Categories
ಕರಾವಳಿ

ಕನ್ನಡ ಕಲಾ ಲೋಕಕ್ಕೆ ಮತ್ತೊಂದು ಶಾಕ್!

ಕನ್ನಡ ಕಲಾ ಲೋಕಕ್ಕೆ ಮತ್ತೊಂದು ಶಾಕ್!
– ನಾಟಕ ಲೋಕದ ಮೇರು ಕಲಾವಿದ ಮೂರು ಮುತ್ತು ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

NAMMUR EXPRESS NEWS
ಕುಂದಾಪುರ: ಕನ್ನಡ ಕಲಾ ಲೋಕಕ್ಕೆ ಶುಕ್ರವಾರ ಕರಾಳ ದಿನವಾಗಿದೆ. ಒಂದು ಕಡೆ ಹಿರಿಯ ನಟಿ ಲೀಲಾವತಿ ಮೃತರಾಗಿದ್ದು ಇಡೀ ಸಿನಿಮಾ ಕ್ಷೇತ್ರಕ್ಕೆ ನೋವು ತಂದಿತ್ತು. ಇತ್ತ ನಾಟಕ ಲೋಕದ ಹಾಸ್ಯ ಕಲಾವಿದ ರೂಪಕಲಾ ನಾಟಕ ತಂಡದ ಮೂರುಮುತ್ತು ಖ್ಯಾತಿಯ ಅಶೋಕ್ ಶಾನಭಾಗ್ ರವರು ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಮೂರು ಮುತ್ತು, ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಇನ್ನು ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರದಿಂದ ಮಿಂಚಿದ್ದರು.

ಇವರ ಅಗಲಿಕೆಯ ಸುದ್ದಿ ಅಪಾರ ಅಭಿಮಾನಿಗಳಿಗೆ ದುಃಖ ಉಂಟುಮಾಡಿದೆ. ಮೃತರ ಅಂತ್ಯ ಸಂಸ್ಕಾರ ಶನಿವಾರ ಬೆಳಗ್ಗೆ ಕುಂದಾಪುರದಲ್ಲಿ ನಡೆಯಲಿದೆ. ಕೆಲ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ನಾಟಕ ಪ್ರದರ್ಶನ ಮಾಡುತ್ತಿದ್ದರು. ಮೂರು ಮುತ್ತು ನಾಟಕದ ಮೂಲಕ ಪ್ರತಿ ಊರಲ್ಲಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಪಡೆದಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.