ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಗೆ 15 ವರ್ಷದ ಸಂಭ್ರಮ!
– ಲಕ್ಕಿ ಡ್ರಾ ಮೂಲಕ ಗ್ರಾಹಕರಿಗೆ ಒಲಿದ ಬಂಪರ್ ಬಹುಮಾನಗಳು
– ಸಂಸ್ಥೆಯ ಗ್ರಾಹಕ ಸೇವೆಗೆ ಗಣ್ಯರ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯು, ಚಿನ್ನಾಭರಣಗಳಲ್ಲಿ, ವಿಭಿನ್ನ ವಿನ್ಯಾಸ, ಶ್ರೇಷ್ಠ ಗುಣಮಟ್ಟ ಒದಗಿಸುವ ಮೂಲಕ ಮಲೆನಾಡಿನ ಮನೆಮಾತಾಗಿದ್ದು ಉತ್ತಮ ಗ್ರಾಹಕ ಸೇವೆಯನ್ನು ಒದಗಿಸುತ್ತಾ ಬಂದಿದೆ. ಇದೀಗ ಈ ಸಂಸ್ಥೆ ಸ್ಥಾಪನೆಯಾಗಿ ಹದಿನೈದು ವರ್ಷಗಳು ಕಳೆದಿದ್ದು, ಸೋಮವಾರ ಹದಿನೈದನೇ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿದೆ. ಈ ಸಂಭ್ರಮಾಚರಣೆಯ ಅಂಗವಾಗಿ ಗ್ರಾಹಕರಿಗೆ ಬಹುಮಾನಗಳನ್ನಿಟ್ಟು ಲಕ್ಕಿ ಡ್ರಾ ಮೂಲಕ ಆರಿಸಿ ವಿಜೇತರಿಗೆ ಬಂಪರ್ ಬಹುಮಾನವಾಗಿ 3 ಲಕ್ಷ ರೂ ಚೆಕ್ ವಿತರಿಸಲಾಯಿತು. ಈ ಸಮಾರಂಭವನ್ನು ಪಟ್ಟಣದ ವಿದ್ಯಾಧಿರಾಜ ಭವನದಲ್ಲಿ ಹಮ್ಮಿಕೊಂಡಿದ್ದು, ಗ್ರಾಹಕರು ಸಂತಸದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು. ನ್ಯಾಷನಲ್ ಗೋಲ್ಡ್ನಲ್ಲಿ ಗುಣಮಟ್ಟದ ಆಭರಣಗಳು ಲಭ್ಯವಿದ್ದು, ಚಿನ್ನಾಭರಣ ಮಾರಾಟ ಉದ್ಯಮದ ನಿರ್ವಹಣೆಗೆ ಶಿಸ್ತು ಮತ್ತು ಬದ್ಧತೆ ಮುಖ್ಯ.
ಗ್ರಾಹಕರ ಪ್ರೀತಿ ವಿಶ್ವಾಸ ಪಡೆದು ವ್ಯವಹಾರ ನಡೆಸಿದರೆ ಯಶಸ್ಸು ಸಾಧ್ಯ ಎಂದು ಕೆನರಾ ಬ್ಯಾಂಕ್ ಮಣಿಪಾಲ್ ವೃತ್ತದ ಡಿಜಿಎಂ ರಾಜೀವ್ ತುಕ್ರಾಲ್ ಹೇಳಿದ್ದಲ್ಲದೆ ಸಂಸ್ಥೆಯ ನಂಬಿಕಾರ್ಹತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆ ಮುಖ್ಯಸ್ಥ ಅಬ್ದುಲ್ ರೆಹಮಾನ್ ಮಾತನಾಡಿ, ನಾವು ಒಂದೇ ವೃತ್ತಿಯನ್ನು ಅವಲಂಬಿಸದೆ ತಂದೆಯವರ ಸಹಕಾರದಿಂದ ಬೇರೆ ಬೇರೆ ವೃತ್ತಿಯನ್ನು ಆರಂಭಿಸಿದ್ದು ಇದರಲ್ಲಿ ಯಶಸ್ಸು ಕಾಣುತ್ತಿದ್ದೇವೆ ಎಂದು ಹೇಳಿದರು. ಸಂಸ್ಥೆ ಮುಖ್ಯಸ್ಥ ಇಬ್ರಾಹಿಂ ಷರೀಫ್ ಅಧ್ಯಕ್ಷತೆ ವಹಿಸಿದ್ದರು. ತೀರ್ಥಹಳ್ಳಿ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸಾಬೀರ್, ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಮುಖ್ಯಸ್ಥರಾದ ಸುಲೇಮಾನ್, ಅಬ್ದುಲ್ ಕಲಾಂ, ಅಬ್ದುಲ್ ರೆಹಮಾನ್, ಕಬೀರ್, ಮಂಜುನಾಥ ಮಲ್ಯ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಕ್ಕಳ ಶಿಕ್ಷಣಕ್ಕೆ ಸಹಕಾರ
