ರಾಜಧಾನಿಯಲ್ಲಿ ನಂದೀಶ್ ದೋರ್ಗಲ್ ಅವರಿಗೆ ಅಭಿನಂದನೆ
– ಜೆಪಿನಗರ ಕಲ್ಬರಲ್ ಅಸೋಸಿಯೇಷನ್ ಕಾರ್ಯದರ್ಶಿಗಳಾಗಿ ಆಯ್ಕೆ
– ಮಲೆನಾಡು ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಸನ್ಮಾನ
– ಮಲೆನಾಡು ಮೂಲದ ರಾಜಧಾನಿ ಸ್ನೇಹಿತರ ಉಪಸ್ಥಿತಿ
NAMMUR EXPRESS NEWS
ಬೆಂಗಳೂರು: ಮಲೆನಾಡು ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿಯ ನಿಕಟ ಪೂರ್ವ ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ಸಹ್ಯಾದ್ರಿ ಸಂಘದ ಕಾರ್ಯಕಾರಣಿ ಸದಸ್ಯರಾದ ನಂದೀಶ್ ದೋರ್ಗಲ್ ಅವರು ಜೆಪಿನಗರ ಕಲ್ಬರಲ್ ಅಸೋಸಿಯೇಷನ್ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಇವರು ಕೊಪ್ಪ ತಾಲೂಕಿನ ದೊರಗಲ್ ಮೂಲದವರು. ಬೆಂಗಳೂರಲ್ಲಿ ಉದ್ಯಮಿ ಆಗಿರುವ ನಂದೀಶ್ ಅವರಿಗೆ
ಮಲೆನಾಡು ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿಯ ಪದಾಧಿಕಾರಿಗಳು ಸನ್ಮಾನಿಸಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಲೆನಾಡು ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಅಧ್ಯಕ್ಷರಾದ ಜೆ. ಕೆ. ಲೋಕೇಶ್, ಉಪಾಧ್ಯಕ್ಷರಾದ ಎಸ್. ರವಿ, ನಿರ್ದೇಶಕರಾದ ಕೆ.ಎಲ್. ಪ್ರಸಾದ್, ಪಿ.ಎನ್. ವಿಷ್ಣುಮೂರ್ತಿ, ಹೆಚ್. ಸಿ.ಜಯಪ್ರಕಾಶ್, ಜೆ.ಪಿ.ವಿರೇಶ್ ಬಿ.ಸಿ.ಡಾಕಪ್ಪ, ಹೆಚ್. ಆರ್. ಬಿಷ್ಠಪ್ಪ, ಭಾಗ್ಯ ಟ್ಯಾಗೂರ್, ಎಂ.ಎಂ.ಆಶಾ, ಸಿ.ಹೆಚ್. ಪುಂಡರೀಕ, ಎಂ.ಆರ್. ಪೂರ್ಣೇಶ್ ಹಾಗೂ ಮಲೆನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಅಜಿತ್ ಕಲ್ಕುಳಿ, ಉಪಾಧ್ಯಕ್ಷರಾದ ಶಶಿಕಾಂತ್ ಅತ್ತಿಕೊಡಿಗೆ ಸೇರಿದಂತೆ ಹಲವರು ಇದ್ದರು.
