Categories
ಕರಾವಳಿ

ಪೆಟ್ರೋಲಿಯಂ ಪೈಪ್ ಲೈನ್ ಗೆ ಕನ್ನ..! ನಿಮ್ಮ ಪೆಟ್ರೋಲ್ ಕದೀತಾರೆ ಹುಷಾರ್!

ಕರಾವಳಿ ಟಾಪ್ ನ್ಯೂಸ್

* ಪೆಟ್ರೋಲಿಯಂ ಪೈಪ್ ಲೈನ್ ಗೆ ಕನ್ನ..! ನಿಮ್ಮ ಪೆಟ್ರೋಲ್ ಕದೀತಾರೆ ಹುಷಾರ್!

* ಬ್ಯಾಂಕ್ ಸ್ಟೋರ್ ರೂಮಲ್ಲೇ ನೇಣಿಗೆ ಶರಣಾದ ಬ್ಯಾಂಕ್ ಉದ್ಯೋಗಿ!

ನಮ್ಮೂರ ಎಕ್ಸ್ ಪ್ರೆಸ್ ನ್ಯೂಸ್

ಮಂಗಳೂರು: ಬೆಂಗಳೂರು ಮತ್ತು ಮಂಗಳೂರು ನಡುವೆ ಪೆಟ್ರೋಲ್ ಸಾಗಿಸುವ ಪೈಪ್ ಲೈನ್ ನಲ್ಲಿ ಸುಮಾರು ಎರಡು ಸಾವಿರ ಲೀಟರ್ ನಷ್ಟು ಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್ ಕಂಡುಬಂದಿದ್ದು, ಅದು ಎಂಆರ್ ಪಿಎಲ್ ನ ಗಮನಕ್ಕೆ ಬಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಸಮಯದಲ್ಲಿ ನಂಬರ್ ಪ್ಲೇಟ್ ಇಲ್ಲದ ಲಾರಿಯೊಂದು ಹಿರೇಶಿಗರ ಬಳಿ ಪತ್ತೆಯಾಗುತ್ತಿದ್ದಂತೆ ಲಾರಿ ಚಾಲಕ ಮತ್ತು ಪೆಟ್ರೋಲ್ ಕದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕಳ್ಳತನದಲ್ಲಿ ಎಷ್ಟು ಜನರ ಕೈವಾಡವಿದೆ ಎನ್ನುವುದು ಇನ್ನಷ್ಟೇ ಪತ್ತೆಹಚ್ಚಬೇಕಿದೆ.‌ ಕೆಲವು ಸ್ಥಳೀಯರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ. ಇದರ ಕುರಿತು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನದಲ್ಲಿ ಬಳಸಿದ ಪೈಪ್ ಪರಿಕರಗಳು ಮತ್ತು ಟ್ಯಾಂಕರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬ್ಯಾಂಕ್ ಸ್ಟೋರ್ ರೂಮಲ್ಲೇ ನೇಣಿಗೆ ಶರಣಾದ ಬ್ಯಾಂಕ್ ಉದ್ಯೋಗಿ

ಮಂಗಳೂರು: ಅಳಕೆ ಗ್ರಾಮದ ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿ ಗಿರಿಧರ್ ಎಂಬ ವ್ಯಕ್ತಿಯು ತಾನು ಕಾರ್ಯನಿರ್ವಹಿಸಿದ ಬ್ಯಾಂಕ್ ನ ಸ್ಟೋರ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೊಡಿಯಾಲ್ ಬೈಲ್ ನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗಷ್ಟೇ ನಿವೃತ್ತರಾಗಿದ್ದ ಗಿರಿಧರ್ ನಿವೃತ್ತಯ ಬಳಿಕವೂ ಕೆಲಸ ನೀಡಿದ ಬ್ಯಾಂಕ್ ನ ಮೇಲಿನ ಪ್ರೀತಿಯಿಂದ ಪ್ರತಿದಿನ ಬ್ಯಾಂಕ್ ಗೆ ತೆರಳಿ ಕೆಲ ಹೊತ್ತು ಸಹೋದ್ಯೋಗಿಗಳೊಂದಿಗೆ ಸಮಯ ಕಳೆದು ಹೋಗುತ್ತಿದ್ದರು. ಆದರೆ ಮಂಗಳವಾರದಂದು ಎಂದಿನಂತೆ ಕೆನರಾ ಬ್ಯಾಂಕ್ ಗೆ ಬಂದ ಗಿರಿಧರ್ ಮರಳಿ ಮನೆಗೆ ಹಿಂತಿರುಗಲಿಲ್ಲ. ಪತಿಯ ನಾಪತ್ತೆಯ ಕಾರಣದಿಂದಾಗಿ ಗಿರಿಧರ್ ಪತ್ನಿ ಬಂದರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಲು ಗುರುವಾರ ಬೆಳಿಗ್ಗೆ ಬ್ಯಾಂಕ್ ಗೆ ತೆರಳಿ ಪರಿಶೀಲನೆ ನಡೆಸಿ, ಬಳಿಕ ಬ್ಯಾಂಕ್ ನ ಸ್ಟೋರ್ ರೂಮ್ ಬಾಗಿಲನ್ನು ತೆರೆಸಿ ನೋಡಿದಾಗ ನೇಣಿಗೆ ಶರಣಾದ ಸ್ಥಿತಿಯಲ್ಲಿ ಗಿರಿಧರ್ ಮೃತದೇಹ ಪತ್ತೆಯಾಗಿದೆ. ಅವರ‌ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಗಿರಿಧರ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.