Categories
ಕರಾವಳಿ

ಕೋಮು ಗಲಭೆ ತಡೆಗೆ ಕೋಮು ಗಲಭೆ ನಿಗ್ರಹ ಪಡೆ!

ಕೋಮು ಗಲಭೆ ತಡೆಗೆ ಕೋಮು ಗಲಭೆ ನಿಗ್ರಹ ಪಡೆ!
– ಸರ್ಕಾರದಿಂದ ನೂತನ ಕಾರ್ಯಪಡೆ ರಚನೆ: ಜೂ.13ಕ್ಕೆ ಚಾಲನೆ
– ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೇವೆ

NAMMUR EXPRESS NEWS
ಕರಾವಳಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋಮುಗಲಭೆಯನ್ನು ತಡೆಗಟ್ಟಿ, ಶಾಂತಿ ಸ್ಥಾಪನೆ ಮಾಡುವ ಉದ್ದೇಶದಿಂದ ಸರ್ಕಾರವು ನೂತನ ಕೋಮು ಗಲಭೆ ನಿಗ್ರಹ ಕಾರ್ಯಪಡೆಯನ್ನು ರಚಿಸಿದೆ.
ಜೂನ್ ಹದಿಮೂರರಿಂದ ಕಾರ್ಯಚರಣೆ ಪ್ರಾರಂಭಿಸಲು ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ. ಸಧ್ಯಕ್ಕೆ ಮಂಗಳೂರಿನ ಕಮಿಷನರ್ ಆಗಿರುವ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಈ ಪಡೆಯ ನೇತೃತ್ವವನ್ನು ವಹಿಸಲಾಗಿದ್ದು, ಮುಂದೆ ಡಿಐಜಿ ದರ್ಜೆಯ ಅಧಿಕಾರಿಗಳು ವಹಿಸಿಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಹದಿಮೂರರಂದು ಈ ಹೊಸ ಕಾರ್ಯಪಡೆಗೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಚಾಲನೆ ನೀಡಲಿದ್ದಾರೆ. ನಕ್ಸಲ್ ನಿಗ್ರಹ ಪಡೆಯಲ್ಲಿದ್ದ 248 ಸಿಬ್ಬಂದಿಗಳನ್ನು ಈ ಕಾರ್ಯಪಡೆಗೂ ನಿಯೋಜಿಸಲಾಗಿದ್ದು, ಇವರೊಂದಿಗೆ ಮೂರು ಕಂಪನಿಗಳನ್ನು ಸಹ ಸೇರಿಸಿಕೊಳ್ಳಲಾಗಿದೆ. ಇದು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಕೋಮು ನಿಗ್ರಹ ಕಾರ್ಯಪಡೆಯ ಪ್ರಧಾನ ಕಛೇರಿಯಾಗಿ ಮಂಗಳೂರು ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.