ಕರಾವಳಿಯಲ್ಲಿ ಇಂದು ಎಲ್ಲೆಡೆ ಬಿಸು ಪರ್ಬ!
– ತುಳುವರಿಗೆ ಹೊಸ ವರ್ಷದ ಸಂಭ್ರಮ!
– ವಿಷು/ಬಿಸು ಹಬ್ಬ ಎಂದರೇನು?
– ಸರ್ವರಿಗೂ ವಿಷು/ಬಿಸು ಹಬ್ಬದ ಶುಭಾಶಯಗಳು!
NAMMUR EXPRESS NEWS
ಕೇರಳ ರಾಜ್ಯ ಹಾಗೂ ಕರ್ನಾಟಕದ ಕರಾವಳಿ ಭಾಗದ ಪ್ರತಿ ಮನೆಗಳಲ್ಲಿ ವಿಷು ಹಬ್ಬ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವಿಷು ಹಬ್ಬವು ಹೊಸ ವರ್ಷ ಮತ್ತು ಹೊಸ ಆರಂಭದ ಸಂಕೇತವಾಗಿದೆ.
ತುಳುವರು ಇದನ್ನು ‘ಬಿಸು ಪರ್ಬ’ ಎಂದು ಕರೆಯುತ್ತಾರೆ. ಕರಾವಳಿಯ ಹೊರತುಪಡಿಸಿ ರಾಜ್ಯದ ಎಲ್ಲೆಡೆ ಚಾಂದ್ರಮಾನ ಯುಗಾದಿಯನ್ನು ಹೊಸ ವರ್ಷ ಎಂದು ಗುರುತಿಸಿ ಆಚರಿತ್ತಾರೆ. ಆದರೆ ಹಲವೆಡೆ ಅದರ ಬದಲಾಗಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ.
ಈ ಸೌರಮಾನ ಯುಗಾದಿಯನ್ನೇ ಬಿಸು, ವಿಷು ಎಂದು ಕರೆಯಲಾಗುತ್ತದೆ. ವಿಷು ಎಂಬ ಹೆಸರು ‘ವಿಷುವತ್ ಸಂಕ್ರಾಂತಿ’ ಎಂಬ ಹೆಸರಿನಿಂದ ಬಂದಿದೆ.
ಖಗೋಳ ಶಾಸ್ತ್ರದ ಪ್ರಕಾರ, ವಿಷುವತ್ ಸಂಕ್ರಾಂತಿ ಎಂದರೆ ಸೂರ್ಯನು ಆಕಾಶ ಸಮಭಾಜಕ ವೃತ್ತವನ್ನು ದಾಟುವ ವಿದ್ಯಮಾನ. ವಿಷುವತ್ ಸಂಕ್ರಾಂತಿಯನ್ನು ಸೂಚಿಸುವ ಈ ಹಬ್ಬದಲ್ಲಿ ‘ವಿಷುಕಣಿ’ ಪ್ರಮುಖ ಆಚರಣೆಯಾಗಿದೆ. ಈ ವಿಷುಕಣಿ ಶ್ರೀಕೃಷ್ಣನ ವಿಜಯೋತ್ಸವವನ್ನೂ ಇದು ಸೂಚಿಸುತ್ತದೆ. ಪ್ರತಿವರ್ಷ ಏಪ್ರಿಲ್ 14 ರಂದು ಈ ‘ವಿಷು ಹಬ್ಬ’ ವನ್ನು ಆಚರಿಸಲಾಗುವುದು. ಎಲ್ಲಾದರೂ ಗ್ರಹಗತಿಗಳ ಚಲನಾ ವ್ಯತ್ಯಾಸದಿಂದಷ್ಟೇ ಕೆಲವೊಮ್ಮೆ ಏಪ್ರಿಲ್ 15 ರಂದು ಈ ‘ಸೌರಮಾನ ಯುಗಾದಿ’ ಬರುವುದು
ವಿಷು ಹಬ್ಬದ ಹಿನ್ನಲೆ
ಹಿಂದೂ ಪುರಾಣದ ಪ್ರಕಾರ, ಶ್ರೀಕೃಷ್ಣನು ಈ ದಿನದಂದು ನರಕಾಸುರನೆಂಬ ರಾಕ್ಷಸನನ್ನು ಕೊಂದನು. ಈ ಕಥೆಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ತೋರಿಸುತ್ತದೆ ಮತ್ತು ಇದು ಹಬ್ಬದ ಸಂದೇಶದ ಪ್ರಮುಖ ಭಾಗವಾಗಿದೆ.
