ಟಾಪ್ 5 ನ್ಯೂಸ್ ಕರ್ನಾಟಕ
ಹಾಸನ : ಜಮೀನಲ್ಲಿ ಕೆಲಸ ಮಾಡುವ ವೇಳೆ ಹೆಚ್ಚೇನು ಕಡಿದು ರೈತ ಸಾವು…!!
– ಬಾಗಲಕೋಟೆ: ವ್ಯಕ್ತಿಯ ರಕ್ಷಿಸಲು ಹೋಗಿ ಸೈನಿಕ ನೀರುಪಾಲು
– ಬಳ್ಳಾರಿ: ಮಲಗಿದ್ದ ವೇಳೆ ಹಾವು ಕಚ್ಚಿ ಬಾಲಕಿ ಸಾವು..!!
– ಶಿವಮೊಗ್ಗ : ಹಕ್ಕಿಪಿಕ್ಕಿ ಜನಾಂಗದ ಮಹಿಳೆ ದಕ್ಷಿಣ ಆಫ್ರಿಕಾದಲ್ಲಿ ಸಾವು..!!
– ಬೆಂಗಳೂರು : 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..!!
NAMMUR EXPRESS NEWS
ಹಾಸನ : ಹೆಚ್ಚೇನು ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿ ಕಂಟೇನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ರೈತ ನಂಜುಂಡ (50) ಮೃತಪಟ್ಟವರು. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹೆಚ್ಚೇನು ಹುಳುಗಳು ದಾಳಿ ಮಾಡಿ ಕಚ್ಚಿವೆ. ಇದರಿಂದಾಗಿ ಅವರು ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಪತ್ನಿ ಮತ್ತು ಒಬ್ಬ ಮಗ ಇದ್ದಾರೆ. ಈ ಕುರಿತಂತೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಬಾಗಲಕೋಟೆ: ವ್ಯಕ್ತಿಯ ರಕ್ಷಿಸಲು ಹೋಗಿ ಸೈನಿಕ ನೀರುಪಾಲು
ಬಾಗಲಕೋಟೆ : ಸ್ನಾನ ಮಾಡಲು ಹೋಗಿ ಈಜುಬಾರದೇ ನೀರಿನಲ್ಲಿ ಮುಳುಗಿದ ಯುವಕನನ್ನು ಕಾಪಾಡಲು ಹೋಗಿ ಸೈನಿಕ ಸೇರಿ ಇಬ್ಬರೂ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಣೇರಿ ಗ್ರಾಮದ ಹತ್ತಿರ ಮಲಪ್ರಭಾ ನದಿಯಲ್ಲಿ ನಡೆದಿದೆ. ತಾಲೂಕಿನ ಹಂಸನೂರ ಗ್ರಾಮದ ಶೇಖಪ್ಪ ಮುತ್ತಪ್ಪ ಮೂಲಿಮನಿ (15) ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ (25) ಮೃತಪಟ್ಟವರು. ಶೇಖಪ್ಪ ಮುತ್ತಪ್ಪ ಮೂಲಿಮನಿ ಎಂಬುವರು ಮಣೇರಿ ಗ್ರಾಮದ ಹತ್ತಿರದ ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ, ಈಜುಬಾರದೇ ರಕ್ಷಣೆಗಾಗಿ ಕೂಗಿಕೊಂಡರು. ಆಗ ಅಲ್ಲಿಯೇ ಸಮೀಪದಲ್ಲಿದ್ದ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ ಅವರು ಮಲಪ್ರಭಾ ನದಿಯಲ್ಲಿ ಈಜೆ, ಮೂಲಿಮನಿಯನ್ನು ರಕ್ಷಿಸಲು ಮುಂದಾದರಾದರೂ, ಸಾಧ್ಯವಾಗದೆ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
– ಬಳ್ಳಾರಿ: ಮಲಗಿದ್ದ ವೇಳೆ ಹಾವು ಕಚ್ಚಿ ಬಾಲಕಿ ಸಾವು..!!
