Categories
Uncategorized ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿ ದಸರಾ ಮೆರವಣಿಗೆಯಲ್ಲಿ ಕೃಷ್ಣಗಾರುಡಿ ಟ್ಯಾಬ್ಲೋಗೆ ಜನಮನ್ನಣೆ

ತೀರ್ಥಹಳ್ಳಿ ದಸರಾ ಮೆರವಣಿಗೆಯಲ್ಲಿ ಕೃಷ್ಣಗಾರುಡಿ ಟ್ಯಾಬ್ಲೋಗೆ ಜನಮನ್ನಣೆ
– ಹೆಚ್ ಎನ್ ಯೋಗೀಶ್ ಅವರ ನವರಸ ಕಲಾವೃಂದ ಹೆಗಡೆಮನೆ ಇವರಿಂದ ತಯಾರಿ
– ವೇಷ ಭೂಷಣದಿಂದ ಜನರ ಮನಸ್ಸು ಗೆದ್ದ ಕಲಾವಿದರು

NAMMUR EXPRESS NEWS
ತೀರ್ಥಹಳ್ಳಿ: ಹೆಚ್ ಎನ್ ಯೋಗೀಶ್ ಅವರ ನವರಸ ಕಲಾವೃಂದ ಹೆಗಡೆಮನೆ ತೀರ್ಥಹಳ್ಳಿ ತಾಲೂಕು ಇವರಿಂದ ಶ್ರೀರಾಮೇಶ್ವರ ದಸರಾ ಮೆರವಣಿಗೆಯಲ್ಲಿ ಟ್ಯಾಬ್ಲೋ ಮಾಡಿ ಜನಮನ್ನಣೆಯನ್ನು ಪಡೆದುಕೊಂಡರು. ಯೋಗೀಶರವರ ಕೊಳಲು ವಾದನ ಮನಸ್ಸಿಗೆ ಆನಂದವನ್ನು ನೀಡಿತು ಮತ್ತು ಮನಸೂರೆಗೊಂಡಿತು. ಎಲ್ಲಾ ಕಲಾವಿದರು ವೇಷ ಭೂಷಣವು ಕೂಡ ತುಂಬಾ ಚೆನ್ನಾಗಿ ಮೂಡಿ ಬಂತು. ಕೃಷ್ಣಗಾರುಡಿ ಎಂಬ ಈ ಟ್ಯಾಬ್ಲೋ ಈ ತಂಡದ ನಾಯಕರಾದ ಯೋಗೀಶ್ ಹೆಗಡೆಮನೆಯವರ ಶ್ರಮದ ಫಲವಾಗಿತ್ತು.

ಕಲಾವಿದರು: ಯೋಗೀಶ ಹೆಗಡೆಮನೆ ಕೃಷ್ಣನಾಗಿ ಕೊಳಲೂದಿದರು, ಭೀಮನಾಗಿ ಹೊಸೂರು ಮಹೇಶ್ ಗೌಡ್ರು, ಅರ್ಜುನನಾಗಿ ಗಣೇಶ, ಹಾವುಗೊಲ್ಲನಾಗಿ ಕೆಸರೆ ಪಿಳ್ಳೆ, ಬಲರಾಮನಾಗಿ ಸುರೇಶ ಬಳೆಗಾರ, ಸಾಲೂರು ಸಹಾಯಕರಾದ ಬಂದ್ಯಾಮಹೇಂದ್ರ ಶ್ರೀಧರ್ ಆಚಾರ್ಯ ಕಾರ್ತಿಕೇಯ, ಗೋಪಾಲ ನಾಯಕ ಹೊಸಮನೆ, ಸಿದ್ದಾರ್ಥ್ ಹಾರೋಗದ್ದೆ, ಸತೀಶ್ ಗೌಡ ಆರುಕಂಡಗ, ಮುರಳಿ ಹೊಸಮನೆ, ಚಂದ್ರ ಕುಮಾರ, ಹರೀಶ್ ಅತ್ತಿಕೊಡುಗೆ, ವಿನ್ಯಾಸ ನಿರಂಜನ ತೀರ್ಥಹಳ್ಳಿ. ಇವರ ಕಲಾ ಸೇವೆಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.