ಸಾವಿರಾರು ಜನ
– ಪ್ರತಿಭಾ ಪುರಸ್ಕಾರ-ಸನ್ಮಾನ: ಸಹಕಾರಿಸಾಧನೆಗೆ ಗಣ್ಯರ ಮೆಚ್ಚುಗೆ
– ಶಿಕ್ಷಕರ ಸಹಕಾರ ಕ್ಷೇತ್ರದ ನಾಯಕ ಮಹಾಬಲೇಶ್ವರ ಹೆಗಡೆ ಅವರಿಗೆ ಸನ್ಮಾನ.
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕುವೆಂಪು ಲೇ ಔಟ್ ಅಲ್ಲಿ ಕೇಂದ್ರ ಕಚೇರಿ ಹೊಂದಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಟಿಎಸ್‌ಟಿ ಕನ್ವೆನ್ನನ್ ಹಾಲ್ ಶಿಕ್ಷಕರ ಸೌಹಾರ್ದ ಭವನದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು. 11ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿನೂರಾರು ಸಾಧಕರು, ಸೇವಕರನ್ನು ಗೌರವಿಸಲಾಯಿತು. ಸಹಕಾರಿ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಶಿಕ್ಷಕ ಸದಸ್ಯರು ಆಗಮಿಸಿದ್ದರು.
ಮಹಾ ಸಭೆಯನ್ನು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರು ಉದ್ಘಾಟಿಸಿ ಶಿಕ್ಷಕರ ಸಹಕಾರಿ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್, ಕ.ರಾ.ಸೌ.ಸಂ.ಸ.ನಿ ಉಪಾಧ್ಯಕ್ಷ ಪ್ರಸನ್ನಕುಮಾರ್ ಎ.ಆರ್., ಮ್ಯಾಮ್ ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ,ಸಹ್ಯಾದ್ರಿ ವಿವಿಧೋದ್ದೇಶ ಸಹಕಾರಿಯ ಅಧ್ಯಕ್ಷ ಹೆಚ್.ಎನ್. ವಿಜಯದೇವ್, ಪ.ಪಂ.ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಗಲಿ, ಬೆಂಗಳೂರು ಕ.ರಾ. ಪ್ರಾ.ಶಾ.ಶಿ. ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್.ಎಸ್., ಶಾ.ಶಿ.ಇಲಾಖೆ ಉಪನಿರ್ದೇಶಕರಾದ ಎಸ್.ಆರ್.ಮಂಜುನಾಥ್, ಕೃಷ್ಣಮೂರ್ತಿ ಹೆಚ್.ಆರ್., ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್, ನಾಗೇಂದ್ರಪ್ಪ, ಗಣೇಶ್ ವೈ., ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ, ಡಾನ್ ರಾಮಣ್ಣ ಸೇರಿ ಅನೇಕ ಗಣ್ಯರು ಹಾಜರಿದ್ದರು.
ಕ.ರಾ.ಪ್ರಾ.ಶಾ.ಶಿ.ಸಂಘ ಸಹಕಾರಿ ನಿ., ತೀರ್ಥಹಳ್ಳಿಯ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅಧ್ಯಕ್ಷತೆ ವಹಿಸಿ ಇಡೀ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂತೋಷ್ಕುಮಾರ್ ಸೇರಿಸಂಘದನಿರ್ದೇಶಕರು, ಸಿಬ್ಬಂದಿ,ರಾಜ್ಯದ ವಿವಿಧ ಭಾಗದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಲ್ಲಾ ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