ಬಳ್ಳಾರಿ: ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ತಾಲೂಕಿನ ಹೊಸ ಮೋಕಾ ಗ್ರಾಮದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಗ್ರಾಮದ ಲಕ್ಷ್ಮಣ ಹಾಗೂ ಶೇಖಮ್ಮ ದಂಪತಿ ಪುತ್ರಿ, ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಶ್ರಾವಣಿ (16) ಮೃತಪಟ್ಟ ಬಾಲಕಿ. ರಾತ್ರಿ ಊಟ ಮಾಡಿ ಮಲಗಿದ ಬಳಿಕ ಬಾಲಕಿಯ ಕೈ ಮತ್ತು ಕಾಲಿಗೆ ಹಾವು ಕಚ್ಚಿದೆ. ಕೂಡಲೇ ಸ್ಥಳೀಯ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಚಿಕಿತ್ಸೆ ಫಲಿಸದೆ ಶ್ರಾವಣಿ ಅಸುನೀಗಿದ್ದಾಳೆ. ಬೆಳಗ್ಗೆ ಮನೆಯಲ್ಲಿ ಹುಡಕಾಟ ನಡೆಸಿದ ಸ್ಥಳೀಯರು ಹಾವನ್ನು ಹೊಡೆದು ಸಾಯಿಸಿದ್ದಾರೆ.
– ಶಿವಮೊಗ್ಗ : ಹಕ್ಕಿಪಿಕ್ಕಿ ಜನಾಂಗದ ಮಹಿಳೆ ದಕ್ಷಿಣ ಆಫ್ರಿಕಾದಲ್ಲಿ ಸಾವು..!!
ಶಿವಮೊಗ್ಗ: ರಾಜ್ಯದ ಮಹಿಳೆಯೊಬ್ಬರು ದಕ್ಷಿಣ ಆಫ್ರಿಕಾದಲ್ಲಿ ಮೃತಪಟ್ಟಿದ್ದಾಳೆ. ಶಿವಮೊಗ್ಗ ತಾಲೂಕಿನ ಹಕ್ಕಪಿಕ್ಕಿ ಕ್ಯಾಂಪಿನ ಶಿಮಿಲಾ (45) ಸಾವನ್ನಪ್ಪಿದ ವರು. ಶಿಮಿಲಾ ದಕ್ಷಿಣ ಆಫ್ರಿಕಾಕ್ಕೆ ಕೆಲಸದ ನಿಮಿತ್ತ ತೆರಳಿದ್ದರು. ಗಿನಿಯಾ ಕೊನಾಕ್ರಿ ಎಂಬಲ್ಲಿ ದಿಢೀರನೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಪಾರ್ಥಿವ ಶರೀರ ತರಲು ಭಾರತೀಯ ರಾಯಭಾರಿ ಕಚೇರಿಗೆ ಕುಟುಂಬದವರು ಮನವಿ ಸಲ್ಲಿಸಿದ್ದಾರೆ.
– ಬೆಂಗಳೂರು : 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು: ಪರೀಕ್ಷಾ ಭಯದಿಂದ ದಂತ ವೈದ್ಯಕೀಯ
ವಿದ್ಯಾರ್ಥಿನಿ ಅಪಾರ್ಟ್ ಮೆಂಟ್‌ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಾಳದ ಸುಮಂಗಲಿ ಸೇವಾಶ್ರಮ ರಸ್ತೆಯ ಅಪಾರ್ಟ್‌ಮೆಂಟ್ ನಿವಾಸಿ ಸೌಮ್ಯಾ (21) ಆತ್ಮಹತ್ಯೆಗೆ ಶರಣಾದ ವಿದ್ಯಾ ರ್ಥಿನಿ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಂಧ್ರಪ್ರದೇಶ ಮೂಲದ ಗಣೇಶ್ ನಾರಾಯಣ್ ವೃತ್ತಿಯಲ್ಲಿ ಎಂಜಿನಿ ಯರ್ ಆಗಿದ್ದು, ಇವರ ಪುತ್ರಿ ಸೌಮ್ಯಾ ಯಶವಂತಪುರದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ದಂತ ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರು. ಸೌಮ್ಯಾ ಪರೀಕ್ಷಾ ಖಿನ್ನತೆಗೆ ಒಳಗಾಗುತ್ತಿದರು.