ನ್ಯಾಷನಲ್ ಸಂಸ್ಥೆಯ ಪ್ರಮುಖರಾದ ಯೂಸಫ್ ಹೈದರ್ ಮಾತನಾಡಿ, ನಮ್ಮ ತಂದೆಯವರ ಸಹಕಾರದಿಂದ ಸ್ಥಾಪಿತವಾದ ಈ ಸಂಸ್ಥೆಯು ಅಣ್ಣ ತಮ್ಮಂದಿರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಈ ಸಂಸ್ಥೆಯು ಹಾಜಿ ಶೇಖ್ ಅಹಮದ್ ಅವರ ನೇತೃತ್ವದಲ್ಲಿ ನಮ್ಮ ಫೌಂಡೇಷನ್ ಮುಖಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸುತ್ತಿದೆ. ನಮ್ಮ ಫೌಂಡೇಶನ್ ಆರಂಭವಾಗಿ ನಾವು ಕಳೆದ ವರ್ಷದಿಂದ 8 ಲಕ್ಷ ರೂ.ಗಳ ಸ್ಕಾಲರ್ಶಿಪ್ ನೀಡುತ್ತಾ ಬಂದಿದ್ದೇವೆ ಎಂದರು.
ಶಿವಮೊಗ್ಗಕ್ಕೂ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ವಿಸ್ತರಣೆ
ಸಂಸ್ಥೆಯ ಇನ್ನೋರ್ವ ಪ್ರಮುಖರಾದ ಯೂಸಫ್ ಹೈದರ್ ಪ್ರಾಸ್ತಾವಿಕ ಮಾತನಾಡಿ, ಅತೀ ಶೀಘ್ರದಲ್ಲಿ ಶಿವಮೊಗ್ಗದಲ್ಲಿ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯ ಮಾರಾಟ ಮಳಿಗೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಲಕ್ಕಿ ಡ್ರಾ ವಿಜೇತರು:
ಬಂಪರ್ ಬಹುಮಾನ;40135,ಬುಡನ್ ಸಾಬ್ ತೀರ್ಥಹಳ್ಳಿ.
ಪ್ರಥಮ ಬಹುಮಾನ; 16028,ಸುಧಾಕರ್,ಸೊನಲೆ
ದ್ವಿತೀಯ: 24561ಮಂಜುನಾಥ್ ತೀರ್ಥಹಳ್ಳಿ
ತೃತೀಯ: 144986 ಸರಿತಾ ಫರ್ನಾಂಡಿಸ್,ಕೊಪ್ಪ
ಚತುರ್ಥ: 114591_ಆಶ್ರೀತ್,ಆನಂದಪುರ.
ಸಮಾಧಾನ ಬಹುಮಾನ 5 ಮಂದಿಗೆ(ರೂ.10000)
1.78426 ಸತೀಜಾ,ತೀರ್ಥಹಳ್ಳಿ
2.53382 ಜ್ಯೋತಿ,ಎನ್.ಆರ್.ಪುರ.
3. 04048,ವೀಣಾ,ಕೊಪ್ಪ
4.147675,ಶಬೀರ್,ಅಹಮದ್,ನಗರ.
5. 48885,ಅನು,ತೀರ್ಥಹಳ್ಳಿ.
ಸಮಧಾನಕರ ಬಹುಮಾನ.(ರೂ.5000)
1.98796,ವಿಭಾ ತೀರ್ಥಹಳ್ಳಿ.
2.18043,ಪ್ರಭಾ,ತೀರ್ಥಹಳ್ಳಿ
3.124442,ಈಶ್ವರ,ಬಾಳಗಡಿ.
4.38328,ಸತ್ಯನಾರಾಯಣ, ಮೇಳಿಗೆ.
5.134714, ವಿಕ್ರಮ್,ರಂಜದಕಟ್ಟೆ
