Categories
ಕರಾವಳಿ ಮಂಗಳೂರು

ನ್ಯೂಸ್ ಕರಾವಳಿ 27-12-2023

– ಅಗ್ನಿಶಾಮಕ ದಳದಿಂದ ಮಗುವಿನ ರಕ್ಷಣೆ!
– ನಗರಸಭೆ ಉಪಚುನಾವಣೆ: ಜಾತ್ರೆ, ಸಂತೆಗಳು ನಿಷೇಧ!

NAMMUR EXPRESS NEWS:
ಮಂಗಳೂರು: ಫ್ಲ್ಯಾಟ್ ಒಂದರಲ್ಲಿ ಸಿಲುಕಿದ್ದ ಮಗುವನ್ನು ಪಾಂಡೇಶ್ವರ ಅಗ್ನಿಶಾಮಕ ದಳದವರು ರಕ್ಷಿಸಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಮೂರು ವರ್ಷದ ಮಗು ಆಟವಾಡುತ್ತಾ ನಾಲ್ಕನೇ ಮಹಡಿಯ ಕೋಣೆಗೆ ಹೋಗಿ ಚಿಲಕ ಹಾಕಿಕೊಂಡಿದೆ. ಗಾಬರಿಗೊಂಡ ಪೋಷಕರು ಬಾಗಿಲು ತೆಗೆಯಲು ಆಗದೆ ಅಗ್ನಿಶಾಮಕ ದಳದ ನೆರವು ಕೋರಿದ್ದಾರೆ. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಹಗ್ಗದ ಮೂಲಕ ಆ ಕೋಣೆಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ.

ಉಡುಪಿ: ಉಡುಪಿಯಲ್ಲಿ ಸ್ಥಳೀಯವಾಗಿ ಕೆಲವು ಖಾಲಿಯಿರುವ ಸ್ಥಾನಗಳಿಗೆ ಡಿ.27ರ ಇಂದು ಚುನಾವಣೆ ನಡೆಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದ ಹಾಗೆ ಮತ್ತು ಮತದಾನದ ಸಮಯದಲ್ಲಿ, ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬೆಳಿಗ್ಗೆ ಆರು ಗಂಟೆಯಿಂದ ಮತದಾನ ಮುಗಿಯುವವರೆಗೂ ಸಂತೆ, ಜಾತ್ರೆಯಂತಹ ಪೂರ್ವಾನುಮತಿಯ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.