Categories
ಕರಾವಳಿ

ಬಂಟ್ವಾಳದಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ, ಸವಾರ ದಾರುಣ ಸಾವು

ಕರಾವಳಿ ಟಾಪ್ ನ್ಯೂಸ್

ಬಂಟ್ವಾಳದಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ, ಸವಾರ ದಾರುಣ ಸಾವು

– ತೆಕ್ಕಟ್ಟೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ತಾಯಿ ಗಂಭೀರ, ತಂದೆ-ಮಗ ಸಾವು!
– ಉಡುಪಿ: ಕುಡಿದ ಮತ್ತಿನಲ್ಲಿ ರಂಪಾಟ, ಮನೆಗೆ ಬೆಂಕಿಯಿಟ್ಟ ಭೂಪ

NAMMUR EXPRESS NEWS
ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಕಾರು ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ‌.
ಇಪ್ಪತ್ತೆರಡು ವರ್ಷದ ಮಂಚಿ ಕುಕ್ಕಾಜೆ ನಿವಾಸಿ ಲಿಖಿತ್ ಸಾವನ್ನಪ್ಪಿದ ಮೃತ ದುರ್ದೈವಿ. ಈತ ರಜೆಯಲ್ಲಿದ್ದ ಕಾರಣ ಸ್ಟೇಜ್ ಡೆಕೋರೇಷನ್ ಕೆಲಸಕ್ಕೆ ಹೋಗಿದ್ದು ಬಿಸಿರೋಡಿನಿಂದ ಮನೆ ಕಡೆಗೆ ಸಂಚರಿಸುತ್ತಿದ್ದ ವೇಳೆ ಪಾಣೆಮಂಗಳೂರು ಎಂಬಲ್ಲಿ ಅತೀ ವೇಗವಾಗಿ ಬಂದ ಕಾರು ಢಿಕ್ಕಿಯಾಗಿ ಈ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

– ತೆಕ್ಕಟ್ಟೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ತಾಯಿ ಗಂಭೀರ, ತಂದೆ-ಮಗ ಸಾವು!

ತೆಕ್ಕಟ್ಟೆ: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಮಗ ಸಾವನ್ನಪ್ಪಿ, ತಾಯಿ ಗಂಭೀರವಾಗಿರುವ ಘಟನೆ ಬೆಳಿಗ್ಗೆ ನಡೆದಿದೆ.
ಮಗ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿರುವ ಬಗ್ಗೆ ತಿಳಿದು ತಂದೆಯೂ ಬಾವಿಗೆ ಹಾರಿದ್ದಾರೆ. ಆಗ ತಂದೆ ಮಗ ಸಾವನ್ನಪ್ಪಿದ್ದಾರೆ. ಗಂಡ ಮತ್ತು ಮಗ ಬಾವಿಗೆ ಹಾರಿರುವ ವಿಷಯ ತಿಳಿದ ತಾಯಿಯೂ ಬಾವಿಗೆ ಹಾರಿದ್ದು ಅವರ ಆಕ್ರಂದನ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ.
ಮೃತರನ್ನು ತೆಕ್ಕಟ್ಟೆಯ ಕಂಚುಗರುಬೆಟ್ಟು ನಿವಾಸಿಗಳಾಗಿದ್ದು, ಅಂಕದ ಕಟ್ಟೆ ಪೆಟ್ರೋಲ್ ಬಂಕ್ ಉದ್ಯೋಗಿ ಮಾಧವ ದೇವಾಡಿಗ (56) ಮತ್ತು ಅವರ ಮಗ ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ತಾಯಿ ತಾರ ದೇವಾಡಿಗ ಪರಿಸ್ಥಿತಿ ಗಂಭೀರವಾಗಿದೆ.
ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು ಕುಟುಂಬಕ್ಕೆ ಸಾಲಭಾದೆ ಕಾಡುತ್ತಿದ್ದು, ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

– ಉಡುಪಿ: ಕುಡಿದ ಮತ್ತಿನಲ್ಲಿ ರಂಪಾಟ, ಮನೆಗೆ ಬೆಂಕಿಯಿಟ್ಟ ಭೂಪ

ಉಡುಪಿ: ಮಧ್ಯ ಸೇವನೆಯಿಂದ ಅಮಲೇರಿದ ಕುಡುಕನೊಬ್ಬ, ತ‌ನ್ನದೆ ಮನೆಗೆ ಬೆಂಕಿ‌ ಹಚ್ಚಿದ ಘಟನೆಯು, ನಗರದ ಹೊರವಲಯದ ಚಿಟ್ಪಾಡಿಯಲ್ಲಿ ಸಂಭವಿಸಿದೆ
ಕುಡುಕನ ರಂಪಾಟ, ಉಗ್ರ ವರ್ತನೆ ಎದುರಿಸಲು ಅಸಹಾಯಕರಾದ ಮನೆಯವರು, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರಲ್ಲಿ ನೆರವಿಗೆ ಬರುವಂತೆ ಹೇಳಿಕೊಂಡಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಒಳಕಾಡುವರು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ದೊಡ್ಡ ಪ್ರಮಾಣದಲ್ಲಿ ಆಗಬಹುದಾದ ಅಗ್ನಿದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಒಳಕಾಡುವರು ಕುಡುಕನ‌‌ ಮನವೊಲಿಸಿ ಮಧ್ಯವರ್ಜನ‌ ಕೇಂದ್ರಕ್ಕೆ ದಾಖಲುಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.