ವಿಷು ಕಣಿ ಮಹತ್ವದ
ವಿಷುವಿನ ಪ್ರಮುಖ ಭಾಗಗಳಲ್ಲಿ ಒಂದು ವಿಷು ಕಣಿ. ಅಂದರೆ ಶ್ರೀಕೃಷ್ಣನ ವಿಗ್ರಹವನ್ನು ಇಟ್ಟು ಅದರ ಮುಂದೆ ಕೊನ್ನಾ ಹೂವು (ಹಳದಿ ಬಣ್ಣದ ವಿಶೇಷ ಹೂವುಗಳು), ಹಣ್ಣು, ತರಕಾರಿ, ಒಂದು ಪಾತ್ರೆಯಲ್ಲಿ ಬೆಳ್ಳಿಗೆ ಅಕ್ಕಿ, ತೆಂಗಿನಕಾಯಿ,ಸಾಂಪ್ರದಾಯಿಕ ಲೋಹದ ಕನ್ನಡಿ, ಪವಿತ್ರ ಗ್ರಂಥ (ಭಗವದ್ಗೀತೆಯಂತೆ)ಗಳನ್ನಿಟ್ಟು ಪೂಜಿಸುದು.
ವಿಷುಕಣಿಯಲ್ಲಿ ಏನೆಲ್ಲಾ ಇರಬೇಕು?
ವಿಷುಕಣಿಯಲ್ಲಿ ಮಂಗಳಕರ ವಸ್ತುಗಳಾದ ಅಕ್ಕಿ, ಮಾವು, ಹಲಸು, ತೆಂಗಿನಕಾಯಿ, ನಿಂಬೆ, ಬಾಳೆಹಣ್ಣು, ಹತ್ತಿಯ ಧೋತಿ, ಅಡಿಕೆ, ಸೌತೆಕಾಯಿಗಳು, ವೀಳ್ಯದೆಲೆಗಳು, ಚಿನ್ನ, ನೋಟುಗಳು ಅಥವಾ ನಾಣ್ಯಗಳು, ರೇಷ್ಮೆ ಬಟ್ಟೆ, ಕನ್ನಡಿ, ಪವಿತ್ರ ಹಿಂದೂ ಪುಸ್ತಕಗಳು, ಕನ್ನಡಿ ತಾಜಾ ಹಣ್ಣುಗಳು, ಹೂವುಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ವಸ್ತುಗಳನ್ನು ಆ ಮನೆಯ ಹಿರಿಯ ಮಹಿಳೆ ಒಂದು ಹರಿವಾಣ ಅಥವಾ ದೊಡ್ಡ ತಟ್ಟೆಯಲ್ಲಿಟ್ಟು ಅಲಂಕರಿಸಿ ದೇವರ ಫೋಟೋದ ಮುಂದೆ ಇಡಲಾಗುತ್ತದೆ.
ವಿಶೇಷ ಭೋಜನ
ಈ ದಿನ ಎಲ್ಲರ ಮನೆಯಲ್ಲಿಯೂ ವಿಶೇಷ ಊಟವಿರುತ್ತದೆ. ಈ ಭೋಜನದಲ್ಲಿ ವಸಂತ ಋತುವಿನಲ್ಲಿ ಬೆಳೆಯುವ ಹೊಸ ಆಹಾರ ಪದಾರ್ಥಗಳಿಂದ, ತರಕಾರಿಗಳಿಂದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಎಳೆ ಹಲಸು, ಮಾವು, ಕುಂಬಳಕಾಯಿ ಇತ್ಯಾದಿ ವಸ್ತುಗಳು ಸೇರಿಕೊಂಡಿರುತ್ತದೆ. ಇದರೊಂದಿಗೆ ವಿಷು ಗಂಜಿ ಮತ್ತು ಪಚಡಿಯು ಪ್ರಮುಖವಾದ ಆಹಾರ ಖಾದ್ಯಗಳಾಗಿವೆ.
