Categories
ಉಡುಪಿ ಕರಾವಳಿ ಮಂಗಳೂರು

ರಣಜಿ ತಂಡದಲ್ಲಿ ಮಿಂಚಲಿದ್ದಾರೆ ಕರಾವಳಿ ಹುಡುಗರು!

ರಣಜಿ ತಂಡದಲ್ಲಿ ಮಿಂಚಲಿದ್ದಾರೆ ಕರಾವಳಿ ಹುಡುಗರು!
– ಸತತವಾಗಿ 3 ವರ್ಷಗಳಿಂದ ಅವಕಾಶ ಪಡೆದ ಅಭಿಲಾಷ್ ಶೆಟ್ಟಿ
– ಮೊದಲ ಬಾರಿಗೆ ಆಯ್ಕೆ ಆದ ಶಿಖರ್ ಶೆಟ್ಟಿ
– ಇಬ್ಬರೂ ಕುಂದಾಪುರ ಮೂಲದವರು: ಅಭಿನಂದನೆಗಳು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್, ಕರಾವಳಿ
ಉಡುಪಿ: ರಾಜ್ಯ ರಣಜಿ ತಂಡದ ಆಟಗಾರರ ಆಯ್ಕೆ ಇದೀಗ ಪ್ರಕಟಗೊಂಡಿದ್ದು, ಈ ತಂಡದಲ್ಲಿ ಇಬ್ಬರು ಕರಾವಳಿ ಭಾಗದ ಯುವಕರು ಅವಕಾಶ ಪಡೆದಿದ್ದಾರೆ. ಅಚ್ಚರಿ ಎಂದ್ರೆ ಇಬ್ಬರೂ ಕುಂದಾಪುರ ಮೂಲದವರು ಎನ್ನುವುದು ಸ್ಥಳೀಯ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ.
ಎಡಗೈ ವೇಗಿ ಎಂದೇ ಖ್ಯಾತಿ ಪಡೆದ ಅಭಿಲಾಷ್ ಶೆಟ್ಟಿ ಅವರು ಈ ವರ್ಷವೂ ಆಯ್ಕೆಯಾಗುವ ಮೂಲಕ, ಸತತ ಮೂರು ವರ್ಷಗಳಿಂದ ಅವಕಾಶ ಪಡೆಯುತ್ತಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುಂದಾಪುರ ಸೌಡ ಗ್ರಾಮದ ಮೂಲದವರಾದ ರಾಜೇಶ್ ಶೆಟ್ಟಿ ಹಾಗೂ ವಚನಾ ದಂಪತಿಯ ಪುತ್ರನಾದ ಶಿಖರ್ ಶೆಟ್ಟಿ ಅವರು ಆಯ್ಕೆಯಾಗಿರುವ ಮತ್ತೊಬ್ಬ ಆಟಗಾರ.
ರಾಜೇಶ್ ಶೆಟ್ಟಿ ಅವರು ಖ್ಯಾತ ಕ್ರಿಕೆಟರ್ ಕೂಡ ಆಗಿದ್ದು, ‘ಎಚ್ಓವೈ ಕ್ರಿಕೆಟರ್ಸ್’ ತಂಡದ ಸ್ಥಾಪಕರಾಗಿದ್ದು, ಬೆಂಗಳೂರಿನಲ್ಲಿ ಕ್ರೀಡಾ ಉಪಕರಣಗಳ ಉದ್ಯಮವನ್ನು ನಡೆಸುತ್ತಿದ್ದು, ಶಿಖರ್ ಶೆಟ್ಟಿ ಅವರೂ ಕೂಡ ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸುತ್ತಿದ್ದು, ಕ್ರೀಡಾ ತರಬೇತಿಯನ್ನು ಸಹ ಅಲ್ಲಿಯೇ ಪಡೆದುಕೊಳ್ಳುತ್ತಿದ್ದಾರೆ.

ಶಿಖರ್ ಶೆಟ್ಟಿ ಅವರು ಎಡಗೈ ಸ್ಪಿನ್ನರ್ ಆಗಿದ್ದು, ಬಲಗೈ ಬ್ಯಾಟ್ಸ್ ಮ್ಯಾನ್ ಆಗಿದ್ದಾರೆ. ಅಂಡರ್ 19, ಅಂಡರ್ 20 ರಲ್ಲಿ ಉತ್ತಮ ರೀತಿಯಲ್ಲಿ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದ ಶಿಖರ್ ಶೆಟ್ಟಿ ಕೆಎಸ್ ಸಿಎ ನಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಈ ಹಿನ್ನೆಲೆಯಿಂದಾಗಿ ಕರ್ನಾಟಕ ರಣಜಿ ತಂಡದಲ್ಲಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ ವರ್ಷದ ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದು, ಇದಕ್ಕೂ ಮೊದಲು ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡದಲ್ಲೂ ಆಡಿದ್ದರು. ಈ ಇಬ್ಬರೂ ಕರಾವಳಿ ಆಟಗಾರರಿಗೆ ಶುಭಾಶಯಗಳು.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.